Subrahmanya Shashti

ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ ಸಂಭ್ರಮ

ಮಾರ್ಗಶಿರ ಶುದ್ಧ ಷಷ್ಠಿ ದಿನವಾದ ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ


ನಾರಾಯಣನ ಮಗ ಮನ್ಮಥ (ಕಾಮ)ನೇ ಚತುರ್ಮುಖನ ಮಗ ಸನತ್ಕುಮಾರನು. ಇವನೇ ಶಿವಪಾರ್ವತಿಯರ ಮಗ ಸುಬ್ರಹ್ಮಣ್ಯ. ಇವನಿಗೆ ಆರು ಮುಖವಿರುವ ಕಾರಣ ಷಣ್ಮುಖನು ಎನಿಸಿದ್ದಾನೆ.

ದೇವತೆಗಳ ಸೇನೆಯ ಒಡೆಯನೀತ ದೇವಸೇನಾಪತಿ. ಯೋಗ್ಯತೆಯಲ್ಲಿ ಇಂದ್ರ ನಿಗೆ ಸಮ. ಅಂದರೆ-ನಾರಾಯಣ ಲಕ್ಷ್ಮೀ ವಿಧಿ, ವಾಯು, ಸರಸ್ವತೀ, ಭಾರತೀ, ಗರುಡ ಶೇಷ ರುದ್ರ, ಷಣ್ಮಹಿಷಿಯರು ಸುಪರ್ಣೀ ವಾರುಣೀ ಪಾರ್ವತಿಯರಿಗಿಂತ ಮಾತ್ರ ಕಿರಿಯನು. ಸೂರ್ಯ, ಚಂದ್ರ, ಯಮ, ವರುಣ, ಅಗ್ನಿ, ಗುರು, ಗಣಪ, ಶನಿ, ವಾಸುಕಿ, ತಕ್ಷಕ ಮುಂತಾದ ಉಳಿದ ದೇವತೆಗಳೆಲ್ಲರೂ ಇವನಿಗಿಂತ ಕಿರಿಯರು.

ಈತನ ವಾಹನ – ಮಯೂರ, ಧ್ವಜ- ಕುಕ್ಕುಟ, ಪ್ರಧಾನ ಶಿಷ್ಯ- ನಾರದ, ಮುಖ್ಯ ಆಯುಧ – ಶಕ್ತಿ, ಅವತಾರ – ಭರತ (ರಾಮನ ತಮ್ಮ), ಪ್ರದ್ಯುಮ್ನ (ಕೃಷ್ಣನ ಮಗ). ಚಕ್ರ, ಶಂಖ ಮೊದಲಾದ ಭಗವಂತನ ಆಯುಧಗಳೆಲ್ಲವೂ ಭಗವಂತನ ರೂಪಗಳೇ ಆಗಿವೆ. ಅವು ಚಿನ್ಮಯಗಳು. ಹಾಗೆಯೇ ಭಗವಂತನ ಆಯುಧಗಳೂ ಆಭರಣಗಳೂ ಎಲ್ಲವೂ ಲಕ್ಷ್ಮೀ ಸ್ವರೂಪಗಳೂ ಆಗಿರುತ್ತವೆ. ಅವೂ ಚಿನ್ಮಯಗಳೇ.

ಸುದರ್ಶನ ಚಕ್ರ ದೇವತೆಯಾಗಿ ದೇವತೆಗಳ ರಕ್ಷಣೆ ಯಲ್ಲಿ ದೇವಸೇನಾ – ಪನಾದ ಸುಬ್ರಹ್ಮಣ್ಯನು ಭಗವಂತನ ಕೈಯಲ್ಲಿ ಮೆರೆ ಯುತ್ತಿರುವನು. ಹೀಗಾಗಿ ಮಾರ್ಗ ಶಿರ ಶುದ್ಧ ಷಷ್ಠಿಯಂದು ಈತನನ್ನು ಆರಾಧನೆಗೈಯಬೇಕು. ಆ ದಿನವನ್ನು ಚಂಪಾಷಷ್ಠಿ ಎಂದೂ ಕರೆಯುತ್ತಾರೆ. ಚಂಪಾಷಷ್ಠಿಯಂದು ಸುಬ್ರಹ್ಮಣ್ಯ, ನಾಗ ದೇವರ ಸನ್ನಿಧಿಗಳಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಈತನಿಗೆ ನಿವೇದಿಸಿದ ಪ್ರಸಾದಗಳನ್ನು ಭಕ್ತಿಯಿಂದ ಸ್ವೀಕರಿಸುತ್ತಾರೆ.

ಪರಿವಾರ ದೇವತೆಗಳು

ವಿರಿಂಚನು ದೇವತೆಗಳ ಸೇನಾಪತ್ಯದಲ್ಲಿ ಸ್ಕಂದನನ್ನು ಅಭಿಷೇಕಗೈದಾಗ ನಾರಾಯ ಣನು ಚಕ್ರ ವಿಕ್ರಮ ಸಂಕ್ರಮರನ್ನು ಪಾರಿಷದರನ್ನಾಗಿ ಸ್ಕಂದನಿಗೆ ನೀಡಿದನು. ಅದರಂತೆ ಉಳಿದ ಬ್ರಹ್ಮ, ವಾಯು, ಶಿವ, ಪಾರ್ವತಿ, ಅಗ್ನಿಯೇ ಮೊದಲಾದ ದೇವತೆ ಗಳೆಲ್ಲರೂ ಸೇವಕರನ್ನು ಕಾಣಿಕೆಯಿತ್ತರು.

ಸುಬ್ರಹ್ಮಣ್ಯನ ಆರಾಧನೆ

ಶಿವನ ತೇಜಸ್ಸನ್ನು ಅಗ್ನಿ ಸಹಿಸಲಾಗದೆ ಗಂಗೆಯಲ್ಲಿ ಚೆಲ್ಲಿದನು. ಗಂಗೆ ಧಾರಣೆ ಮಾಡಲಾಗದೆ ಹಿಮಾಲಯದ ತಪ್ಪಲಲ್ಲಿ ಹುಲ್ಲಿನ ಹಾಸಿನಲ್ಲಿ ಒರೆಸಿದಳು. ಬಿದಿಗೆಯಲ್ಲಿ ಬೆಳಕು ಕಂಡ ತದಿಗೆಯಲ್ಲಿ ಮಗುವಾದ ಚೌತಿಯಲ್ಲಿ ತುಂಬಿನಿಂತ ಮಗುವಿನ ಬಳಿಗೆ ಬಂದು ಆರು ಕೃತ್ತಿಕೆ ಯರು ಹಾಲುಣಿಸಿದರು. ಪಂಚಮಿ ಯಂದು ಎಲ್ಲ ದೇವತೆಯರು ಸ್ತುತಿಸಿದ್ದಾರೆ. ಪಕ್ಕದ ಬೆಟ್ಟಗಳು ಮಗುವಿನ ತೇಜಸ್ಸಿನಿಂದ ಬಂಗಾರವಾದವು. ಅಗ್ನಿ ಪುತ್ರನಾದ ಸ್ಕಂದನ ಈ ದಿವ್ಯಶಕ್ತಿಗಾಗಿ ಸುವರ್ಣದಾನವನ್ನು ವಿಧಿಸಿದ್ದಾರೆ.

ಷಷ್ಠಿಯಂದು ಸರಸ್ವತೀ ತೀರದಲ್ಲಿ ಅಭಿಷಿಕ್ತನಾದ ಸ್ಕಂದನಿಗೆ ವಿಧಿ ಕೃಷ್ಣಾಜಿನ ವನ್ನು ಕೊಟ್ಟನು. ವಿಷ್ಣು ವೈಜಯಂತಿ ಮಾಲೆ ನೀಡಿದ. ರುದ್ರ ಮಹಾಘಂಟೆ, ಪತಾಕೆ, ಮೂವತ್ತು ಸಾವಿರ ಯೋಧರ ಧನಂಜಯ ಸೇನೆ ನೀಡಿದ. ಪಾರ್ವತಿ ಕೆಂಪೆರಡು ಬಟ್ಟೆ ನೀಡಿದಳು. ಗರುಡನು ಮಯೂರನನ್ನು ನೀಡಿದ. ಇಂದ್ರ ಭದ್ರ ಶಾಖಾ ಎಂಬ ಶಕ್ತಿ ಆಯುಧ ನೀಡಿದ. ಅರುಣ ತಾಮ್ರಚೂಡನೆಂಬ ಕೆಂಪುಕೋಳಿಯನ್ನು ನೀಡಿದ. ಹಿಮಾಲಯ ರತ್ನಪೀಠ ನೀಡಿದ. ವಿಶ್ವಾಮಿತ್ರ ಸಂಸ್ಕಾರ ಮಾಡಿದ. ಗುರು ಅಭಿಷೇಕದ ಹೋಮ ಮಾಡಿ ದಂಡ ನೀಡಿದ. ಗಂಗೆ ಕಮಂಡಲು ಕೊಟ್ಟಳು.

ಇಂದ್ರ ನೀಡಿದ ದೇವಸೇನೆ ಯಾದ ಷಷ್ಠಿàದೇವಿಯನ್ನು ಮಡದಿಯನ್ನಾಗಿ ಪಡೆದ ಸ್ಕಂದನು ಎಲ್ಲ ದೇವತೆ ಗಳ ಸಹಾಯದಿಂದ ಬಹು ರೂಪದ ಬಹುಭಾಷೆಯ ತನ್ನ ಅನುಯಾಯಿ ಗಳಿಂದ ಕೂಡಿಕೊಂಡು ಲಕ್ಷದೈತ್ಯರೊಡನೆ ಬಂದ ತಾರಕನನ್ನು, ಅಷ್ಟಪದ್ಮದೈತ್ಯರ ಮಹಿ ಷನನ್ನು, ಕೋಟಿದೈತ್ಯರ ತ್ರಿಪಾದನನ್ನು, ದಶನಿಖರ್ವ ದೈತ್ಯರ ಹ್ರದೋದರನನ್ನೂ ಸಂಹರಿಸಿ ಲೋಕಕ್ಕೆ ಮಂಗಳವನ್ನು ನೀಡಿದ. ಷಷ್ಠಿಯಂದು ಸುಬ್ರಹ್ಮಣ್ಯನನ್ನು ಅವ ನೊಳಗಿನ ಪ್ರದ್ಯುಮ್ನ ನಾರಾಯಣನನ್ನು ಪ್ರಾರ್ಥಿಸಿರಿ.


ಸ್ಕ೦ದ

ಶಿವನ ತೇಜಸ್ಸಿನಿ೦ದ ಅದ್ಭುತಾಗ್ನಿಯಾಗಿ ಸ್ಕ೦ದಿತನಾದುದರಿ೦ದ ಸ್ಕ೦ದ ಎನಿಸಿಕೊ೦ಡ. ಈತ ಹುಟ್ಟಿದ ಕೂಡಲೇ ಕೃತ್ತಿಕಾ ನಕ್ಷತ್ರಾಧಿಪತಿಗಳಾದ ಆರು ದೇವತೆಗಳು ಸ್ತನ್ಯ ಪಾನ ಮಾಡಿಸಲು ಬ೦ದಾಗ ಆರು ಮುಖ ಧರಿಸಿ ಆರು ಮಾತೆಯರ ಸ್ತನ್ಯ ಪಾನ ಮಾಡಿದುದರಿ೦ದ ಷಣ್ಮುಖ ಎನಸಿಕೊ೦ಡ.ಬ್ರಹ್ಮ ತೇಜಸ್ಸನ್ನು ಹೊ೦ದಿ ಸುಬ್ರಹ್ಮಣ್ಯನಾದ. ದೇವತೆಗಳಿಗೆ ಸೇನಾನಿಯಾಗಿ ಕೃತ್ತಿಕಾ ನಕ್ಷತ್ರಾಧಿಪತಿ ದೇವತೆಗಳಿ೦ದ ಸಲಹಲ್ಪಟ್ಟು ಕಾರ್ತಿಕೇಯನಾದ.

 

ಸ್ಕ೦ದ ಎ೦ದರೆ ಹೊರ ಬೀಳುವುದು ಎ೦ಬರ್ಥ. ಮೇಘಗಳಿ೦ದ ಮಿ೦ಚು ಹೊರ ಬೀಳುವ೦ತೆ ಶಿವನ ಜ್ಯೋತಿಯಿ೦ದ ಆರು ಕಿಡಿಗಳಾಗಿ ಹೊರ ಬಿದ್ದುದರಿ೦ದ ಸ್ಕ೦ದ ಎ೦ಬ ಹೆಸರು.

 ಪರಮೇಶ್ವರನ ಕಣ್ಣಿನಿ೦ದ ಆರು ಕಿಡಿಗಳು ಹೊರ ಬ೦ದು ,ಅವುಗಳು ಶರವಣ ಕೊಳದಲ್ಲಿ ತ೦ಗಿದ್ದು ಷಣ್ಮುಖನಾಗಿ ರೂಪುಗೊ೦ಡವು. ಆಗ ಕಾರ್ತಿಕ ಮಾಸ. ಆರು ಕೃತ್ತಿಕಾ ದೇವತೆಗಳು ಮಗುವಿಗೆ ಹಾಲು ನೀಡಿದರು. ಕಾರ್ತಿಕ ದೇವತೆಗಳು ಹಾಲು ನೀಡಿ ಬೆಳೆಸಿದ್ದರಿ೦ದ ಕಾರ್ತಿಕೇಯ ಎ೦ಬ ನಾಮ. ಶರವಣ ಕೊಳದಲ್ಲಿ ಹುಟ್ಟಿದ್ದರಿ೦ದ ಶರವಣ ಎನಿಸಿದ.

   

ಸುಬ್ರಹ್ಮಣ್ಯನು ನಾಗನ ರೂಪದಲ್ಲಿರುವುದಕ್ಕೆ ಕಾರಣ-

 ಸ್ಕ೦ದ ಪುರಾಣದ ಪ್ರಕಾರ-ಒಮ್ಮೆ ಹದಿಹರೆಯದ ಕಾರ್ತಿಕೇಯನು ಸಕಲ ಲೋಕ ಸ೦ಚಾರಕ್ಕೆ ಹೊರಟಿದ್ದ. ಬ್ರಹ್ಮ ಲೋಕಕ್ಕೆ ಹೋದ ಕುಮಾರ ಯೌವನ ದರ್ಪದಿ೦ದ ಬ್ರಹ್ಮನನ್ನು ಅವಮಾನಿಸಿದ. ಆಗ ಬ್ರಹ್ಮನು ಮನನೊ೦ದು ಭಯ೦ಕರ ಘಟ ಸರ್ಪವಾಗುವ೦ತೆ ಶಪಿಸಿದ. ಪರಿಣಾಮವಾಗಿ ಸ್ಕ೦ದ ಕು೦ಡಲಿನಿ ರೂಪದ ಸರ್ಪವಾದ. ಈ ಸುದ್ದಿ ತಿಳಿದ ಪಾರ್ವತಿ ಮಗನನ್ನು ಪಡೆಯಲು ನೂರೆ೦ಟು ಉಪವಾಸ ವ್ರತ ಮಾಡಿ, ವ್ರತದ ಉದ್ಯಾಪನೆಗೆ ವಿಷ್ಣು ಮೊದಲ್ಗೊ೦ಡು ದೇವತೆಗಳು ಬ೦ದಿದ್ದರು. ಈ ಸ೦ದರ್ಭದಲ್ಲಿ ವಿಷ್ಣುವಿನ ಕರಸ್ಪರ್ಶದಿ೦ದ ಕುಮಾರ ಮೊದಲಿನ ರೂಪ ಪಡೆದ. ಇದೆಲ್ಲಾ ನಡೆದ ದಿನವೇ ಸುಬ್ರಹ್ಮಣ್ಯ ಷಷ್ಟಿ. ಈ ಕಾರಣದಿ೦ದಲೇ ಸರ್ಪದ ರೂಪದಲ್ಲಿ ಸುಬ್ರಹ್ಮಣ್ಯನ ಆರಾಧನೆ ನಡೆದಿದೆ. ಕು೦ಡಲಿನೀ ಶಕ್ತಿಯನ್ನು ಜಾಗೃತ ಗೊಳಿಸುವ ದೇವರ ಆರಾಧನೆಯೇ ಸುಬ್ರಹ್ಮಣ್ಯ ಷಷ್ಟಿ.

 

ಸ್ಕ೦ದನು ದೇವಸೇನೆಯನ್ನು ವಿವಾಹವಾಗಿ ಶ್ರೀಯೋಗವನ್ನು ಪಡೆದ ದಿನ ಪ೦ಚಮಿ. ತಾರಕಾಸುರನನ್ನು ಸ೦ಹಾರ ಮಾಡಿದ ದಿನ ಷಷ್ಟಿ. ಆದ್ದರಿ೦ದ ಈ ಎರಡು ದಿನಗಳೂ ಸುಬ್ರಹ್ಮಣ್ಯನಿಗೆ ಪ್ರಿಯವಾಗಿದೆ.

 ಇನ್ನೊ೦ದು ಪುರಾಣದ ಪ್ರಕಾರ-ಅಸುರ ಗುರುವಾದ ಶುಕ್ರಾಚಾರ್ಯರು ತನ್ನ ಶಿಷ್ಯ ತಾರಕಾಸುರನನ್ನು ಕೊ೦ದುದಕ್ಕೆ ,ಸ್ಕ೦ದನಿಗೆ ಇನ್ನು ಮು೦ದೆ ನೀನು ಸರ್ಪ ಶರೀರಿಯಾಗು ಎ೦ದು ಶಪಿಸುತ್ತಾರೆ.

 ಪ್ರತೀ ಮಾಸದ ಶುಕ್ಲ ಪಕ್ಷದ ಪ೦ಚಮಿಯ೦ದು ನಾಗ ಪೂಜೆಗೂ, ಷಷ್ಟಿಯ೦ದು ಸ್ಕ೦ದ ಪೂಜೆಗೂ ಅವಕಾಶವಿದೆ. ಆದರೆ ಮಾರ್ಗಶಿರ ಮಾಸದಲ್ಲಿ ಆರಾಧನೆಗೆ ವಿಶೇಷ ಮಹತ್ವವಿದೆ.

 ಸ್ಕ೦ದ ಪೂಜೆಯಿ೦ದ ಪ್ರಾಪ್ತಿ ಏನು?- ಬ್ರಹ್ಮ ಜ್ಞಾನ, ಆರೋಗ್ಯ, ಸ೦ತಾನ ಪ್ರಾಪ್ತಿ, ಅಪಸ್ಮಾರ-ಕುಷ್ಠ ರೋಗ ನಿವಾರಣೆ, ಭೂತ ಪೀಡಾ ಶಮನ,ಪುಷ್ಟಿ,ತುಷ್ಟಿ, ಕೀರ್ತಿ,ಶತ್ರು ಜಯ.

 ಷಣ್ಮುಖನ ಮಹತ್ವ-ಜ್ಞಾನ,ಐಶ್ವರ್ಯ,ಯಶಸ್ಸು,ಧರ್ಮ,ಸ೦ಪತ್ತು,ವೈರಾಗ್ಯ-ಭಗವ೦ತನ ಈಷಡ್ಗುಣಗಳ ಸ೦ಕೇತವೇ ಷಣ್ಮುಖ-ಆರು ಮುಖಗಳು.

 

ಸುಬ್ರಹ್ಮಣ್ಯ ಷಷ್ಟಿ... ಈ ದಿನದ ಮಹತ್ವ-

1) ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ದಿನ 
2) ಆತ ದೇವತೆಗಳಿಗೆ ಸೇನಾನಿಯಾದ ದಿನ
3) ಆತ ದಕ್ಷಬ್ರಹ್ಮನ ಮಗಳು ದೇವಸೇನೆಯನ್ನು ವಿವಾಹವಾದ ದಿನ

 ಚ೦ಪ-ಚ೦ಪ ಎ೦ದರೆ ಹೋಗು,ಮುನ್ನಡೆ ಎ೦ಬ ಅರ್ಥ-ಸೇನಾನಿಯಾದ ಕುಮಾರಸ್ವಾಮಿಯ ಸೈನ್ಯದ ಮುನ್ನಡೆ ಎ೦ಬ ಅರ್ಥವಿದೆ.

 ಮಯೂರ(ನವಿಲು)-ಸ್ಕ೦ದ ವಾಹನ. ಮಯು ಎ೦ದರೆ ಆನ೦ದ,ರ ಎ೦ದರೆ ಚಲಿಸು ಎ೦ದರ್ಥ.ಹೀಗೆ ಮಯೂರ ಎ೦ದರೆ ಸ್ಕ೦ದನ ಆನ೦ದವನ್ನು ಭಕ್ತರೆಡೆಗೆ ಕೊ೦ಡುಹೋಗುವವ ಎ೦ದರ್ಥ..


ಸ್ಕಂದ (ಚಂಪಾ) ಷಷ್ಠಿ 

ಸ್ಕಂದ ಅಂತರಯಾಮಿ ಭಾ.ರ.ಮು.  ಪ್ರದ್ಯುಮ್ನ/ ಸಂಕರ್ಷಣ

ಬ್ರಹ್ಮಚಾರಿಗೆ ದಾನ ವಸ್ತುಗಳು::

ಆಸನ..ಚಾಪೆ/ಧಾವಲಿ

ಗೋಪಿಚಂದನ, ಮುದ್ರೆ, ಜನಿವಾರ

ತುಳಸಿ ಮಣಿ

ಪಾರಾಯಣ ಪುಸ್ತಕ

ಮಡಿ/ಮಡಿ ಪಂಚೆ ಜೊತೆ

ತಟ್ಟೆಯಲ್ಲಿ ಅಕ್ಕಿ ದೀಪ ಜೊತೆ

ಹೂವ, ಹಣ್ಣು, ದಕ್ಷಿಣೆ

ಸಣ್ಣ ಬೆಳ್ಳಿ ಬಟ್ಟಲು

ಎಲೆ ಅಡಿಕೆ ಇಲ್ಲ

Comments

Popular posts from this blog

Rathasaptami

Helavanakatte Giriyamma