Gorebal Hanumantha Rayaru
ಇವತ್ತು ನಾವೆಲ್ಲರೂ ಹರಿದಾಸ ಸಾಹಿತ್ಯವನ್ನು ಆಸ್ವಾದನೆ, ಅಧ್ಯಯನ ಮಾಡುತ್ತಿದ್ದೇವೆ ಅಂದರೇ ಅದಕ್ಕೆ ಮೂಲ ಕರ್ತೃಗಳಾದ ಶ್ರೀ ಗೋರೆಬಾಳ ಹನುಮಂತರಾಯರೆಂದು ನಿಸ್ಸಂಕೋಚವಾಗಿ ಹೇಳಬಹುದು.. ಇವರು ತಮ್ಮ ಇಡೀ ಆಸ್ತಿ, ಸಂಪತ್ತನ್ನೂ ಮಾರಿ ಮನೆ ಮನೆಗೆ ತಿರುಗಿ... ಹಿರಿಯ ಹರಿದಾಸರ ಪದ, ಉಗಾಭೋಗ, ಸುಳಾದಿಗಳನ್ನು ಸಂಗ್ರಹ ಮಾಡಿ.. ಪುಸ್ತಕಗಳ ರೂಪದಲ್ಲಿ ಪ್ರಕಟಿಸಿದರು... ಇವರು ಶ್ರೀ ಗುರುಜಗನ್ನಾಥವಿಠಲರ ಆತ್ಮೀಯ ಶಿಷ್ಯರು.. ಸುಂದವಿಠಲಾಂಕಿತರು..ಇವರನ್ನು ನೆನೆಯದೇ ಇದ್ದಲ್ಲಿ ನಮ್ಮ ಜನ್ಮ ವ್ಯರ್ಥವೇ ಸರಿ..
ಗೊರೆಬಾಳ ಹನುಮಂತರಾಯರ ಸ್ಮರಣೆ
ಶ್ರೀ ದಾಸರು ವೃತ್ತಿ ರೀತ್ಯಾ ವಕೀಲರಾಗಿದ್ದರು.. ಕೈಗೊಂಡ ಎಲ್ಲಾ ಕೇಸುಗಳಲ್ಲಿ ಜಯ ಪಡೆದಿದ್ದರು.. ಆದರೇ ಬಂದ ಹಣವನ್ನು ದಾನ-ಧರ್ಮಾದಿಗಳಿಗಾಗಿಯೇ ಖರ್ಚು ಮಾಡ್ತಿದ್ದರು.. ಇಂಥಹವರು ವಿರಕ್ತರಾಗಲು, ದಾಸ ಸಾಹಿತ್ಯದ ದಾಸರಾಗಲು ಒಂದು ಘಟನೆ ಅಂದರೇ..
ಶ್ರೀ ದಾಸರು ಕುಪ್ಪಿಭೀಮನ ರಥವನ್ನು ಪೂರ್ಣಗೊಳಿಸಿದ ನಂತರದಲಿ ಸ್ವಪ್ನದಲ್ಲಿ ಒಬ್ಬರು ವೃದ್ಧ ಬ್ರಾಹ್ಮಣರು ಕಾಣಿಸಿ ನನಗೂ ರಥ ಮಾಡಿಸಪ್ಪಾ ಅಂತ ಹೇಳಿದಂತೆ... ಎರಡು- ಮೂರು ಸಲ ಸ್ವಪ್ನ ಆಗಿತ್ತು..
ನಂತರದಲಿ ಮಾನ್ವಿಯ ಒಬ್ಬ ವೃದ್ಧರು ಕಾಣಿಸಿ ಶ್ರೀ ಜಗನ್ನಾಥದಾಸರಿಗೆ ರಥ ಮಾಡಿಸಿ ಅಂತ ಹೇಳಿ ಅಂತರ್ಥಾನರಾದರು. ಆಗ ರಥವನ್ನು ನಿರ್ಮಿಸಲು ನಿರ್ಣಯಿಸಿದ ದಾಸರ ಯೋಚನೆ ಹೇಗಿದೆ ಅಂದರೇ.. ಶ್ರೀ ಜಗನ್ನಾಥದಾಸರು ತಮ್ಮ ಹರಿಕಥಾಮೃತಸಾರ ಮೇರು ಕೃತಿಯಲ್ಲಿ ಹೇಳಿದ ಹಾಗೇ ದೇಹಾಖ್ಯ ರಥವನ್ನು ನಿರ್ಮಿಸಬೇಕು ಅಂತ ನಿರ್ಧಾರ ಆಯಿತು ಅಂದರೇ
ಈ ದೇಹವೇ ಒಂದು ರಥ.. ಅದರ ಮನೋಭಿಮಾನಿಗಳಾದವರು ರುದ್ರದೇವರು.. ಅವರೇ ನಮ್ಮ ಮನಸಿನ ಸಾರಧಿಯಾಗಿ ಇಂದ್ರಿಯಗಳು ಕುದುರೆಗಳನ್ನು ನಿಯಂತ್ರಿಸುವವರು ಅಂತ ಯೋಚಿಸಿ.. ಪರಮವೈಷ್ಣವರಾದ ರುದ್ರದೇವರ ಪ್ರತಿಮೆಯೊಂದನ್ನು ಆ ರಥಕ್ಕೆ ಮುಂದಿನಭಾಗದಲ್ಲಿ ಇಟ್ಟು ಆತನ ಕೈಯಲ್ಲಿ ರಥದ ಚಾವಟಿಯನ್ನು ಏರ್ಪಡಿಸಿದರು..
ಸುಮಾರು 7 ಅಡಿಯ ರಥ. ನಮ್ಮ ಮಧ್ವಶಾಸ್ತ್ರದಲ್ಲಿ ವಿವರಿಸಿದಹಾಗೇ ವಿವಧಲೋಕಗಳನ್ನು, ಆ ಲೋಕಗಳ ದೇವತೆಗಳ ಮೂರ್ತಿಗಳನ್ನು ನಿರ್ಮಿಸಿದರು...
ಮೂರು ವರ್ಷಗಳ ಕಾಲ ಈ ರಥದ ನಿರ್ಮಾಣ ಶ್ರೀ ಹನುಮಂತರಾಯರ ಸ್ವಂತ ಖರ್ಚಿನಿಂದ (ಸುಮಾರು 5 ಸಾವಿರ ರೂಪಾಯಿ) ನಿರ್ಮಾಣವಾಗಿತ್ತು.... ಮುಗಿದನಂತರ 10 ದಿನಗಳ ಕಾಲ ಉತ್ಸವವನ್ನು ನಡೆಸಿ ಶ್ರೀ ಜಗನ್ನಾಥದಾಸರನು ರಥದಲ್ಲಿ ಕೂಡಿಸಿ ಮೆರುವಣಿ ಮಾಡಿಸಿದರು...
ಆದರೇ ಶಿವಸರ್ವೋತ್ತಮತ್ವವನ್ನು ನಂಬುವ ಜನರು ಅದನ್ನು ವ್ಯತಿರೇಕ ಮಾಡಿ ರುದ್ರದೇವರನ್ನು ರಥದಲ್ಲಿ ತೆಗೆದು ಹಾಕಿ ಅಂತ ಗಲಾಟೆ ಮಾಡಿ ಕೋರ್ಟುಗೆ ಹೋದರು.. ಶ್ರೀ ಹನುಮಂತರಾಯರು ವಕೀಲರೇ ಕಡಿಂದ 6 ವರ್ಷಗಳ ಕಾಲ ವಾದಿಸಿ ಜಯರಾದರು...
6 ವರ್ಷ ನಿಂತಿದ್ದ ಮಾನವಿ ಯ ರಥೋತ್ಸವ ಮತ್ತೆ ಪುರಂದರದಾಸರ ಆರಾಧನೆ ಯಿಂದ ಮರುಪ್ರಾರಂಭವಾಗಿತು..ಆಗನಿಂತ ಈ ರಥೋತ್ಸವ ಎರಡು ಬಾರಿ ನಡಿಸಲಾಗ್ತದೆ . ಇವತ್ತಿಗೂ.. ಶ್ರೀ ಜಗನ್ನಾಥ ದಾಸರ ಹಾಗೂ ಶ್ರೀ ಪುರಂದರದಾಸರ ಆರಾಧನಾ ಸಮಯಗಳಲ್ಲಿ....ಆದರೇ ಕೊರ್ಟು ಆಜ್ಞೆ ಯ ಪ್ರಕಾರ ರುದ್ರದೇವರ ಕೈಯಲ್ಲಿ ಚಾವಟಿಯನ್ನು ತೆಗಿಯಲಾಯಿತು.. ಮತ್ತೆ ಶಿವಶರಣರು ಆ ರಥವನ್ನು ಸುಟ್ಟಿ ಹಾಕಿದರೂ ಸಹಾ..
ಈ ಘಟನೆ ಹಾಗೂ ಮಕ್ಕಳು ತಮ್ಮ ಕಣ್ಣೆದುರ್ಗಡೆನೇ ತೀರಿಕೊಂಡದ್ದು ನೋಡಿ ಪೂರ್ತಿ ವಿರಕ್ತರಾದರು.. ಹನುಮಂತರಾಯರು... (ಇವರ ಮಕ್ಕಳಲ್ಲಿ ಒಂದು ಹೆಣ್ಣು ಮಗಳು ಶ್ರೀ ಸುಳಾದಿಕುಪ್ಪೇರಾಯರ ಮಡದಿ)
ಈ ಎರಡೂ ವಿಷಯಗಳು ನಡೆದ ನಂತರ ಹನುಮಂತರಾಯರು... ಆಧ್ಯಾತ್ಮಿಕ ಪ್ರಪಂಚಕ್ಕೆ ಪೂರ್ತಿ ಹತ್ತಿರವಾದರು...

Comments
Post a Comment