Deva Pooja Sankshipta

ಸಂಕ್ಷಿಪ್ತ ದೇವ ಪೂಜಾ ಪದ್ದತಿಃ

ಸ್ನಾನ ಮಾಡಿ ಮಡಿಬಟ್ಟೆಯನ್ನುಟ್ಟು ನಾಮ ಮುದ್ರಾಧಾರಣೆ ಹಾಗೂ ಸಂದ್ಯಾವಂದನೆಯನ್ನು ಮಾಡಿ ದೇವರ ಪೂಜೆಯನ್ನು ಮಾಡಬೇಕು 

ಸಂಕಲ್ಪ:- ಆಚಮ್ಯ, ಪ್ರಾಣಾನಾಯಮ್ಯ ದೇಶಕೌಲೌ ಸಂಕೀರ್ತ್ಯ, ಗೋವಿಂದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು  ಪ್ರೀತ್ಯರ್ಥಂ ದೇವತಾಪೂಜಾಂಕರಿ ಷ್ಯೇ|| 

ವಂದೇ ವಿಷ್ಣು ನಮಾಮಿ ಶ್ರಿಯಮಥ ಚ ಭುವಂ ಬ್ರಹ್ಮವಾ ಯೂ ಚ ವಂದೇ|
ಗಾಯತ್ರೀಂ ಭಾರತೀಂ ತಾಮಪಿ ಗರುಮನಂತಂ ಭಜೇ ರುದ್ರದೇವಂ || 

ದೇವಿ ವಂದೇ ಸುಪರ್ಣಿಮಹಿಪತಿದ ಯಿತಾಂ ವಾರುಣೀಮಪ್ಯುಮಾಂತಾಂ |
ಇಂದ್ರಾದೀನ್ ಕಾಮಮುಖ್ಯಾನಪಿ ಸಕಲಸುರಾನ್ ತದ್ಗುರೂನ್ ಮದ್ಗುರೂಂಶ್ಚ || 

ದ್ವಾರದೇವತಾಭ್ಯೋನಮಃ||
ಸರ್ವಾರಿಷ್ಟನಿರಶನಮಸ್ತು||

ದೀಪ ಪ್ರಜ್ಚಾಲನ ಮಾಡಿ ಘಂಟೆ ಯನ್ನು ಬಾರಿಸಬೇಕು. 

ಶಾಲಿಗ್ರಾಮ 
ಶಂಖ 
ಪ್ರಾಣದೇವರು 
ಗರುಡಶೇಷ
ಗುರುಗಳು ಇವುಗಳನ್ನು ಬೇರೆ ಬೇರೆ ತಟ್ಟೆಯಲ್ಲಿ ಇಡಬೇಕು. 

ನಿರ್ಮಾಲ್ಯವಿಸರ್ಜನೆ :- {ದೇವರಿಗೆ ಏರಿಸಿದ ಹೂ ತುಳಸಿಗಳ ನ್ನು ತೆಗೆಯುವುದು}

ಓಂ ಅಹಂ ರುದ್ರೇ  {ಈ ಮಂತ್ರದಿಂದ}  ನಿರ್ಮಾಲ್ಯಾಭಿಷೇಕ {ಶಾಲಿಗ್ರಾಮಕ್ಕೆ} 

ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು

ಶಂಖಾಭಿಷೇಕ:-
ಹಿರಣ್ಯವರ್ಣಾಂ ಹರೀಣಿಂ {ಈ ಮಂತ್ರದಿಂದ} 

ಪ್ರಾಣದೇವರ ಅಭಿಷೇಕ:-

ಮಾತರ್ಮೇ ಮಾತರಿಶ್ವನ್ ಪಿತರ ತುಲಗುರೋಭ್ರಾತರಿಷ್ಟಾಪ್ತಬಂಧೋ|
ಸ್ವಾಮಿನ್ ಸರ್ವಾಂತರಾತ್ಮನ್ನ ಜರಜರಯಿತರ್ಜುನ್ಮಮೃತ್ಯಾಮಯಾನಾಂ||
ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂನಿರ್ನಿಮಿತ್ತಾಂ |
ನಿರ್ವ್ಯಾಜಾಂ ನಿಶ್ಚಲಾಂ ಸದ್ಗುಣಗಣಬೃಹತೀಂಶಾಶ್ವತೀಮಾ ಶುದೇವಾ||

ಗರುಡ ಶೇಷಾಭಿಷೇಕ:-

ಗರುಡಾಯನಮಃ ಶೇಷಾಯನಮಃ

ಗುರುಗಳ ಅಭಿಷೇಕ;-

ಬ್ರಹ್ಮಾಂತಾ ಗುರವಃ ಸಾಕ್ಷಾದಿಷ್ಟಂ ದೈವಂಶ್ರಿಯಃಪತಿಃ|
ಆಚಾರ್ಯಃ ಶ್ರೀಮದಾಚಾರ್ಯಸ್ಸಂತು ಮೇ ಜನ್ಮಜನ್ಮನಿ||

ದೇವರ ನಿರ್ಮಾಲ್ಯತೀರ್ಥವನ್ನು ಶಂಖ, ಪ್ರಾಣದೇವರು, ಗರುಡಶೇಷರು ಗುರುಗಳು ಎಲ್ಲರಿಗೂ ಮೂರು ಸಲ ಕೊಡಬೇಕು. ಆಮೇಲೆ ಶಂಖಾದಿಗಳನ್ನು ಒರಿಸಿ ಇಡಬೇಕು. { ನಂತರ ಗಂಧ, ಸ್ವಾದೋದಕ, ಅಕ್ಷತೆಗಳನ್ನು ಸಿದ್ದ ಮಾಡಬೇಕು.} 

ಕಲಶ ಪೂಜಾ:- {ಕಲಶದಲ್ಲಿ ನೀರು ತುಂಬಿ, ತುಳಸಿಯನ್ನು ಹಾಕಿ ಗಂಧ ಅಕ್ಷತೆ ಹಚ್ಚಿ ಅಭಿಮಂತ್ರಣ ಮಾಡಬೇಕು} 

ಕಲಶದೇವತಾಭ್ಯೋನಮಃ ಅಜಾದಿದೇವತಾಭ್ಯೋನಮಃ

{ಓಂ ನಾರಾಯಣಾಯ ಓಂ 8 ಸಲ ಅನ್ನಬೇಕು}

ಶುದ್ಧಾಭಿಷೇಕ:- 

ಸಹಸ್ರಶೀರ್ಷಾ....... ಈ ಮಂತ್ರವನ್ನು ಹೇಳುತ್ತಾ ಕಲಶದಲ್ಲಿರುವ ನೀರನ್ನು ತೆಗೆದು ಕೊಂಡು ಶಂಖದಿಂದ ಅಭಿಷೇಕ ಮಾಡಬೇಕು. ಸ್ವಾದೋದಕದಿಂದ ಲೂ ಅಭಿಷೇಕ ಮಾಡಬೇಕು. ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು. 

ಅರ್ಚನೆ ಕೇಶವಾಯನಮಃ 

ನಮೋಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರ ಪಾದಕ್ಷಿಶಿರೋರು ಬಾಹುವೇ|
ಸಹಸ್ರನಾಮ್ನೇಪುರುಷಾಯಶಾಶ್ವತೇ ಸಹಸ್ರಕೋಟಿಯುಗಧಾರಿಣೇ ನಮಃ||

ಈ ಮಂತ್ರವನ್ನು ಹೇಳುತ್ತಾ ಗಂಧ ತುಳಸೀ, ಪುಷ್ಪಗಳನ್ನು ದೇವರಿಗೆ ಸಮರ್ಪಿಸಿಬೇಕು. 

ಧೂಪದೀಪ{ಕೆಂಡದ ಮೇಲೆ ದಶಾಂಗವನ್ನು ಹಾಕಿ ಧೂಪಾರತಿ ಯನ್ನು ಮಾಡಬೇಕು .ಧೂಪಂ ಸಮರ್ಪಯಾಮಿ || 
3 ಎಳಿ ಬತ್ತಿಗಳಿಂದ ಏಕಾರತಿಯನ್ನು ಮಾಡಬೇಕು . ದೀಪಂ ಸಮರ್ಪಯಾಮಿ||

ನೈವೇದ್ಯ:-- ನೀರಿನಿಂದ ಚತುಸ್ರಮಂಡಲಮಾಡಅದರ ಮೇಲೆ ನೈವೇದ್ಯವನ್ನು ಇಟ್ಟು ಅಭಿಘಾರಮಾಡಿ, ಗಾಯತ್ರೀ ಮಂತ್ರ ಹೇಳಿ, ಪ್ರೋಕ್ಷಣೆ ಮಾಡಿ ತುಳಸೀದಳಹಾಕಿ ಪರಿಷೇಚನೆ ಮಾಡಬೇಕು ಆಮೇಲೆ ಆಮೇಲೆ ಶಂಖ ಚಕ್ರ ಧೇನು ತಾರ್ಕ್ಷ್ಯ, ಮೇರು ಚಂದ್ರ, ಈ ಮುದ್ರೆಗಳನ್ನು ತೋರಿಸಬೇಕು.

ಆಮೇಲೆ ಓಂ ಓಂ ನಮೋ ನಾರಾಯಣಾಯ ಓಂ ಈ ಮಂತ್ರವನ್ನು 12, ಯಥಾಶಕ್ತಿ ಪಠಿಸಬೇಕು, ಅನ್ನದಲ್ಲಿ ರುವ ದೇವರು ಪ್ರತಿಮೆಯಲ್ಲಿರುವ ದೇವರು ತನ್ನಲ್ಲಿರುವದೇವರು ಒಂದೇ ಎಂದು ಸ್ಮರಿಸಬೇಕು. 

ಆಪೋಶನಂ ಸಮರ್ಪಯಾಮಿ|| ಅಮೃತೋಪಸ್ತರಣ ಮಸಿಸ್ವಾಹಾ|
ಪ್ರಾಣಾಯಸ್ವಾಹಾ|| ಅಪಾನಾಯಸ್ವಾಹಾ|| ವ್ಯಾನಾಯ ಸ್ವಾಹಾ||
ಉದಾನಾಯಸ್ವಾಹಾ|| ಸಮನಾಯಸ್ವಾಹಾ||
ಉತ್ತರಾಪೋಶನಂ ಸಮರ್ಪಯಾಮಿ| ಅಮೃತಾಪಿಧಾನಮಸಿ ಸ್ವಾಹಾ||

ಈ ಮಂತ್ರಗಳಿಂದ ಶುದ್ದವಾದ ನೀರನ್ನು ಶಂಖದಿಂದ ಪಾತ್ರೆಯಲ್ಲಿ ಬಿಡಬೇಕು. 

ಮಹಾಮಂಗಳಾರತಿ:-

ಜಯತಿ ಹರಿಚಿಂತ್ಯಃ ಸರ್ವದೇವೈ ಕವಂದ್ಯಃ|
ಪರಮ ಗುರುಭೀಷ್ಟಾವಾಪ್ತಿದಃ ಸಜ್ಜನಾನಾಂ||
ನಿಖಿಲಗುಣಾಗಣಾರ್ಣೋ ನಿತ್ಯನಿರ್ಮುಕ್ತದೋಷಃ||
ಸರಸಿಜನಯನೋಸೌ ಶ್ರೀಪತಿರ್ಮಾನದೋನಃ||

ರಮಾದಿಪೂಜೆ:- ಶಂಖಾದಿಗಳಿ ಗೆ ತೀರ್ಥ, {3ಸಲ ನಿರ್ಮಾಲ್ಯ ಗಂಧ ತುಳಸೀ ಪುಷ್ಪಗಳನ್ನು ಸಮರ್ಪಿಸಿ, ನೈವೇದ್ಯವನ್ನು ಮಾಡಬೇಕು  {ಒಂದು ತಟ್ಟೆಯಲ್ಲಿ ವೈಶ್ವದೇವಕ್ಕೆ ಅನ್ನವನ್ನು ಇಟ್ಟುಕೊಂಡು ಗರುಡಶೇಷರಿಗೆ ಬೇರೆ ಬೇರೆ ಅನ್ನವನ್ನು ತೆಗೆದು ಇಡಬೇಕು. }

ರಮಾಬ್ರಹ್ಮಾದಯೋದೇವಾಃ ಸನಕಾಧ್ಯಾಃ ಶುಕಾದಯಾಃ|
ಶ್ರೀನೃಸಿಂಹಪ್ರಸಾದೋsಯಂ ಸರ್ವೇಗೃಹ್ಣಂತು ವೈಷ್ಣವಾಃ||

ಈ ಮಂತ್ರದಿಂದ ನೈವೇದ್ಯಮಾಡಿ ಮಂಗಳಾರತಿಯನ್ನು ಮಾಡಬೇಕು‌

ಬ್ರಹ್ಮಾಂತಾಗುರುವಃ....... ಈ ಮಂತ್ರದಿಂದ ಹಸ್ತೋದಕ ಮಾಡಬೇಕು ನಂತರ ದೇವರನ್ನು ಭುಜಂಗಿಸಬೇಕು.

ಯಸ್ಯಸ್ಮೃತ್ಯಾಚನಾಮೋಕ್ತ್ಯಾತಪಃ ಪೂಜಾಕ್ರಿಯಾದಿಷು|
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ||
ಯತ್ಕೃತಂತು ಮಯಾದೇವ ಪರಿಪೂರ್ಣಂ ತದುಸ್ತುಮೇ||

ಅನೇನ ದೇವ ಪೂಜನೇನ ಭಾರತೀರಮಣಮುಖ್ಯಪ್ರಾಣಂತರ್ಗತ ಲಕ್ಷ್ಮೀನಾರಾಯಣಃ ಪ್ರಿಯತಾಂ ಪ್ರೀತೋಭವತು||
||ಶ್ರೀಕೃಷ್ಣಾರ್ಪಣಮಸ್ತು||

ಸೂಚನೆ:- ಏಕಾದಶಿ ದಿವಸಾ ಶಂಖಾದಿಗಳಿಗೆ ಒಂದು ಸಲ ತೀರ್ಥ ಕೊಡಬೇಕು. ಮತ್ತು ಗಂಧ ನೈವೇದ್ಯ ಸಮರ್ಪಣೆ ಇರುವುದಿಲ್ಲಾ ದೇವರಿಗೂ ಸ್ವಾದೋಕದಿಂದ ಅಭಿಷೇಕ ಮತ್ತು ಅನ್ನಾದಿಗಳ ನೈವೇದ್ಯ ಇರುವುದಿಲ್ಲ. ಕೇವಲ ಫಲ ಸಮರ್ಪಣೆ ಮಾಡಬೇಕು 

ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ

Comments

  1. ಪೂಜಾ ವಿಧಾನವನ್ನುಅಚ್ಚುಕಟ್ಟಾಗಿ ತಿಳಿಸಿರುವಿರಿ

    ReplyDelete

Post a Comment

Popular posts from this blog

Subrahmanya Shashti

Rathasaptami

Helavanakatte Giriyamma