Posts

Showing posts from June, 2023

Krishnadwaipayana Teertharu

Image
ಇಂದು ಪ್ರಾತಃ ಸ್ಮರಣೀಯರಾದ ಶ್ರೀ ಕೃಷ್ಣದ್ವಯಪಾಯನ ತೀರ್ಥರ  ಅವರ ಸ್ಮರಣೆ ಮಾಡಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ  ಇವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಲಭ್ಯವಿಲ್ಲದಿದ್ದರು ಇವರ ಶಿಷ್ಯರ ಹಾಗೂ ಹರಿದಾಸರ ಕೃತಿಗಳಲ್ಲಿ ಗುರುಗಳ ವ್ಯಕ್ತಿತ್ವ ವರ್ಚಸ್ಸು ಮಹಿಮೆಗಳು ತಿಳಿಯುತ್ತವೆ  ಇವರ ಜನನ ಸುಮಾರು 1619-1669 ಇರಬಹುದು ಶ್ರೀ ಉತ್ತರಾದಿ ಮಠದ ಶ್ರೀ ವೇದವ್ಯಾಸ ತೀರ್ಥರಿಂದ ಯತ್ಯಾಶ್ರಮ ಸ್ವೀಕಾರ ಮಾಡಿದ ಮಹಾನುಭಾವರು ಪೂರ್ವಾಶ್ರಮದಲ್ಲಿ ಎಂದು ವರ್ಷದ ಬಾಲಕರಿರುವಾಗಲೇ ಮಹಾಬಲೇಶ್ವರ ಶ್ರೀ ಕೃಷ್ಣಾನದಿಯ ಉಗಮ ಸ್ಥಾನದಲ್ಲಿ ಪ್ರವಾಹವು ತುಂಬಿ ಹರಿಯುತ್ತಿರುವಾಗ ನದಿಯನ್ನು ದಾಟುವ ಛಲದಿಂದ ಈಜು ಬಿದ್ದರು ಪ್ರವಾಹದ ಸೆಳತಕ್ಕೆ ಕೈಸೊತು ಶ್ರೀ ರಾಮಚಂದ್ರನ ಸ್ಮರಿಸುತ್ತ ನದಿಯನ್ನು ದಾಟಿ ಭವ ಸಾಗರದ ದಡವನ್ನು ಹರಿಸ್ಮರಣೆಯಿಂದ ದಾಟಿ ಭಕುತರನ್ನು ದಾಟಿಸಿದ ಮಹಾನುಭಾವರು  ತಾವು ಉಪಾಸನಾ ಗೈಯುತ್ತಿದ್ದ ಭೀಮಾನದಿಯ ಕೂಸುಮೂರ್ತಿಯಲ್ಲಿ ಕೃಷ್ಣಾ ಸಂಗಮದ ಪರಿಯಂತ ಸುಮಾರು ಐದಾರು ಮೈಲು ಪ್ರದೇಶದಲ್ಲಿ ಸುಂದರವಾದ ತೆಂಗಿನ ತೋಟಗಳನ್ನು ನಿರ್ಮಿಸಿ ತಮ್ಮ ತಪೋಮಯ ಸಾಧನಗಮ್ಯವಾದ ಶ್ರೀವರಾಹದೇವರಿಗೆ ವಿಹಾರಾರ್ಥವಾಗಿ ವ್ಯವಸ್ಥೆ ಮಾಡಿದ್ದರು ಅಷ್ಟೇ ಅಲ್ಲದೆ ತೈಲಾಭ್ಯಂಗಾರ್ಥವಾಗಿ ವರಾಹ ದೇವರನ್ನು ಆಹ್ವಾನಿಸುತ್ತಿದ್ದರು  ಇಲ್ಲಿ ಭೀಮಾನದಿ ದಕ್ಷಿಣಾಭಿಮುಖವಾಗಿ ಹರಿಯುತ್ತಿರುವುದು ಇಲ್ಲಿಯ ಮತ್ತೋಂದು ವಿಶೇಷ  ಇವರ ಭವ್ಯವ...

Varadendra Teertharu

Image
ಶ್ರೀ ಶ್ರೀ ವರದೇಂದ್ರತೀರ್ಥರು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ‌ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಇತಿಹಾಸದಲ್ಲಿ ಶ್ರೀ ವರದೇಂದ್ರಸ್ವಾಮಿಗಳ ಹೆಸರು ಬಹಳ ಪ್ರಖ್ಯಾತವಾದದ್ದು. ಇವರು ಮಹಾನ್‌ ಪಂಡಿತರು.ಪ್ರಸಿದ್ದ ವಾದಿದಿಗ್ವಿಜಯಿಗಳು.ಇವರ ಕಾಲದಲ್ಲಿ ಸಂಸ್ಥಾನವು ಸರ್ವವಿಧದಿಂದಲೂ ಅತ್ಯುನ್ನತ ಸ್ಥಿತಿಗೆ ಬಂದಿತು.ಶ್ರೀಗಳವರ ವ್ಯಕ್ತಿತ್ವ ಬಹಳ ಪ್ರತಿಭಾಪೂರ್ಣವಾದದ್ದು. ಶ್ರೀಗಳವರು ದಕ್ಷಿಣಭಾರತದಲ್ಲೆಲ್ಲ ಸಂಚಾರ ಕೈಗೊಂಡರು. ಇವರ ದಕ್ಷಿಣ ದೇಶದ ಪ್ರವಾಸದಲ್ಲಿ 1774ರಲ್ಲಿ ಸೋಮರಾಜ ಎಂಬುವ ನಾಯಕ ಜಯದ ಸಂವತ್ಸರದ ಆಶ್ವಯುಜ ಶುದ್ಧ ಬಿದಿಗೆಯ ದಿನ ಅನೇಕ‌ ಭೂಮಿಗಳನ್ನು ಕೊಟ್ಟು ಕೃತಾರ್ಥನಾದ. 1769 ರಲ್ಲಿ ವೀರವೆಂಕಟ ತಿರುಮಲರಾಯ ಮತ್ತು ಬಲಾಸತ್‌ಜಂಗ್ ಬಹದೂರ್ ಮೊದಲಾದವರಿಂದ ಶ್ರೀಗಳವರು ಢಾಣಾಪುರ ಮೊದಲಾದ ಗ್ರಾಮಗಳನ್ನು ಪಡೆದರು. ಶ್ರೀಗಳವರು ಲೌಕಿಕದಲ್ಲಿ ಹೇಗೆ ದಕ್ಷರೋ ಹಾಗೆಯೇ ಉದ್ದಾಮ ಪಂಡಿತರೂ ಅಗಿದ್ದರು. ಚತುಃಶಾಸ್ತ್ರ ಪಂಡಿತರಾಗಿ ದಾಸಾಗ್ರಣಿಗಳೆಂದು ಪ್ರಖ್ಯಾರತಾದ ಶ್ರೀ ಜಗನ್ನಾಥದಾಸರು ಶ್ರೀಗಳವರಲ್ಲಿ ವ್ಯಾಸಂಗ‌ಮಾಡಿದವರು. ಶ್ರೀಗಳವರ ಸ್ತೋತ್ರ ರೂಪವಾಗಿ ಅವರು ವರದೇಂದ್ರ ಪಂಚರತ್ನಮಾಲಿಕೆ ಎಂಬ ಕವಿತೆಯನ್ನು ರಚಿಸಿದರು. ಶ್ರೀಗಳವರು ದಾಸಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟರು.ಹಿಂದೆ ಚಂದ್ರಿಕಾಚಾರ್ಯರರ ಕಾಲದಲ್ಲಿ ಆ ಸಾಹಿತ್ಯ ಹೇಗೆ ಪೋಷಿತವಾಯಿತೋ ಹಾಗೆ ಈಗ ಇನ್ನೊಮ್ಮೆ  ದಾಸ ಸಾಹಿತ್ಯ ಪುನರುಜ್ಜೀ...

Jamakhandi Vadirajacharyaru

Image
 || ಶ್ರೀ ಭಾವಿಸಮೀರ ವಾದಿರಾಜ ಗುರುಭ್ಯೋ ನಮ: || ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು (1842 - 1896) (ಶ್ರೀ ಇಭವರದವಿಠಲ ದಾಸರು) ಆರಾಧನೆ - ಶ್ರಾವಣ ಬಹುಳ ತ್ರಯೋದಶಿ ಅವತಾರದ ಕೊನೆಯ ಸ್ಥಳ  - ಹಂಪಿ (ಶ್ರೀ ರಘುನಂದನ ತೀರ್ಥರ ಬೃಂದಾವನದ ಹತ್ತಿರ ಸ್ಥಳದಲ್ಲಿ) ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ: | ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ || ಶ್ರೀ ಜಂಬುಖಂಡಿ ವಾದಿರಾಜಾರ್ಯರು 19ನೇ ಶತಮಾನದ ಮಹಾನ್ ಅಪರೋಕ್ಷ ಜ್ಞಾನಿಗಳು. ಶ್ರೀ ವಾದಿರಾಜರ ಋಜುತ್ವ ಸಮರ್ಥನೆಯ ಮಹಾನ್ ಸೇನಾನಿಗಳು . ತಮ್ಮ ದೀರ್ಘಾವಧಿಯಲ್ಲಿ ಅನೇಕ ಸಾಧನೆ, ಮಹಿಮೆ ಹಾಗು ಜ್ಞಾನದ ಲಹರಿಯನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ.  ಶ್ರೀ ಆಚಾರ್ಯರು, ಆಷಾಢ ಬಹುಳ ಪಂಚಮಿಯಂದು ಧಾರವಾಡ ಜಿಲ್ಲೆಯ ಹಾನಗಲ್ಲು  ಎನ್ನುವ ಸ್ಥಳದಲ್ಲಿ ಆವತಾರ ಮಾಡಿದ್ದಾರೆ. ಆಚಾರ್ಯರ ವಿದ್ಯಾಭ್ಯಾಸ: ಶ್ರೀ ಆಚಾರ್ಯರು ತಮ್ಮ ವಿದ್ಯಾಭ್ಯಾಸವನ್ನು 20 ವರ್ಷಗಳ ಕಾಲ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠ ಶ್ರೀ ವಿದ್ಯಾಧೀಶ ತೀರ್ಥರ  ಹಾಗು ಶ್ರೀ ಸತ್ಯಪರಾಕ್ರಮ ತೀರ್ಥರ ಬಳಿ ಮಾಡಿದ್ದಾರೆ. ಶ್ರೀ ಆಚಾರ್ಯರ ಸಮಕಾಲಿನರು: ಶ್ರೀ ರಘುಪ್ರವೀರ ತೀರ್ಥರು , ಶ್ರೀ ವೃಂದಾವನಾಚಾರ್ಯರು, ಶ್ರೀ ವಿಶ್ವಾಧಿಶ ತೀರ್ಥರು  , ಶ್ರೀ ಸುಜನೇಂದ್ರ ತೀರ್ಥರು, ಶ್ರೀ ಸುಜ್ಞಾನೇಂದ್ರ ತೀರ್ಥರು, ಶ್ರೀ ಸುಧರ್ಮೇಂದ್ರ ತೀರ್ಥರು, ಶ್ರೀ ಸತ್ಯಪರಾಯಣ ತೀರ್ಥರು, ಶ್ರೀ ...

Vijayeendra Teertharu

ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ತ್ರಯೋದಶಿ , ಶ್ರೀಸುರೇಂದ್ರತೀರ್ಥರ ವರ ಕುಮಾರರು ದ್ವೈತ ಮತದ ಧೃವ ತಾರೆ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರ ಆರಾಧನೆ , ಕುಂಭಕೋಣಂ ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ | ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮಃ || ಪದವಾಕ್ಯಪ್ರಮಾಣಜ್ಙಾನ್ ಸೊಶಿಲ್ಯಾದ್ಯುಪಸೇವಿತಾನ್ | ವಿಜಯೀಂದ್ರಯತೀಂದ್ರಾಖ್ಯಾನ್ ಸೇವೆ ವಿದ್ಯಾಗುರೂನ್ಮಮ || – ಶ್ರೀಕಂಭಾಲೂರು ರಾಮಚಂದ್ರತೀರ್ಥರು ಸ್ವದರ್ಶನೋಕ್ತದೂಷಣಂ ನಿರಾಕರಿಷ್ಣುರಂಜಸಾ | ಜಯೀಂದ್ರಯೋಗಿರೂಪತsವತೀರ್ಣ ಏಷ ಪೂರ್ಣಧೀಃ || – ಶ್ರೀ ಅಪ್ಪಯ್ಯ ದೀಕ್ಷೀತರು ವಿಜಯೀಂದ್ರಸಭಾಸ್ತಾರೇ ತ್ವಯ್ಯರ್ಕೇ ಪ್ರತಿಪದ್ಯತೇ | ತಾರತ್ವಂ ಪ್ರಸಭಾಸ್ತಾರೇ ವಿಮತೋsಪ್ರತಿಪದ್ಯತೇ || – ಶ್ರೀಸುಧೀಂದ್ರತೀರ್ಥರು ಚತುಃಷಷ್ಟೀವಿದ್ಯಾಜುಷೇ ವಿದ್ವನ್ಮಹೋಮುಷೇ | ಜಯೀಂದ್ರಜ್ಯೋತಿಷೇ ಕುರ್ಯಾಂ ವಂದನಾನಿ ಯಶೋಜುಷೇ || – ಮಹಾಕವಿ ನಾರಾಯಣಾಚಾರ್ಯರು, ಶ್ರೀರಾಘವೇಂದ್ರವಿಜಯ ಜನುರ್ಜನುರನಾರತಂ ಜಗತಿ ಚಾತುರೀ ಚಾತುರೀ ಮತಿರ್ಮತಿರಖಂಡಿತಾ ಸದಸಿ ಮೌಖರೀ ಮೌಖರೀ | ಕೃತಿಃ ಕೃತಿರಿತೋ ಜನಾಃ ಶೃಣುತ ಪಾಂಡಿತಿಂ ಪಾಂಡಿತಿಂ ಜಯೀಂದ್ರ ವಿಜಯೀಂದ್ರ ಸಚ್ಚರಿತ ವಂದಿ ಕರ್ಮಂದಿನಾಂ || – ಶ್ರೀಸುಮತೀಂದ್ರತೀರ್ಥರು, ಮಧುಧಾರಾಕಾರರು ಚಾತುರ್ಯೈಕಾಕೃತಿರ್ಯಶ್ಚತುರಧಿಕಶತ ಗ್ರಂಥರತ್ನಪ್ರಣೇತಾ ಧೂತಾರಾತಿಪ್ರಬಂಧ ಸ್ಪುಟವಿದಿತಚತುಃಷಷ್ಟಿವಿದ್ಯಾವಿಶೇಷಃ | ಸೋsಯಂ ನಶ್ಶ್ರೀಸುರೇಂದ್ರ ವ್ರತಿವರತನಯೋsಧ್ವೈತಶೈವಾಸಹಿಷ್ಣುಃ ...

Madhwa Sampradaya

ಮಾಧ್ವ ಸ೦ಪ್ರದಾಯದ ಸೂತ್ರಗಳು  1. ಬೆಳಿಗ್ಗೆ ಉಷ:ಕಾಲಕ್ಕೆ ಏಳುವುದು ಒ೦ದು ಸಾಧನೆ, ಎದ್ದ ತಕ್ಷಣ ಮುಖ ತೊಳೆದು ತುಳಸೀಗಿಡಕ್ಕೆ ನೀರು ಹಾಕಿ  ಮೃತ್ತಿಕೆಯನ್ನು ಹಣೆಯಲ್ಲಿ (ಲಲಾಟ) ಹಚ್ಚಿಕೊಳ್ಳುವುದು ಒ೦ದು ಸಾಧನೆ. 2. ನ೦ತರ ಗೋಸ್ಮರಣೆ, ನವಗ್ರಹ ಸ್ಮರಣೆ ಮಾಡಿ ಸ್ನಾನಕ್ಕೆ ಹೋಗುವುದೊ೦ದು ಸಾಧನೆ. ಸ್ನಾನವನ್ನು ಸ೦ಕಲ್ಪ ಮಾಡಿ ಮಾಡುವುದು ಸಾಧನೆ. ಇಲ್ಲದಿದ್ದರೆ ಅದು ಕಾಗೆ ಸ್ನಾನ ಫಲವಿಲ್ಲ. ವಿ.ಸೂ : - ಯಾವ ಯಾವ ಸಾಧನೆಯಿ೦ದ ಎಷ್ಟೆಷ್ಟು ಪುಣ್ಯ ಬರುತ್ತದೆ ಎಷ್ಟೆಷ್ಟು ಪಾಪ ಬರುತ್ತದೆ ಎ೦ಬುದನ್ನ ತಿಳಿಯಲು ಯಾವ ಮಾಪಕಗಳಿಲ್ಲ, ಇದು ನಿಜ, ಹಾಗೂ ಸತ್ಯ, ಆದರೆ ಸಾಧಕರು ತಮ್ಮ ಒಳಿತಿಗೋಸ್ಕರವಾಗಿ ಸತ್ಕರ್ಮಗಳನ್ನೇ ಮಾಡಬೇಕು. ಸತ್ಕರ್ಮ ಮಾಡುವಾಗ ವಿಸ್ಮರಣೆಯಿ೦ದ ಮಾಡಿದರೆ ಪಾಪದ ಫಲ ಎನ್ನುತ್ತಾರೆ. ಸ್ಮರಣಪೂರ್ವಕ ಮಾಡಿದರೆ ಪುಣ್ಯ ಎ೦ಬುದು ಜ್ಞಾನಿಗಳ ಮಾತು, ಇದರಲ್ಲಿ ನ೦ಬಿಕೆ ಪ್ರಾಮುಖ್ಯತೆ ಪಡೆದುಕೂಳ್ಳುತ್ತದೆ. 3. ತ್ರಿಕಾಲ ಸ೦ಧ್ಯಾ, ಜಪ, ತಪ, ಪಾರಾಯಣ ಸಾಧನೆ. 4. ದೇವರಪೂಜೆ ಕಡ್ಡಾಯ ಇದು ಒ೦ದು ಪ್ರಮುಖ ಸಾಧನೆ.  5. ದೇವರ ನೈವೇದ್ಯ, ವೈಶ್ವದೇವ ಹಸ್ತೋದಕ ಕಡ್ಡಾಯ ಇದನ್ನು ಅರಿತು ಮಾಡಲು ಪ್ರಯತ್ನಿಸಬೇಕು. 6. ದಿನದಿನಕ್ಕೂ ಶ್ರೀಹರಿಯ ವಿಚಾರ ತಿಳಿಯಲು ಉತ್ಸುಕತೆ ಇರುವುದು ಉತ್ತಮ ಸಾಧನೆ, ಜ್ಞಾನಕಾರ್ಯ ಎಲ್ಲೆ ನಡೆದರೂ ಪ್ರಯತ್ನಿಸಿ ಹೋಗುವುದು ಸಾಧನೆ. ನವವಿಧ ಭಕ್ತಿಯಲ್ಲಿ ಶ್ರವಣವೇ ಮೊದಲು, ಶ್ರವಣದಿ೦ದಲೇ ಉತ್ತಮ ಸಾಧನೆ. ನಮ...

Pitru paksha - Mahalaya

ಪಿತೃದೇವತೆಗಳ ಋಣ ತೀರಿಸುವ ಪರ್ವವೇ ಮಹಾಲಯ ಪಿತೃಪಕ್ಷ ಆರಂಭವಾಗಿದೆ. ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ.  ಪ್ರತಿಪತ್ನಿಂದ ಶುರುವಾಗಿ ಮಹಾಲಯ ಅಮಾವಾಸ್ಯೆ ದಿನ ಕೊನೆಗೊಳ್ಳುತ್ತದೆ. ಹಿರಿಯರು ನಮ್ಮನ್ನು ಬಿಟ್ಟು ಭೌತಿಕವಾಗಿ ದೂರವಾದರೂ ಅವರನ್ನು ನೆನಪಿಸಿಕೊಂಡು ಗೌರವ ಸಲ್ಲಿಸುವ ಪದ್ದತಿ ಭಾರತೀಯ ಪರಂಪರೆಯಲ್ಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಇಹ ಪರ ಸೌಖ್ಯಗಳಿಗೆ ಸಮಾನವಾದ ಪ್ರಾಧಾನ್ಯ ವನ್ನು ನಮ್ಮ ಸ್ಮೃತಿಕಾರರು ನೀಡಿದ್ದಾರೆ. ನಮ್ಮಿಂದ ದೂರವಾದ ಹಿರಿಯರನ್ನು ನೆನೆದು ಅವರಿಗೆ ಗೌರವ ಸಲ್ಲಿಸುವ ಸಂಪ್ರದಾಯ ಜಗತ್ತಿನ ಹಲವು ದೇಶಗಳಲ್ಲಿ ರೂಢಿಯಲ್ಲಿದೆ. ಹುಟ್ಟಿದ ಪ್ರತಿಯೊಬ್ಬ ಮಾನವನಿಗೂ ಮೂರು ಬಗೆಯ ಕರ್ತವ್ಯಗಳಿವೆ. ವೇದಗಳ ಮೂಲಕ ನಮಗೆ ಆಧ್ಯಾತ್ಮಿಕ ಜ್ಞಾನ ಕರುಣಿಸಿದವರು ಋಷಿಗಳು, ನಾವು ಅವರು ನೀಡಿದ ಜ್ಞಾನದ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಪ್ರತಿಫಲಾಪೇಕ್ಷೇ ಯಿಲ್ಲದೆ ಇನ್ನೊಬ್ಬರಿಗೆ ನೀಡುವ ಕರ್ತವ್ಯ ವನ್ನು ಹೊಂದಿದ್ದೇವೆ. ಇದನ್ನು ಮಾಡಿದಾಗ ಮಾತ್ರವೇ ನಾವು ಋಷಿ ಋಣದಿಂದ ಮುಕ್ತರಾಗಬಹುದು. ನಾವು ತಂದೆ-ತಾಯಿ, ಗುರು ಹಿರಿಯರಿಗೆ ಮಾಡುವ ಸೇವೆ, ಪರೋಪಕಾರ, ಪೂಜೆ ಮೊದಲಾದ ಸತ್ಕರ್ಮಗಳು ಯಜ್ಞಗಳೆನಿಸಿವೆ. ಇವುಗಳಿಂದ ದೇವತೆಗಳು ಸಂತುಷ್ಟರಾಗುವರು. ಈ ಕರ್ಮಾನುಷ್ಠಾನದಿಂದ ನಾವು ದೇವಋಣದಿಂದ ಮುಕ್ತರಾಗುತ್ತೇವೆ.ಇದರಂತೆ ಪುಣ್ಯ ಕರ್ಮಗಳ ಅನುಷ್ಠಾನದ ಮೂಲಕ ಸಾತ್ವಿಕವಾದ ಹಾಗು ದೇಶಭಕ್ತ...

Garuda Devaru

ವಿಷ್ಣುವಿನ ವಾಹನವಾದ ಗರುಡ ಯಾರು..? ಇದೊಂದು ಅಚ್ಚರಿಯ ಕಥೆ..!            ‌          ‌                                                                                                                                                               ಋಷಿ ಕಶ್ಯಪ ಅನೇಕ ಪತ್ನಿಯರನ್ನು ಹೊಂದಿದ್ದನು. ಅವರಲ್ಲಿ ಇಬ್ಬರು ವಿನತಾ ಮತ್ತು ಕದ್ರು. ಈ ಇಬ್ಬರೂ ಸಹೋದರಿಯರು ಪರಸ್ಪರ ಅಸೂಯೆಯ ಭಾವನೆಯನ್ನು ಹೊಂದಿದವರಾಗಿದ್ದರು. ಇಬ್ಬರಿಗೂ ಮಕ್ಕಳಿರಲಿಲ್ಲ, ಆದ್ದರಿಂದ ಪತಿ ಕಶ್ಯಪ ಇಬ್ಬರಿಗೂ ಸಂತಾನ ಭಾಗ್ಯದ ವರವನ್ನು ನೀಡಿದನು. ವಿನತಾ ಎರಡು ಶಕ್ತಿಶಾಲಿ ಪುತ್ರರನ್ನು ಕೇಳಿದಳು ಮತ್ತು ಕದ್ರು ಮೊಟ್ಟೆಯ ರೂಪದಲ್ಲಿ ಹುಟ್ಟುವ ಸಾವಿರ ನಾಗಪುತ್ರರನ್ನ...

Shaka Vrata Adige

*ಚಾತುರ್ಮಾಸ ಮೊದಲನೆ  ವೃತದ ಅಡುಗೆ ವಿಚಾರ* ಚಾತುರ್ಮಾಸ ಬಂತೆಂದರೆ ಕೆಲವರು ಮೊದಲ ತಿಂಗಳದ ಅಡುಗೆ ಹೇಗೆ ಮಾಡೋದು, ರುಚಿಯಾಗಿ ಇರಬೇಕು, ಎಲ್ಲರೂ ಇಷ್ಟ ಪಟ್ಟು ತಿನ್ನುವ ಹಾಗೆ ಹೇಗೆ ಮಾಡೋದು ಎಂಬ ಚಿಂತೆ ಮಾಡುತ್ತಾರೆ ಆದರೆ ಹಾಗಲ್ಲ.ನಾವು ಭಗವಂತನ ಅನುಯಾಯಿಗಳು.ನಮ್ಮ ಗುರುಗಳ ಸಿಧ್ಧಾಂತಕ್ಕೆಧಕ್ಕೆ ಬಾರದಂತೆ ನಡಿಯುವ ಕ್ರಮ ನಮ್ಮದು.ಮೊದಲ ತಿಂಗಳು ಪಲ್ಯಕಾಯಿಗಳು ಬರುವುದಿಲ್ಲ.ಎಲ್ಲ ತರಹದ ಬೇಳೆ ಕಾಳು ಬರುತ್ತವೆ. ಕಟ್ಟು :- ಬ್ಯಾಳಿಗೆ ಸ್ವಲ್ಪ ನೀರು ಜಾಸ್ತಿ ಹಾಕಿ ಕುಚ್ಚಿ ನೀರು ಬಸಿಬೇಕು.ಅದಕ್ಕೆ ಬೆಲ್ಲ ಸ್ವಲ್ಪ ಉಪ್ಪು ಜಿರಗಿ ಒಗ್ಗರಣೆ. ಹಿಟ್ಟು :- ಪುಟಾಣಿ ಹಿಟ್ಟು ಅಥವಾ ಕಡ್ಲಿ ಹಿಟ್ಟು ಮೊಸರಿನಲ್ಲಿ ಕಲಿಸಿ ಇದಕ್ಕೂ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು. ಹೆಸರಕಾಳು_ಪಲ್ಲೆ :- ಹೆಸರಕಾಳನ್ನ ಬೆಯಸಿ ಅದಕ್ಕೆ ಉಪ್ಪು ಜಿರಗಿ ವಗ್ಗರಣಿ ಕೊಡಬೇಕು. ಸಂಡಗಿ_ಪುಡಿ:- ಕಡ್ಲಿಬ್ಯಾಳಿ ನೆನಿಹಾಕಬೇಕು ಎರಡು ತಾಸು ನೆನದ ಮೆಲೆ ಬಸಿಹಾಕಿ ಅದನ್ನು ಒರಟು ಒರಟಾಗಿ ರುಬ್ಬಬೇಕು. ಅದಕ್ಕೆ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು. ಎಲ್ಲದಕ್ಕೂ ಖಾರದ ಪುಡಿ ಬದಲಾಗಿ ಕರಿಮೆಣಸಿನ ಪುಡಿ (ಅರ್ದ ಚಮಚ) ಹಾಕಬೆಕು. ಇತರೆ ಇದೆ ವೃತದಲ್ಲಿ ಮಾಡುವ ಅಡುಗೆಗಳು. 1) ಹೆಸರು ಬೇಳೆ ತವ್ವೆ ಪಾಯಸ ಮಾಡಬಹುದು. 2) ಹಯಗ್ರೀವ ಮಾಡಬಹುದು. 3) ರಾಗಿ  ಹಿಟ್ಟಿನ ರೊಟ್ಟೆ,ಮೆಣಸು ಜೀರಿಗಿ ಪುಡಿಉಪ್ಪು ಸೀರಿಸಿ ಮಾಡಬಹುದು. 4) ಜೋಳ ಭಕ್ಕರೆ, ಗೋದಿ ಚಪಾತಿ ಇವಕ್ಕೆ ...

Chaturmasya mahiti

 ಚಾತುರ್ಮಾಸ ಮನುಷ್ಯಮಾನದ ಒಂದು ವರ್ಷವು ದೇವತೆಗಳಿಗೆ ಒಂದು ದಿನ (ಅಹೋರಾತ್ರ). ಉತ್ತರಾಯಣವು ದೇವತೆಗಳ ಹಗಲು ಮತ್ತು ದಕ್ಷಿಣಾಯಣವು ರಾತ್ರಿ. ಸೂರ್ಯನ ಕರ್ಕರಾಶಿ ಪ್ರವೇಶದೊಂದಿಗೆ ದಕ್ಷಿಣಾಯಣವು ಪ್ರಾರಂಭವಾಗುತ್ತದೆ. ದಕ್ಷಿಣಾಯಣವು ಆರು ತಿಂಗಳುಗಳ ಕಾಲವಿರುತ್ತದೆ. ಈ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶೀಯಿಂದ ನಾಲ್ಕು ತಿಂಗಳುಗಳಷ್ಟು ಕಾಲವನ್ನು ದೇವತೆಗಳು ನಿದ್ರಿಸುವ ಸಮಯವೆಂದು ಕರೆಯಲಾಗಿದೆ. ಈ ನಾಲ್ಕು ತಿಂಗಳುಗಳ ಕಾಲ ಆಚರಿಸಲಾಗುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ. ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ.  ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಶಯನೀ ಏಕಾದಶೀಯೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದ ಶುಕ್ಲೈಕಾದಶೀಯಂದು ಪರಮಾತ್ಮನು ನಿದ್ರೆಯಿಂದ ಎಚ್ಚರಗೊಳ್ಳುವುದರಿಂದ ಅಂದು ಜಾಗರೋತ್ಸವ ಅಥವಾ ಪ್ರಬೋಧೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಉತ್ಥಾನ ಏಕಾದಶೀ ಅಥವಾ ಪ್ರಬೋಧಿನಿ ಏಕಾದಶೀ ಎಂದು ಕರೆಯಲಾಗುತ್ತದೆ.  ಚಾತುರ್ಮಾಸ ವ್ರತ ಎಲ್ಲರಿಗೂ ವಿಹಿತ- ಚಾತುರ್ಮಾಸ ವ್ರತವು ಮಹಾಪುಣ್ಯಪ್ರದವಾಗಿದ್ದು ಇದರ ಆಚರಣೆಯಿಂ...

Bhagawadgeeta Saara

ಶ್ರೀ ವ್ಯಾಸರಾಯರು ರಚಿಸಿದ ಭಗವದ್ಗೀತಾಸಾರ   ರಾಗ ರೇವತಿ  ಕೇಳಯ್ಯ ಎನ್ನ ಮಾತ ಪಾರ್ಥನೆ ಗೀತಾದರ್ಥನೆ ॥ ಪ ॥ ಶ್ಲೋಕ ಕುರುಕ್ಷೇತ್ರದಿ ಎನ್ನವರು ಪಾಂಡವರು । ಪೇಳೋ ಸಂಜಯ ಏನು ಮಾಡುವರು ಕೂಡಿ । ಕೇಳೈ ಅರಸನೇ ನೋಡು ಪಾಂಡವರ ಸೇನಾ । ಮಾತಾಡಿದ ನಿನ್ನ ಸುತಗೆ ದ್ರೋಣ ನಿಂತು ॥ ಪದ ಕೇಳಿ ತಾ ಪಾರ್ಥನು ಕುರು ದಂಡ ರಣದಲಿ ಚಂಡ । ಗಾಂಡೀವ ಕರದಂಡ ॥ ಅಚ್ಯುತ ಪಿಡಿರಥ ನಡೆ ಮುಂದ ನಡೆ ಮುಂದ ಬಹು ತ್ವರದಿಂದ । ನೋಡುವೆ ನೇತ್ರದಿಂದ ॥ ಗುರುಹಿರಿಯರ ಕೂಡ ಯಾಕಂದ ಯುದ್ಧ ಸಾಕೆಂದ । ಭಿಕ್ಷವೆ ಸುಖವೆಂದ ॥ ಕುಂತಿಸುತ ಈ ಮಾತು ಉಚಿತವಲ್ಲ ನಿನಗಿದು ಸಲ್ಲ । ಪಿಡಿ ಗಾಂಡೀವ ಬಿಲ್ಲ ॥ 1 ॥ ಶ್ಲೋಕ ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ ಇಂಥ ದೇಹಕೆ ಮೋಹ ಮತ್ತ್ಯಾತಕಿಲ್ಲಿ । ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ ಬಿಲ್ಲು ಪಿಡಿದು ಕೀರ್ತಿ ಪಡೆ ಲೋಕದಲ್ಲಿ ॥ ಪದ ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ ಈ ದೇಹಕ್ಕೆ । ಪಾವಕನ ದಾಹಕ್ಕೆ । ಉದಕಗಳಿಂದ ವೇದನೆ ಯಾಕೆ  ಈ ಜೀವಕ್ಕೆ । ಮಾರುತದ ಶೋಷಕ್ಕೆ ನಿತ್ಯ ಅಭೇದ್ಯ ತಾ ಜೀವನ ಸನಾತನ । ವಸ್ತ್ರದ್ಹಾಂಗೆ ಈ ತನವು । ಆದಾವು ಪೋದಾವು ನಿನಗಯ್ಯ । ಅದನಾ ಬಲ್ಲೆನಯ್ಯಾ ॥ ೨ ॥ ಶ್ಲೋಕ ಜ್ಞಾನ ದೊಡ್ಡದು ಕರ್ಮಬಂಧವ ಬಿಟ್ಟು ಕರ್ಮ ಬಿಟ್ಟರೆ ಪ್ರತ್ಯವಾಯವಿಷ್ಟು । ಫಲ ಬಿಟ್ಟು ನೀ ಮಾಡು ಕರ್ಮಂಗಳ ಸಮ ದೇಹಕೆ ಫಲ ಕರ್ಮ ಕಾರಣವಲ್ಲ ॥ ಪದ ಕರ್ಮದಲ್ಲೆ ನಿನಗಧಿಕಾರ ಫಲ ತಾ ದೂರ । ಧನಂಜಯಗೋಸ್ಕರ। ಜ್ಞಾನ ದೊ...

Yagnopavitha

 """"""""" ಯಜ್ಞೋಪವೀತ (ಜನಿವಾರ)"""''"" ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ: ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ. "ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ...

Dhanur Masa mahatme

ಧನುರ್ಮಾಸದ ಮಹತ್ವ  ಮಾರ್ಗಶಿರ ಮಾಸದಲ್ಲಿ ಧನುರಾಶಿಗೆ ಸೂರ್ಯನು ಪ್ರವೇಶಿಸುವನು.ಧನುರಾಶಿಗೆ ಸೂರ್ಯನ ಪ್ರವೇಶವನ್ನು ಧನುರ್ಮಾಸ ಎನ್ನಲಾಗಿದೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ .ಉತ್ತರಾಯಣವು ಹಗಲಾಗಿದೆ.ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವಾಗಿದೆ.ದೇವತೆಗಳು ಅರುಣೋದಯಕಾಲದಲ್ಲಿ ಭಗವಂತನಿಗೆ   (ಹುಗ್ಗಿ )ಮುದ್ಗಾನ್ನ  ವನ್ನು ನಿವೇದಿಸುವರು  ಧನುರ್ಮಾಸದಲ್ಲಿ ದೇವರಿಗೆ ಮುದ್ಗಾನ್ನ (ಹುಗ್ಗಿ)ನೈವೇದ್ಯದ ಮಹತ್ವ ನೀವೇದಯನ್  ಮೇ  ಮುದ್ಗಾನ್ನಂ ಸ ವೈ ಭಾಗವತೋತ್ತಮಃ ಕೋದಂಡಸ್ಥೆ  ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ ಧನುರ್ಮಾಸದಲ್ಲಿ ಯಾರು ಒಂದು ತಿಂಗಳ ಕಾಲ ,ಅರಣೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ  ಹುಗ್ಗಿಯ ನೈವೇದ್ಯವನ್ನು ಮಾಡಿ ಭಗವಂತನನ್ನು ಪೂಜಿಸುವನೊ ಅವನು ಭಾಗವತೋತ್ತಮನೆನಿಸುವನು .ಈ ಪೂಜೆಯಿoದ ಪೂಜಕನಿಗೆ ಸಾವಿರವರ್ಷ ಪೂಜಾಫಲವು ಲಭಿಸುತ್ತದೆ. ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ ಅಧಮಾ ಸೂರ್ಯಸಹಿತಾ ಮದ್ಯಾಹ್ನೇ ನಿಷ್ಫಲಾ ಭವೇತ್ ಧನುರ್ಮಾಸದ ಪೂಜಾ ಸಮಯ ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ  ಆಚರಿಸುವುದು ಉತ್ತಮ ಪಕ್ಷವಾಗಿದೆ. ನಕ್ಷತ್ರಗಳು ಕಾಣಿಸದ ಸ್ವಲ್ಪ ಮುoಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ  ಮಾಡಿದ ಪೂಜೆಯು ಅ...

Dhanvantri Mahatme

" ಶ್ರೀ ಧನ್ವಂತರೀ ಸ್ತುತಿ " ಶ್ರೀಮದ್ಭಾಗವತ... ಧನ್ವಂತರೀ ದೀರ್ಘತಮಸ ಆಯುರ್ವೇದ ಪ್ರವರ್ತಕಃ । ಯಜ್ಞಭುಗ್ವಾಸುದೇವಾಂಶ: ಸ್ಮೃತಿಮಾತ್ರಾತ್ರಿ ನಾಶನಃ ।। ದೀರ್ಘ ತಮಸ್ ಎಂಬುವನಿಂದ " ಧನ್ವ " ನೆಂಬಾತ ಹುಟ್ಟಿದ. ಈ ಧನ್ವನ ಮಗನಾಗಿ ಆಯುರ್ವೇದ ಪ್ರವರ್ತಕನೂ; ಸರ್ವ ಯಜ್ಞ ಭೋಕ್ತನೂ; ವಾಸುದೇವಾಂಶನಾದವನೂ; ತನ್ನ ಸ್ಮಾರಣೆ ಮಾತ್ರದಿಂದಲೇ ರೋಗಾದಿ ಸಕಲ ದುಃಖ ನಾಶಕನಾದ "ಧನ್ವಂತರೀ " ದೇವನು ಅವತರಿಸಿದನು! ಈ ವಿಷಯವು " ಹರಿವಂಶ " ದಲ್ಲಿ... ಧನ್ವಸ್ತು ದೀರ್ಘತಮಸಃ ವಿದ್ವಾನ್ ಧನ್ವಂತರೀಸ್ತತಃ ।। ಶ್ರೀ ದುರ್ವಾಸರ ಶಾಪದಿಂದ ಇಂದ್ರಾದಿ ದೇವತೆಗಳು ದೈತ್ಯರಿಂದ ಪರಾಜಿತರಾಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಮೊರೆಹೊಕ್ಕರು. ಶ್ರೀ ಚತುರ್ಮುಖ ಬ್ರಹ್ಮದೇವರು ದೇವತೆಗಳೊಂದಿಗೆ ಶ್ರೀ ಹರಿಯನ್ನು ಮೊರೆಹೊಕ್ಕು ಪ್ರಾರ್ಥಿಸಿದಾಗ.. " ಅಹಿ - ಮೂಷಕ " ನ್ಯಾಯವನ್ನು ಅನುಸರಿಸಿ ದೈತ್ಯರೊಂದಿಗೆ ಸಂಧಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಶ್ರೀ ಹರಿ ಆದೇಶಿಸಿದನು. ಶ್ರೀ ಹರಿಯ ಆದೇಶಾನುಸಾರ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲನ್ನಾಗಿಯೂ; ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ದೇವ - ದೈತ್ಯರು ಒಟ್ಟಾಗಿ ಶ್ರೀ ಹರಿಯೊಂದಿಗೆ ಮಥಿಸಿದಾಗ.. ಕಾಲಕೂಟ ವಿಷ ಕಾಮಧೇನು ಉಚೈಶ್ರವಸ್ ಐರಾವತ ಪಾರಿಜಾತ ಅಪ್ಸರೆಯರು ಶ್ರೀ ಮಹಾಲಕ್ಷ್ಮೀದೇವಿಯರು ಕ್ರಮವಾಗಿ ಪ್ರಾದುರ್ಭೂತರಾದರು. ...

Deva Pooja Sankshipta

ಸಂಕ್ಷಿಪ್ತ ದೇವ ಪೂಜಾ ಪದ್ದತಿಃ ಸ್ನಾನ ಮಾಡಿ ಮಡಿಬಟ್ಟೆಯನ್ನುಟ್ಟು ನಾಮ ಮುದ್ರಾಧಾರಣೆ ಹಾಗೂ ಸಂದ್ಯಾವಂದನೆಯನ್ನು ಮಾಡಿ ದೇವರ ಪೂಜೆಯನ್ನು ಮಾಡಬೇಕು  ಸಂಕಲ್ಪ:- ಆಚಮ್ಯ, ಪ್ರಾಣಾನಾಯಮ್ಯ ದೇಶಕೌಲೌ ಸಂಕೀರ್ತ್ಯ, ಗೋವಿಂದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು  ಪ್ರೀತ್ಯರ್ಥಂ ದೇವತಾಪೂಜಾಂಕರಿ ಷ್ಯೇ||  ವಂದೇ ವಿಷ್ಣು ನಮಾಮಿ ಶ್ರಿಯಮಥ ಚ ಭುವಂ ಬ್ರಹ್ಮವಾ ಯೂ ಚ ವಂದೇ| ಗಾಯತ್ರೀಂ ಭಾರತೀಂ ತಾಮಪಿ ಗರುಮನಂತಂ ಭಜೇ ರುದ್ರದೇವಂ ||  ದೇವಿ ವಂದೇ ಸುಪರ್ಣಿಮಹಿಪತಿದ ಯಿತಾಂ ವಾರುಣೀಮಪ್ಯುಮಾಂತಾಂ | ಇಂದ್ರಾದೀನ್ ಕಾಮಮುಖ್ಯಾನಪಿ ಸಕಲಸುರಾನ್ ತದ್ಗುರೂನ್ ಮದ್ಗುರೂಂಶ್ಚ ||  ದ್ವಾರದೇವತಾಭ್ಯೋನಮಃ|| ಸರ್ವಾರಿಷ್ಟನಿರಶನಮಸ್ತು|| ದೀಪ ಪ್ರಜ್ಚಾಲನ ಮಾಡಿ ಘಂಟೆ ಯನ್ನು ಬಾರಿಸಬೇಕು.  ಶಾಲಿಗ್ರಾಮ  ಶಂಖ  ಪ್ರಾಣದೇವರು  ಗರುಡಶೇಷ ಗುರುಗಳು ಇವುಗಳನ್ನು ಬೇರೆ ಬೇರೆ ತಟ್ಟೆಯಲ್ಲಿ ಇಡಬೇಕು.  ನಿರ್ಮಾಲ್ಯವಿಸರ್ಜನೆ :- {ದೇವರಿಗೆ ಏರಿಸಿದ ಹೂ ತುಳಸಿಗಳ ನ್ನು ತೆಗೆಯುವುದು} ಓಂ ಅಹಂ ರುದ್ರೇ  {ಈ ಮಂತ್ರದಿಂದ}  ನಿರ್ಮಾಲ್ಯಾಭಿಷೇಕ {ಶಾಲಿಗ್ರಾಮಕ್ಕೆ}  ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು ಶಂಖಾಭಿಷೇಕ:- ಹಿರಣ್ಯವರ್ಣಾಂ ಹರೀಣಿಂ {ಈ ಮಂತ್ರದಿಂದ}  ಪ್ರಾಣದೇವರ ಅಭಿಷೇಕ:- ಮಾತರ್ಮೇ ಮಾತರಿಶ್ವನ್ ಪಿತರ ತುಲಗುರೋಭ್ರಾತರಿಷ್ಟಾಪ್ತಬಂಧೋ| ...

Shraddha Mahatwa

" ಶ್ರಾದ್ಧದ ಮಹತ್ವ " " ಶ್ರಾದ್ಧ  " ಯೆಂದರೆ... " ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ " - ಶ್ರದ್ಧೆಯಿಂದ ಆಚರಿಸುವ ಕಾರ್ಯವೇ " ಶ್ರಾದ್ಧ " ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು. ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು " ಪಿತೃ ಯಜ್ಞ " ಎಂದು ಕರೆಯುತ್ತಾರೆ. " ಬ್ರಹ್ಮಾಂಡ ಪುರಾಣ " ದಲ್ಲಿ... ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।। ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು - ಹೊತ್ತು - ಸಾಕಿ - ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ - ತಾಯಿ - ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ - ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ " ಶ್ರಾದ್ಧ " ಎಂದು ಹೆಸರು.   " ಶ್ರಾದ್ಧ ಕಲ್ಪಲತಾ " ದಲ್ಲಿ.... ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ । ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।। ಪಿ...

Sheshadasara Ugabhogagalu

ಮೊದಲಕಲ್ಲು ಶ್ರೀ ಶೇಷದಾಸರ ಉಗಾಭೋಗ  ಗುರು ವಿಜಯರಾಯರಂದು ಸಮ್ಮುಖದಲ್ಲಿ ಬಂದು ಪರಿವ್ಯಾಪ್ತನಾದ ಶ್ರೀಹರಿಯ ವಿವಿಕ್ಷದಿ ಪರಿಪರಿ ವಿಧದಿಂದ ಸ್ತುತಿಸಿ ಪ್ರಾಂತ್ಯದಲ್ಲಿ  ಗುರುವಿಜಯವಿಠಲನ್ನ ಸೇವಕ ನೀನೆಂದು ಕಾರಣದಿಂದ ನಿನಗೆ ಇದೇ ಮುದ್ರಿಕವು ಎಂಬ  ತೆರವಾದ ಸಂಜ್ಞವೆಂದು ಸೂಚಿಸಿದಿ ಪರಮ ಧನ್ಯನಾದೆ ಗುರು ವಿಜಯದಾಸರಿಗೆ  ಚರಣ ಸೇವಕನಾದೆ ನಿನ್ನ ದಯದಿ  ಗುರುಗಳ ದ್ರೋಹದಿಂದ ಮುಕ್ತನಾಗಿ ನಿನ್ನ ಕುರುಹು ಕಾಣುವ ಅಧಿಕಾರಿಯಾದೆ ಪರಿಪೂರ್ಣ ಕೃಪಾನಿಧೆ ಗುರುವಿಜಯವಿಠಲ ನಿನ್ನ  ಕರುಣದ ಫಲವಿದೆ ಬಾಳಿದದಕೆ.॥ ದೈತ್ಯನ್ನ ವಧೆಗಾಗಿ ಶಪಥ ಮಾಡಲಾಗಿ ಕೃತ್ತಿವಾಸನ ದ್ವಾರ ಕೃಪೆಯ ಮಾಡಿ ಕತ್ತಲೆಗೈಸಿ ಶಿರ ಕಿತ್ತಿ ಚಂಡಾಡಿಸಿ ಭಕ್ತನ ಪ್ರತಿಜ್ಞೆಕ್ಕೆ ಗೆಲೆಸಿದಂಥ ಸತ್ಯವಾದ, ರೂಢಿ ತ್ರಿಜಗವು ಬಲ್ಲದು ಪೃಥ್ವಿಪಾಲಕನಾದ ಸಾರ್ವಭೌಮನು ಪರಮ- ರಿಕ್ತ ಅನುಭವ ಪೇಳಿ ಹಿಗ್ಗುವಂತೆ ಉತ್ತಮೋತ್ತಮ ನಿನ್ನ ಇನಿತು ತಿಳಿದು ಭಕ್ತಿಯಿಲ್ಲದೆ ಸಥೆಯಿಂದ ನುಡಿದಂಥ ಉಕ್ತಿಗೆ ವ್ಯಾಹತಿ ತಂದದಕ್ಕ ನಿನ್ನ ಮಿತ್ರತ್ವ ಏನುಂಟು ಇದರೊಳಗೆ ಭೃತ್ಯರ ಅಭಿಮಾನ ಕಾಯದಿದ್ದರೆ ಒಡೆಯ ಕೀರ್ತಿಯೈದುವೆನೇನೋ ಮಾನ್ಯನಾಗಿ ಸತ್ಯಸಂಕಲ್ಪ ಗುರುವಿಜಯವಿಠಲರೇಯ  ಈ ತೆರದಲಿ ಮಾಡದಲಿರು ಎಂದಿಗನ್ನ॥ ಇನ್ನೆಷ್ಟು ಕಾಲಕ್ಕು ಮರಿಯಾದಂತೆ ಮಾಡಿಸಿದಿ ಉನ್ನತಮಹಿಮ ನಿನ್ನ ಇಚ್ಛಕ್ಕೆ ಯದಿರಾರೊ ಇನ್ನಾದರೂ ಕೃಪೆಯಿಂದ ನೋಡದಿರೆ ಘನ್ನವಾದ ದುಃಖದಿಂದ ಕಡಿಗೆ ಐದುವಿನೆಂತೊ ಚ...

Tayi Gopiyante Ninna

ತಾಯಿ ಗೋಪಿಯಂತೆ ನಿನ್ನ ಒರಳ ಕಟ್ಟಿ ಎಳಿಸಲಿಲ್ಲ ವಾಲಿಯಂತೆ ನಿನಗೆ ಎದುರು ವಾದಿಸಲಿಲ್ಲ ಭೀಷ್ಮನಂತೆ ನಿನ್ನ ಹಣೆಗೆ ನಾ ಹೊಡೆಯಲಿಲ್ಲ ಭೃಗುಮುನಿಯಂತೆ ನಿನ್ನ ಎದೆಯ ನಾ ತುಳಿಯಲಿಲ್ಲ  ಕೊಂಕಣರ ಕೋಣಕ್ಕೆ ಕೊರಡೆ ಮದ್ದೆಂಬಂತೆ ನಿನಗೆ ಅವರೇ ಮುದ್ದೋ ಪುರಂದರವಿಠಲ!!

Apattu Parihara Ugaboghagalu

ಮೊದಲಕಲ್ಲು ಶ್ರೀಶೇಷದಾಸರ ಆಪತ್ತು ಪರಿಹಾರ ಉಗಾಭೋಗಗಳು  ಈ ಮೂರು ಉಗಾಭೋಗಗಳು ಕಲ್ಲೂರು ಕೃಷ್ಣಪ್ಪನ ಮೇಲೆ ಆಪತ್ತು ಬಂದಾಗ ಪ್ರಾರ್ಥನಾ ಮಾಡಿ ರಚಿಸಿದ್ದು.  ಭಕ್ತವತ್ಸಲನೆಂಬ ಬಿರಿದುಳ್ಳ ದೇವ ನಿನ್ನ ಭಕುತಿಯಿಂದಲಿ ನಮಿಸಿ ಬಿನ್ನೈಸುವೆ  ರಿಕತನ್ನ ಬಿನ್ನಪವ ಮನಕತಂದು ವೇಗ ಆ- ಸಕುತಿಯಿಂದಲಿ ಗ್ರಹಿಸಿ ಸಫಲ ಮಾಡೋ  ಭಕುತನಾದ ಇವಗೆ ಲೌಕಿಕದಿಂದ ಬಂದ ವಿಕಟರೂಪವಾದ ದುರಿತದಿಂದ  ಮುಕುತನ್ನ ಮಾಡುವದು ಕರುಣದಿಂದಲಿ ವೇಗ ಶಕಟಭಂಜನ ಕೃಷ್ಣ ಉತ್ಕೃಷ್ಟನು ಮುಕುತಿದಾಯಕ ಗುರುವಿಜಯವಿಠಲ  ಮಮದ್ಭಕ್ತನ ಪ್ರಾಣ ಪ್ರೀತಿ ಎಂಬೋದು ಸತ್ಯಮಾಡೊ॥ ಭಕ್ತರ ಮನೋರಥ ಪೂರ್ಣಮಾಡುವಲ್ಲಿ ಉತ್ಕೃಷ್ಟವಾದ ಕಾಮಧೇನು ಎನಿಪೆ ಭಕ್ತರ ಅಪರಾಧ ಸಹನ ಮಾಡುವಲ್ಲಿ ಧಾ- ರಿತ್ರಿಗೆ ಸಮಾನನೆನಿಪ ಸಾರ್ವಭೌಮ  ಭಕ್ತರಮ್ಯಾಲೆ ಮಹ ಕರುಣ ಮಾಡುವಲ್ಲಿ  ಪಿತೃ ಮಾತೃ ಭ್ರಾತೃ ಗುರು ಸಮಾನನೆನಿಪೆ ಭಕ್ತರ ಅಭಿಮಾನ ಸಹನಮಾಡುವಲ್ಲಿ ಮಿತ್ರನೆನಿಸಿಕೊಂಬೆ ಅನಿಮಿತ್ತ ಬಂಧು ಭಕ್ತರ ದುರಿತ ಕಳೆದು ಕಾವ ವಿಷಯದಲ್ಲಿ ಛತ್ರನೆನಿಪ ಸತತ ಸನ್ಮಂಗಳಾಗ ಭಕ್ತರ ನಿಂದಕರ ನಿಗ್ರಹ ಮಾಡುವಲ್ಲಿ ಮೃತ್ಯು ಯಮಗೆ ಸದೃಶನೆನಿಪದೇವ  ಭೃತ್ಯವತ್ಸಲ ಗುರುವಿಜಯವಿಠಲರೇಯ  ಭಕ್ತರ ಪೊರೆವ ಬಿರಿದು ನಿನ್ನದಯ್ಯ॥ ಶತ್ರು ಮಿತ್ರಗಳಲ್ಲಿ ಸಮಸ್ಥಿತನಾಗಿ ನೀನೆ ಪ್ರಕೃತಿಯು ಜೀವಕಾಲ ಅನುಸರಿಸೀ ಕೃತ್ಯವಮಾಳ್ಪನಾಗಿ ಜೀವರ್ಗೆ ಸುಖ ದುಃಖ ಮೊತ್ತಗಳುಣಿಸುವಿ ನಿಯಮದಂತೆ ಕರ್ತೃನೆ...

Bannisi Gopi Harasidalu

ಶ್ರೀ  ಪುರಂದರದಾಸರ ಕೃತಿ   ರಾಗ ಬೃಂದಾವನಸಾರಂಗ     ಆದಿತಾಳ  ಬಣ್ಣಿಸಿ ಗೋಪಿ ಹರಸಿದಳು ॥ ಪ ॥ ಎಣ್ಣೆಯನೊತ್ತುತ ಯದುಕುಲ ತಿಲಕಗೆ ॥ ಅ ಪ ॥ ಆಯುಷ್ಯವಂತನಾಗು ಅತಿ ಬಲ್ಲಿದನಾಗು । ಮಾಯದ ಖಳರ ಮರ್ದನನಾಗು ॥ ರಾಯರ ಪಾಲಿಸು ರಕ್ಕಸರ ಸೋಲಿಸು | ವಾಯಸುತಗೆ ನೀನೊಡೆಯನಾಗೆನುತ ॥ 1 ॥ ಧೀರನು ನೀನಾಗು ದಯಾಂಬುಧಿಯಾಗು । ಆ ರುಕ್ಮಿಣಿಗೆ ನೀನರಸನಾಗು ॥ ಮಾರನ ಪಿತನಾಗು ಮಧುಸೂದನನಾಗು । ದ್ವಾರಾವತಿಗೆ ನೀ ದೊರೆಯಾಗೆನುತ ॥ 2 ॥ ಆನಂದ ನೀನಾಗು ಅಚ್ಯುತ ನೀನಾಗು । ದಾನವಾಂತಕನಾಗು ದಯವಾಗು ॥ ಶ್ರೀನಿವಾಸನಾಗು ಶ್ರೀನಿಧಿ ನೀನಾಗು । ಜ್ಞಾನಿ ಪುರಂದರವಿಠಲ ನಾಗೆನುತ ॥ 3 ॥

Venkatesha Stavaraja

ಶ್ರೀರಮಣ ಸರ್ವೇಶ ಸರ್ವಗ  ಸಾರಭೋಕ್ತ ಸ್ವತಂತ್ರ ಸರ್ವದs ಪಾರಮಹಿಮೋದಾರ ಸದ್ಗುಣಪೂರ್ಣಗಂಭೀರ | ಸಾರಿದವರಘ ದೂರಗೈಸೀ  ಸೂರಿಜನರಿಗೆ ಸೌಖ್ಯನೀಡುವ  ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ || ಘನ್ನಮಹಿಮಾಪನ್ನ ಪಾಲಕ  ನಿನ್ನ ಹೊರತಿನ್ನನ್ಯ ದೇವರ ಮನ್ನದಲಿನ ನಾ ನೆನೆಸೆನೆಂದಿಗೂ ಬನ್ನ ಬಡಿಸದಿರೂ | ಎನ್ನ ಪಾಲಕ ನೀನೆ ಇರುತಿರೆ ಇನ್ನು ಭವಭಯವೇಕೆ ಎನಗೆ ಚನ್ನವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೨ || ಲಕುಮಿ ಬೊಮ್ಮ ಭವಾಮರೇಶರು  ಭಕುತಿಪೂರ್ವಕ ನಿನ್ನ ಭಜಿಸೀ ಸಕಲಲೋಕಕೆ ನಾಥನೆನಿಪರೊ ಸರ್ವಕಾಲದಲಿ | ನಿಖಿಳಜೀವರ ಪೊರೆವೊ ದೇವನೆ ಭಕುತಿ ನೀಯೆನಗೀಯದಿರಲು ವ್ಯಕುತವಾಗ್ಯಪಕೀರ್ತಿ ಬಪ್ಪುದೊ ಶ್ರೀನಿಕೇತನನೆ || ೩ || ಯಾಕೆ ಪುಟ್ಟದೊ ಕರುಣ ಎನ್ನೊಳು ಸಾಕಲಾರೆಯ ನಿನ್ನ ಶರಣನ  ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ? | ನೋಕನೀಯನೇ ನೀನೆ ಎನ್ನನು  ಜೋಕೆಯಿಂದಲಿ ಕಾಯೊ ಬಿಡದೆ  ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೪ || ಅಂಬುಜಾಂಬಕ ನಿನ್ನ ಪದಯುಗ ನಂಬಿಕೊಂಡೀ ಪರಿಯಲಿರುತಿರೆ ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿತೋರೆ | ಬಿಂಬಮೂರುತಿ ನಿನ್ನ ಕರಗತ  ಕಂಬುವರವೇ ಗತಿಯೊ ವಿಶ್ವ ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ || ೫ || ಸಾರಶಿರಿವೈಕುಂಠ ತ್ಯಜಿಸೀ ಧಾರುಣೀಯೊಳು ಗೊಲ್ಲನಾಗಿ ಚೋರಕರ್ಮವ ಮಾಡಿ ಬದುಕಿದ ದಾರಿಗರಿಕಿಲ್ಲ | ಸಾರಿಪೇಳುವೆ ನಿನ್ನ ಗುಣಗಳ ಪ...

Lakshmi Stavaraja

ಹರಿಯರಸಿ ಸಿರಿನೀನೆ ಸರ್ವದ ಹರಿಯ ವಕ್ಷಸ್ಥಲ ನಿವಾಸಿನಿ ಹರಿಯ ದಕ್ಷಿಣ ತೊಡೆಯೊಳೊಪ್ಪುತಕಾಲದೇಶದಲಿ ಹರಿಯ ಸಹಿತದಿ ಹರ್ಯನುಜ್ಞದಿ ಹರಿಯ ಸೇವಾನಿರುತಗೈಯುತ ಹರಿಯ ಪದಕೆ ನೀಡಿ ಸುಖಿಸುವ ಶಿರಿಯೆ ವಂದಿಪೆನು ||1|| ಹರಿಯ ಕರುಣದಿ ಸರಸಿಜಾಂಡವ ಹರಿಯ ಸಹಿತದಿ ಹರಿಯ ತೆರದಲಿ ಹರಿಯ ಮನಕತಿ ಪ್ರೀತಿಗೋಸುಗ ಸೃಷ್ಟಿಸ್ಥಿತಿಲಯವ ಹರಿಯ ಚಿತ್ತನುಕೂಲಮಾಡುತ ಹರಿಯ ಸಂಕಲ್ಪಾನುಸಾರದಿ ಹರಿಯನುಗ್ರಹ ಪಡೆದ ನಿನ್ನನು ಸ್ತುತಿಪೆನನವರತ ||2|| ಹರಿಯ ರಮಣಿಯೆ ಹರಿಯ ಜ್ಞಾನವ ಹರಿಯ ಪದಯುಗ ಭಕ್ತಿ ಪಾಲಿಸಿ ಹರಿಯ ಸಹಿತದಿ ನಿನ್ನ ರೂಪವ ಎನ್ನ ಮನದಲ್ಲಿ ಹರಿಯ ವಲ್ಲಭೆ ತೋರೆ ಸಂತತ ಹರಿಯ ಮನ ಸಂಕಲ್ಪದಂತೇ ಹರಿಯ ಮೂರುತಿ ನೆನಹನಿತ್ತೂ ಪೊರಿಯೆ ಮಜ್ಜನನೀ ||3|| ಹರಿಯ ಹೃದಯದಲಿದ್ದ ತೆರದಲಿ ಶಿರಿಯೆ ಎನ್ನಯ ಸದನ ಮಧ್ಯದಿ ಹರಿಯ ಸಹಿತದಿ ನೀನೆ ನೆÀಲಸೀ ಸರ್ವಕಾಲದಲಿ ಹರಿಯ ನಿನ್ನಯ ಸೇವೆ ಗೋಸುಗ ಪರಮ ನಿನ್ನ ವಿಭೂತಿ ಸಹಿತದಿ ಹರಿ ವಿಭೂತಿಜ ಸಕಲ ಭಾಗ್ಯವನಿತ್ತು ಪೊರೆಯೆನ್ನ ||4|| ಹರಿಯ ಮಾನಿನಿ ಸಕಲ ಸಂಪದ ಹರಿಯ ಪ್ರೇಮದಿಯಿತ್ತು ನೀನೇ ಹರಿಯ ಸೇವೆಯ ಗೈಸಿ ಎನ್ನನು ಪೊರೆಯೆ ಮಜ್ಜನನೀ ಹರಿಯ ಸಹಿತದಿ ನೀನೆ ಸಂತತ ಬೆರೆತು ಮನೆಯಲಿ ಸ್ವರ್ಣವೃಷ್ಟಿಯ ಕರೆದು ಭಾಗ್ಯವನಿತ್ತು ಎನ್ನನು ಪೊರೆಯೆ ಶಿರಿದೇವಿ ||5|| ಹರಿಯ ಸಹ ವೈಕುಂಠಲೋಕದಿ ಇರುವೊ ತೆರದಲಿ ಎನ್ನ ಸದನದಿ ಹರಿಯ ಸಹಿತದಲಿದ್ದು ಮಂಗಳ ಕಾರ್ಯದಿನದಿನದಿ ಹರಿಯ ತತ್ತ್ವವಿಚಾರ ನಿನ್ನಯ ಹರಿಯ ಮಹಿಮೆಯನರುಹಿ ಸಂತತ ಹರಿಯ ಭಕ್ತರ...

Gorebal Hanumantha Rayaru

Image
ಇವತ್ತು  ನಾವೆಲ್ಲರೂ ಹರಿದಾಸ ಸಾಹಿತ್ಯವನ್ನು ಆಸ್ವಾದನೆ, ಅಧ್ಯಯನ ಮಾಡುತ್ತಿದ್ದೇವೆ ಅಂದರೇ ಅದಕ್ಕೆ  ಮೂಲ ಕರ್ತೃಗಳಾದ ಶ್ರೀ ಗೋರೆಬಾಳ ಹನುಮಂತರಾಯರೆಂದು ನಿಸ್ಸಂಕೋಚವಾಗಿ ಹೇಳಬಹುದು.. ಇವರು ತಮ್ಮ  ಇಡೀ ಆಸ್ತಿ, ಸಂಪತ್ತನ್ನೂ ಮಾರಿ ಮನೆ ಮನೆಗೆ ತಿರುಗಿ... ಹಿರಿಯ ಹರಿದಾಸರ ಪದ, ಉಗಾಭೋಗ, ಸುಳಾದಿಗಳನ್ನು ಸಂಗ್ರಹ ಮಾಡಿ.. ಪುಸ್ತಕಗಳ ರೂಪದಲ್ಲಿ ಪ್ರಕಟಿಸಿದರು... ಇವರು ಶ್ರೀ ಗುರುಜಗನ್ನಾಥವಿಠಲರ ಆತ್ಮೀಯ ಶಿಷ್ಯರು.. ಸುಂದವಿಠಲಾಂಕಿತರು..ಇವರನ್ನು ನೆನೆಯದೇ ಇದ್ದಲ್ಲಿ ನಮ್ಮ  ಜನ್ಮ ವ್ಯರ್ಥವೇ ಸರಿ..   ಗೊರೆಬಾಳ ಹನುಮಂತರಾಯರ ಸ್ಮರಣೆ ಶ್ರೀ ದಾಸರು ವೃತ್ತಿ ರೀತ್ಯಾ ವಕೀಲರಾಗಿದ್ದರು.. ಕೈಗೊಂಡ ಎಲ್ಲಾ ಕೇಸುಗಳಲ್ಲಿ ಜಯ ಪಡೆದಿದ್ದರು.. ಆದರೇ ಬಂದ ಹಣವನ್ನು ದಾನ-ಧರ್ಮಾದಿಗಳಿಗಾಗಿಯೇ ಖರ್ಚು ಮಾಡ್ತಿದ್ದರು.. ಇಂಥಹವರು ವಿರಕ್ತರಾಗಲು, ದಾಸ ಸಾಹಿತ್ಯದ  ದಾಸರಾಗಲು ಒಂದು ಘಟನೆ ಅಂದರೇ.. ಶ್ರೀ ದಾಸರು ಕುಪ್ಪಿಭೀಮನ ರಥವನ್ನು ಪೂರ್ಣಗೊಳಿಸಿದ ನಂತರದಲಿ ಸ್ವಪ್ನದಲ್ಲಿ ಒಬ್ಬರು ವೃದ್ಧ ಬ್ರಾಹ್ಮಣರು ಕಾಣಿಸಿ ನನಗೂ ರಥ ಮಾಡಿಸಪ್ಪಾ ಅಂತ ಹೇಳಿದಂತೆ...  ಎರಡು- ಮೂರು ಸಲ ಸ್ವಪ್ನ ಆಗಿತ್ತು..  ನಂತರದಲಿ ಮಾನ್ವಿಯ ಒಬ್ಬ ವೃದ್ಧರು ಕಾಣಿಸಿ ಶ್ರೀ ಜಗನ್ನಾಥದಾಸರಿಗೆ ರಥ ಮಾಡಿಸಿ ಅಂತ ಹೇಳಿ ಅಂತರ್ಥಾನರಾದರು. ಆಗ ರಥವನ್ನು ನಿರ್ಮಿಸಲು ನಿರ್ಣಯಿಸಿದ ದಾಸರ  ಯೋಚನೆ ಹೇಗಿದೆ ಅಂದರೇ.. ಶ್ರೀ ಜಗನ್ನ...