Shaka Vrata Adige
*ಚಾತುರ್ಮಾಸ ಮೊದಲನೆ ವೃತದ ಅಡುಗೆ ವಿಚಾರ*
ಚಾತುರ್ಮಾಸ ಬಂತೆಂದರೆ ಕೆಲವರು ಮೊದಲ ತಿಂಗಳದ ಅಡುಗೆ ಹೇಗೆ ಮಾಡೋದು, ರುಚಿಯಾಗಿ ಇರಬೇಕು, ಎಲ್ಲರೂ ಇಷ್ಟ ಪಟ್ಟು ತಿನ್ನುವ ಹಾಗೆ ಹೇಗೆ ಮಾಡೋದು ಎಂಬ ಚಿಂತೆ ಮಾಡುತ್ತಾರೆ ಆದರೆ ಹಾಗಲ್ಲ.ನಾವು ಭಗವಂತನ ಅನುಯಾಯಿಗಳು.ನಮ್ಮ ಗುರುಗಳ ಸಿಧ್ಧಾಂತಕ್ಕೆಧಕ್ಕೆ ಬಾರದಂತೆ ನಡಿಯುವ ಕ್ರಮ ನಮ್ಮದು.ಮೊದಲ ತಿಂಗಳು ಪಲ್ಯಕಾಯಿಗಳು ಬರುವುದಿಲ್ಲ.ಎಲ್ಲ ತರಹದ ಬೇಳೆ ಕಾಳು ಬರುತ್ತವೆ.
ಕಟ್ಟು :- ಬ್ಯಾಳಿಗೆ ಸ್ವಲ್ಪ ನೀರು ಜಾಸ್ತಿ ಹಾಕಿ ಕುಚ್ಚಿ ನೀರು ಬಸಿಬೇಕು.ಅದಕ್ಕೆ ಬೆಲ್ಲ ಸ್ವಲ್ಪ ಉಪ್ಪು ಜಿರಗಿ ಒಗ್ಗರಣೆ.
ಹಿಟ್ಟು :- ಪುಟಾಣಿ ಹಿಟ್ಟು ಅಥವಾ ಕಡ್ಲಿ ಹಿಟ್ಟು ಮೊಸರಿನಲ್ಲಿ ಕಲಿಸಿ ಇದಕ್ಕೂ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು.
ಹೆಸರಕಾಳು_ಪಲ್ಲೆ :- ಹೆಸರಕಾಳನ್ನ ಬೆಯಸಿ ಅದಕ್ಕೆ ಉಪ್ಪು ಜಿರಗಿ ವಗ್ಗರಣಿ ಕೊಡಬೇಕು.
ಸಂಡಗಿ_ಪುಡಿ:- ಕಡ್ಲಿಬ್ಯಾಳಿ ನೆನಿಹಾಕಬೇಕು ಎರಡು ತಾಸು ನೆನದ ಮೆಲೆ ಬಸಿಹಾಕಿ ಅದನ್ನು ಒರಟು ಒರಟಾಗಿ ರುಬ್ಬಬೇಕು. ಅದಕ್ಕೆ ಉಪ್ಪು ಹಾಗೂ ಜಿರಗಿ ವಗ್ಗರಣಿ ಕೊಡಬೇಕು.
ಎಲ್ಲದಕ್ಕೂ ಖಾರದ ಪುಡಿ ಬದಲಾಗಿ ಕರಿಮೆಣಸಿನ ಪುಡಿ (ಅರ್ದ ಚಮಚ) ಹಾಕಬೆಕು.
ಇತರೆ ಇದೆ ವೃತದಲ್ಲಿ ಮಾಡುವ ಅಡುಗೆಗಳು.
1) ಹೆಸರು ಬೇಳೆ ತವ್ವೆ ಪಾಯಸ ಮಾಡಬಹುದು.
2) ಹಯಗ್ರೀವ ಮಾಡಬಹುದು.
3) ರಾಗಿ ಹಿಟ್ಟಿನ ರೊಟ್ಟೆ,ಮೆಣಸು ಜೀರಿಗಿ ಪುಡಿಉಪ್ಪು ಸೀರಿಸಿ ಮಾಡಬಹುದು.
4) ಜೋಳ ಭಕ್ಕರೆ, ಗೋದಿ ಚಪಾತಿ ಇವಕ್ಕೆ ,ಬೆಲ್ಲ ತುಪ್ಪ ಹಚ್ಚಿಕೊಂಡು ತಿನ್ನಬಹುದು.
5) ಹೆಸರು ಕಾಳು ನೆನೆ ಹಾಕಿ ಉಸುಳಿ ಅಂತ ಮಾಡಬಹುದು & ಸಣ್ಣಗೆ ರುಬ್ಬಿ ಅಕ್ಕಿ ಹಿಟ್ಟು ಸೇರಿಸಿ ದೋಸೆಗಳನ್ನ ಮಾಡಬಹುದು.
6) ಅಷ್ಟೇ ಅಲ್ಲ,ಗೋದಿಹಿಟ್ಟಿನ ದೋಸೆ, ರವ ದೋಸೆ ಮಾಡಬಹುದು.ಎಲ್ಲದಕ್ಕು ಮೆಣಸು ಜೀರಿಗೆ ಪುಡಿ ಬಳಸಬಹುದು ಸಾಧ್ಯವಾದಷ್ಷುಮೆಣಸು ಕಡಮೆ ಬಳಸಬೇಕು.
7) ರವ ತುಪ್ಪದಲ್ಲಿ ಹುರಿದ ಜೀರಿಗೆ ಮೆಣಸಿನ ಪುಡಿ ಹಾಕಿ ಉಪಮ ಮಾಡಬಹುದು.
8) ಶಿರ ಮಾಡಬಹುದು.
9) ತೊಗರೆ ಬೇಳೆ ಕೆಂಪಗೆ ಹುರಿದು ವಣಕೊಬ್ಬರಿ ಮೆಣುಸು ಜೀರಿಗಿ ಉಪ್ಪು,ಆಮ್ಚೂರು ಪೌಡರು ಬೆಲ್ಲ ಹಾಕಿ ಪುಡಿಚಟ್ಣಿ ಮಾಡಿಕೊಂಡರೆ ಇಡ್ಲಿಗೆ ಕೂಡ ಅನುಕೂಲವಾಗುತ್ತದೆ.
10) ನೆನಕಡಲೆ ಅಂದರೆ ಕಡ್ಲೆ ಬೀಜ ಹಾಗು ಪುಟಾಣಿ ಸಹ ಪುಡಿಚಟ್ಣಿ ಮಾಡಿಟ್ಟುಕೊಳ್ಳಿ.
Comments
Post a Comment