Vijayeendra Teertharu
ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ತ್ರಯೋದಶಿ , ಶ್ರೀಸುರೇಂದ್ರತೀರ್ಥರ ವರ ಕುಮಾರರು ದ್ವೈತ ಮತದ ಧೃವ ತಾರೆ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರ ಆರಾಧನೆ , ಕುಂಭಕೋಣಂ
ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮಃ ||
ಪದವಾಕ್ಯಪ್ರಮಾಣಜ್ಙಾನ್ ಸೊಶಿಲ್ಯಾದ್ಯುಪಸೇವಿತಾನ್ |
ವಿಜಯೀಂದ್ರಯತೀಂದ್ರಾಖ್ಯಾನ್ ಸೇವೆ ವಿದ್ಯಾಗುರೂನ್ಮಮ ||
– ಶ್ರೀಕಂಭಾಲೂರು ರಾಮಚಂದ್ರತೀರ್ಥರು
ಸ್ವದರ್ಶನೋಕ್ತದೂಷಣಂ ನಿರಾಕರಿಷ್ಣುರಂಜಸಾ |
ಜಯೀಂದ್ರಯೋಗಿರೂಪತsವತೀರ್ಣ ಏಷ ಪೂರ್ಣಧೀಃ ||
– ಶ್ರೀ ಅಪ್ಪಯ್ಯ ದೀಕ್ಷೀತರು
ವಿಜಯೀಂದ್ರಸಭಾಸ್ತಾರೇ ತ್ವಯ್ಯರ್ಕೇ ಪ್ರತಿಪದ್ಯತೇ |
ತಾರತ್ವಂ ಪ್ರಸಭಾಸ್ತಾರೇ ವಿಮತೋsಪ್ರತಿಪದ್ಯತೇ ||
– ಶ್ರೀಸುಧೀಂದ್ರತೀರ್ಥರು
ಚತುಃಷಷ್ಟೀವಿದ್ಯಾಜುಷೇ ವಿದ್ವನ್ಮಹೋಮುಷೇ |
ಜಯೀಂದ್ರಜ್ಯೋತಿಷೇ ಕುರ್ಯಾಂ ವಂದನಾನಿ ಯಶೋಜುಷೇ ||
– ಮಹಾಕವಿ ನಾರಾಯಣಾಚಾರ್ಯರು, ಶ್ರೀರಾಘವೇಂದ್ರವಿಜಯ
ಜನುರ್ಜನುರನಾರತಂ ಜಗತಿ ಚಾತುರೀ ಚಾತುರೀ
ಮತಿರ್ಮತಿರಖಂಡಿತಾ ಸದಸಿ ಮೌಖರೀ ಮೌಖರೀ |
ಕೃತಿಃ ಕೃತಿರಿತೋ ಜನಾಃ ಶೃಣುತ ಪಾಂಡಿತಿಂ ಪಾಂಡಿತಿಂ
ಜಯೀಂದ್ರ ವಿಜಯೀಂದ್ರ ಸಚ್ಚರಿತ ವಂದಿ ಕರ್ಮಂದಿನಾಂ ||
– ಶ್ರೀಸುಮತೀಂದ್ರತೀರ್ಥರು, ಮಧುಧಾರಾಕಾರರು
ಚಾತುರ್ಯೈಕಾಕೃತಿರ್ಯಶ್ಚತುರಧಿಕಶತ ಗ್ರಂಥರತ್ನಪ್ರಣೇತಾ
ಧೂತಾರಾತಿಪ್ರಬಂಧ ಸ್ಪುಟವಿದಿತಚತುಃಷಷ್ಟಿವಿದ್ಯಾವಿಶೇಷಃ |
ಸೋsಯಂ ನಶ್ಶ್ರೀಸುರೇಂದ್ರ ವ್ರತಿವರತನಯೋsಧ್ವೈತಶೈವಾಸಹಿಷ್ಣುಃ
ಪುಷ್ಣಾತು ಶ್ರೀಜಯೀಂದ್ರ ಸ್ತ್ರಿಭುವನವಿದಿತಸ್ಸರ್ವತಂತ್ರಸ್ವತಂತ್ರಃ ||
– ಶ್ರೀವಾದೀಂದ್ರತೀರ್ಥರು
ಶ್ರೀಶ್ರೀವಿಜಯೀಂದ್ರತೀರ್ಥರ ಪೂರ್ವಾಶ್ರಮದ ಹೆಸರು ಶ್ರೀವಿಠ್ಠಲಾಚಾರ್ಯರು. ಶ್ರೀವಿಠ್ಠಲಾಚಾರ್ಯರು ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಲ್ಲಿ ಆಶ್ರಮ ಸ್ವೀಕಾರಮಾಡಿ ಶ್ರೀವಿಷ್ಣುತೀರ್ಥರು ಎಂದು ಮಾನ್ಯರಾದರು. ಶ್ರೀವ್ಯಾಸರಾಜಗುರುಸಾರ್ವಭೌಮರಲ್ಲಿ ಸಕಲ ಶಾಸ್ತ್ರವನ್ನು ಅಧ್ಯಯನ ಮಾಡಿ ನಂತರದಲ್ಲಿ ಶ್ರೀಸುರೇಂದ್ರತೀರ್ಥರು ಅಪೇಕ್ಷೆಯಂತೆ ವಿಷ್ಣುತೀರ್ಥರನ್ನು ದಂಡಪಲ್ಲಟ ಮಾಡಿಸಿ ಶ್ರೀ ಶ್ರೀವಿಜಯೀಂದ್ರತೀರ್ಥರೆಂದು ಜಗನ್ಮಾನ್ಯರಾಗುತ್ತಾರೆ.
ಶ್ರೀವಾದೀಂದ್ರತೀರ್ಥರು ಗುರುಗುಣಸ್ತವನ ಸ್ತೋತ್ರದಲ್ಲಿ
ವ್ಯಾಸೇನ ವ್ಯುಪ್ತಬೀಜ: ಶ್ರುತಿಭುವಿ ಭಗವತ್ಪಾದಲಬ್ಧಾಂಕುರ ಶ್ರೀ:ಪ್ರತ್ನೈರೀ ಷತ್ಪ್ರಭಿನ್ನೋ ಜನಿ ಜಯಮುನಿನಾ ಸಮ್ಯಗುದ್ಭಿನ್ನಶಾಖ: |
ಮೌನೀಶೋ ವ್ಯಾಸರಾಜಾ ದುದಿತಕಿಸಲಯ:ಪುಷ್ಟಿತೋ ಯಂ ಜಯೀಂದ್ರಾ-
ಶಾಸ್ತ್ರಯೆಂಬ ಭೂಮಿಯಲ್ಲಿ ವೇದವ್ಯಾಸರು ಬಿತ್ತಿದ ಬೀಜ ಮಧ್ವಾಚಾರ್ಯರಿಂದ ಅಂಕುರಿಸಿತು. ನಂತರ ಜಯತೀರ್ಥರಿಂದ ಹರಡಿ ವ್ಯಾಸರಾಜರಿಂದ ರೆಂಬೆ ಕೊಂಬೆಗಳು ಬಂದು ,ಶ್ರೀ ವಿಜಯೇಂದ್ರ ತೀರ್ಥರಿಂದ ಹೂ ಬಿಟ್ಟುತು ಎಂದು ವಿಜಯೀಂದ್ರತೀರ್ಥರನ್ನು ಕೊಂಡಾಡಿದರೆ ಹಾಗೆಯೇ ಇವರು ಎಲ್ಲಾ 64 ಕಳೆಯ ನಿಪುಣರು. ಶ್ರೀಗಳನು ಶಾಸ್ತ್ರದಲ್ಲಿ ಮತ್ತು 64 ವಿದ್ಯೆಯ ಪರೀಕ್ಷೆ ಮಾಡಲು ಬಂದ ಕುಹಕಿಗಳು ಶ್ರೀ ವಿಜಯೇಂದ್ರರಲ್ಲಿ ಸೋತು ಶರಣಾಗಿದ್ದಾರೆ.
ಶಿಲ್ಪಕಳಾಚಾತುರ್ಯ
ಒಮ್ಮೆ ಲೋಹಶಿಲ್ಪದಲ್ಲಿ ಹೆಸರುವಾಸಿಯಾಗಿದ ಪಾಂಡ್ಯದೇಶದಲ್ಲಿ ನರಸಿಂಹ ವೀರರಾಮನ್ ಎಂಬ ಪಾಳೇಗಾರನ ತಾನೇ ಉತ್ತಮ ಕಲೆಗಾರ, ತನಗೆ ಸರಿಸಾಟಿಯಿಲ್ಲವೆಂದು ಭಾವಿಸಿ, ಒಮ್ಮೆ ಶ್ರೀ ವಿಜಯೀಂದ್ರ ಶ್ರೀಗಳ ಬಳಿ ಬಂದು ತನ್ನ ವಿದ್ಯೆಯ ಪ್ರತಿಭೆಯನ್ನು ತೋರಿಸಿ ಅವನು ನಿರ್ಮಾಣ ಮಾಡಿದ ನಟರಾಜ, ಭವಾನಿ, ಷಣ್ಮುಖ ಇನ್ನು ಹಲವಾರು ಪ್ರತಿಮೆಯನ್ನು ಮಾಡಿ, ನೀವೂ (ಶ್ರೀ ವಿಜಯೇಂದ್ರತೀರ್ಥರು) ನಿಮ್ಮ ಕಲೆಗಾರಿಕೆ ವಿದ್ಯೆಯನ್ನು ತೋರಿಸಬಲ್ಲಿರಾ ಎಂದು ಪ್ರಶ್ನಿಸಿದನು.
ಶ್ರೀಗಳು ಅವನ ಸವಾಲನ್ನು ಒಪ್ಪಿದರು , ಕೂಡಲೇ ಮೇಣದ ಮುದ್ದೆಯನ್ನು ತೆಗೆದುಕೊಂಡು ತುಳಸಿಯ ಕಾಷ್ಟವನ್ನು ಕೈಯಲ್ಲಿ ಹಿಡಿದು, ಬರೀ ಮೇಣದ ಮುದ್ದೆಗಳಿಂದಲೇ ಕೆಲವೇ ಗಂಟೆಗಳಲ್ಲಿ ಉತ್ತಮವೂ, ಶಿಲ್ಪಶಾಸ್ತ್ರಕ್ಕೆ ಅನುಗುಣವೂ ಆದ ಯೋಗಾನರಸಿಂಹ, ರಾಮ, ಕೃಷ್ಣ, ಭೂವರಾಹ ಮುಂತಾದ ಮೂರ್ತಿಗಳನ್ನು ತಯಾರಿಸಿದರು. ಅವರು ಶ್ರೀಗಳ ಕಲಾ ಚಮತ್ಕಾರವನ್ನು ಕಂಡು ನಿಬ್ಬೆರಗಾದ.
ಶ್ರೀಗಳನ್ನು ಕೋರಿಕೊಂಡ ನರಸಿಂಹ ವೀರರಾಮನ್ ಸ್ವಾಮಿ ತಾವು ತಯಾರಿಸಿದ ಈ ಕಲಾಕೃತಿಗಳು ನನ್ನನ್ನು ಜಯಿಸಿದ ಸ್ಮಾರಕಕ್ಕಾಗಿ ಶಾಶ್ವತವಾಗಿ ಇರಬೇಕೆಂದು ಎಂದು ಪ್ರಾರ್ಥಿಸಲು ಶ್ರೀಗಳು ಮರುದಿನವೇ ತಾವು ತಯಾರಿಸಿದ ಪ್ರತಿಮೆಗಳ ಪಡಿಯಚ್ಚು ತಯಾರಿಸಿ, ತಾಮ್ರದ ಲೋಹದಿಂದ ಎರಕವನ್ನು ಹಾಕಿ ಅತಿ ಸುಂದರವಾದ ಪ್ರತಿಮೆಗಳನ್ನು ತಯಾರಿಸಿ ತೋರಿಸಿದರು. ಶ್ರೀಗಳು ತಮ್ಮ ಅಮೃತಹಸ್ತದಿಂದಲೇ ನಿರ್ಮಿಸಿದ ಅನೇಕ ಮೂರ್ತಿಗಳೂ ಇಂದಿಗೂ ಪೂಜಿತಗೊಳ್ಳುತ್ತಿದೆ.
ವಿಷಕುಡಿದು ಜೀರ್ಣಕೊಂಡರು
ಒಮ್ಮೆ ಗಂಗಾಧರ ಶರ್ಮನೆಂಬುವ ಪಂಡಿತನು ಶ್ರೀಗಳೊಂದಿಗೆ ವಾದದಲ್ಲಿ ಸೋತು, ಸೋತು ಮನಸ್ಥಿತಿಯಲ್ಲಿ ತಾನೇ ತಂದಿದ್ದ ವಿಷವನ್ನು ಕುಡಿದು ಜಯಿಸುವಂತೆ ಪರೀಕ್ಷೆಯೊಡ್ಡಿದನು.
ತನ್ನ ತಪ್ಪಿನ ಅರಿವಾಗಿ ಸ್ವಾಮಿಗಳಲ್ಲಿ ಅಪರಾಧವನ್ನು ಕ್ಷಮಿಸಿ ವಿಷಪ್ರಾಶನವನ್ನು ಬೇಡವೆಂದು ಕೋರಿದನು. ಆದರೆ ಶ್ರೀಗಳು ತಮ್ಮ ಪ್ರತಿಜ್ಞಾಭಂಗಕ್ಕೆ ಒಪ್ಪಲಿಲ್ಲ. ಶ್ರೀಗಳು ವಿಷವನ್ನು ಕುಡಿದು ಶ್ರೀಗಳ ದೇಹವೆಲ್ಲಾ ಕಪ್ಪಾಯಿತು. ಆದರೆ ಅವರ ಮುಖದಲ್ಲಿನ ಸಾತ್ವಿಕ ತೇಜಸ್ಸು ಮಾತ್ರ ಕಂಗೊಳಿಸುತ್ತಿತ್ತು. ಆಗಲೇ ಶ್ರೀಗಳವರ ಕಂಠದಿಂದ ಹೊರಹೊಮ್ಮಿತ್ತು ನರಸಿಂಹನ ಸ್ತೋತ್ರ. ಶ್ರೀನರಸಿಂಹ ದೇವರ ವಿಶೇಷ ಅನುಗ್ರಹದಿಂದ ವಿಷ ಜೀರ್ಣವಾಯಿತು.
ಹನುಮನಾದ ಬಸವ :
ಕುಂಭಕೋಣದಲ್ಲಿ ಶ್ರೀ ವಿಜಯೀಂದ್ರರಿಂದ ಪರಾಜಿತರಾಗಿ ಅನ್ಯದೇಶಕ್ಕೆ ಹೋಗಿ ನೆಲೆಸಿದರು ಶ್ರೀ ಲಿಂಗರಾಜೇಂದ್ರರು. ಆದರೆ ಅವರು ಕುಂಭಕೋಣದ ಹೊರಭಾಗದಲ್ಲಿ ನೆಲೆಸಿದ್ದನು. ಶಿಷ್ಯರಲ್ಲೊಬ್ಬರು ಮಾತ್ರ ಕುಂಭಕೋಣದ ಸಕಲ ದೇವಾಲಯಗಳ ಆಡಳಿತಕ್ರಮ ಶ್ರೀವಿಜಯೀಂದ್ರರ ಮೇಲ್ವಿಚಾರಣೆಯಲ್ಲಿ ಜರುಗುತ್ತಿತ್ತು. ದ್ವೈತ-ಅದ್ವೈತ-ವಿಶಿಷ್ಟ್ಯಾದಿ ಮತೀಯರೆಲ್ಲರೂ ಆತ್ಮೀಯಭಾವನೆಯಿಂದ ಅಣ್ಣತಮ್ಮಂದಿರಂತೆ ಇರುತ್ತಿದ್ದರು. ಹೀಗಿರುವಾಗ
ಶೈವ ಮತದವರು ಇವರುಗಳ ಮಧ್ಯೆ ವೈರವನ್ನು ಬಿತ್ತಲು ಪ್ರಾರಂಭಿಸಿದರು. ಕುಂಭೇಶ್ವರ ಸಾರಂಗಪಾಣಿ ದೇವಾಲಯಗಳ ಮಧ್ಯೆ ಒಂದು ಸರೋವರವಿದೆ. ಪ್ರಾಚೀನ ಕಾಲದಿಂದ ಅದು ಸಾರಂಗಪಾಣಿ ಗುಡಿಗೆ ಶೈವರ ಸೇರಬೇಕೆಂದು ಕುತಂತ್ರದಿಂದ ಕೆಲವರು ಕುಂಭೇಶ್ವರನ ವಾದವನ್ನಿಟ್ಟರು. ಅದ್ವೈತವಿಶಿಷ್ಟ್ಯಾದ್ವೈತಿಗಳಲ್ಲಿ ದೊಡ್ಡ ವಾಗ್ವಾದ-ದ್ವೇಷ-ಅಸೂಯೆ ಬೆಳೆಯಿತು. ಉಭಯ ಪಂಗಡದವರೂ ಶ್ರೀಗಳವರನ್ನು ಭೇಟಿ ಮಾಡಿ ವಿಚಾರ ತಿಳಿಸಲು, ಶ್ರೀಗಳು ನ್ಯಾಯವಾಗಿ ಈ ಸರೋವರ ಸಾರಂಗಪಾಣಿಗುಡಿಗೇ ಸೇರಿದ್ದೂ, ಆದರೂ, ಎಲ್ಲರಿಗೂ ಅನುಕೂಲವಾಗುವಂತೆ, ಆ ಸರೋವರವನ್ನು ಉಭಯ ದೇವಾಲಯದವರೂ ಕೊಟ್ಟರು. ಎಲ್ಲರೂ ಒಪ್ಪಿದರು. ಉಪಯೋಗಿಸಬೇಕೆಂದು ತೀರ್ಮಾನ ಆದರೆ ಕೆಲವು ದಿನಗಳ ತರುವಾಯ, ಈ ಶೈವರು ಮತ್ತೆ ಕುಂಭೇಶ್ವರ ದೇವಾಲಯದ ಅರ್ಚಕರಿಗೆ ವಿಷಬೀಜ ಬಿತ್ತಲು, ಅವರು ಇಡೀ ಸರೋವರ ನಮಗೇ ಬರಬೇಕೆಂದು ವಾದ ಮಂಡಿಸಿದರು. ಆಗ ಶ್ರೀಗಳು ಹೇಳಿದರು “ಈಗ ಇಬ್ಬರೂ ಉಪಯೋಗಿಸುತ್ತಿದ್ದೀರಿ. ವಾಗ್ವಾದದಲ್ಲಿ ಈ ಸರೋವರ ಅಕಸ್ಮಾತ್ ಮುಂದೆ ವೈಷ್ಣವರಿಗೇ ಬರಬೇಕೆಂದು ಸಮ್ಮತವಾದರೆ, ತಮಗೆ ಇದರ ಅಧಿಕಾರವೇ ಇರುವುದಿಲ್ಲ, ಮತ್ತೊಮ್ಮೆ ಯೋಚಿಸಿ” ಎಂದು ಶೈವರಿಗೆ ಹೇಳಿದರು. ಆದರೆ ಅವರು ಅದಕ್ಕೆ ಒಪ್ಪದೇ ತಮಗೇ ಸಂಪೂರ್ಣ ಅಧಿಕಾರ ಬೇಕೆಂದು ಕೇಳಿದರು. ಆಗ ಶ್ರೀಗಳು ಹೇಳಿದರು “ನಿಮ್ಮ ವಾದದಂತೆ ಈ ಸರೋವರದಲ್ಲಿ ಶೈವಚಿಹ್ನೆಗಳೇ ಜಾಸ್ತಿಯಿದ್ದರೆ ಈ ಜಾಗ ಶೈವರಿಗೆ, ಅಥವಾ ವೈಷ್ಣವ ಚಿಹ್ನೆಯಿದ್ದರೆ ವೈಷ್ಣವರಿಗೆ” ಎಂದರು. ಶೈವಸನ್ಯಾಸಿಗಳ ಶಿಷ್ಯರು ಅಂದು ರಾತ್ರಿಯೇ ಸರೋವರದ ಬಳಿ ಹೋಗಿ ತಾವೇ ಸಿದ್ಧಪಡಿಸಿದ್ದ ಸಾವಿರಾರು ಕಲ್ಲಿನ ಲಿಂಗಗಳು, ಬಸವಣ್ಣನನ್ನು ಸರೋವರದಲ್ಲಿ ಹಾಕಿದರು.
ಶ್ರೀಗಳು ಮರುದಿನ ಉಭಯಪಕ್ಷಗಳ ನಾಲ್ಕಾರು ಜನರು ಸರೋವರದಲ್ಲಿ ಮುಳುಗಿ ಏನಾದರೂ ಚಿಹ್ನೆ ದೊರಕಿದರೆ ಮೇಲೆ ತರಲು ಹೇಳಿ, ಆ ಸರೋವರಕ್ಕೆ ಅಭಿಮಂತ್ರಿಸಿ, ಮಂತ್ರಾಕ್ಷತೆಯನ್ನು ಹಾಕಿದರು. ಅದರಂತೆ ಅವರು ಕೆಳಗಿಳಿದು ಹುಡುಕಿದಾಗ, ಅಲ್ಲಿ ನೂರಾರು ಹನುಮ ವಿಗ್ರಹಗಳು, ಸಾಲಿಗ್ರಾಮಗಳು ದೊರೆತವು. ಹತ್ತಾರುಬಾರಿ ಹುಡುಕಿದರೂ ಅಲ್ಲಿ ದೊರಕಿದ್ದುದೆ ಸಾಲಿಗ್ರಾಮ-ಹನುಮ ವಿಗ್ರಹಗಳೇ. ಆ ಶೈವರು ಹಾಕಿದ್ದ ಬಸವನ ವಿಗ್ರಹಗಳೆಲ್ಲ ಹನುಮನ ವಿಗ್ರಹವಾಗಿತ್ತು. ಕಲ್ಲಿನ ಲಿಂಗಗಳು ಸಾಲಿಗ್ರಾಮಗಳಾಗಿತ್ತು. ಶೈವರು ಪರಾಜಿತರಾಗಿ, ಇಡೀ ಸರೋವರದ ಹಕ್ಕು ವೈಷ್ಣವರಿಗೆ ಮಾತ್ರ ದೊರೆಯಿತು.
ದೊಂಬರಾಟದಲ್ಲಿ ಪರಿಣತಿ
ಒಮ್ಮೆ ಒಬ್ಬ ದೊಂಬರಾಟ ಶ್ರೀಗಳ ಚತು:ಷಷ್ಟಿ ಕಲೆಯಲ್ಲಿ ಪರಿಣಿತರೆಂಬುದನ್ನು ತಿಳಿದು, ದೊಂಬರಾಟದಲ್ಲಿ ಪರೀಕ್ಷಿಸಲು ಬಂದನು. ಆಗ ಸ್ವಾಮಿಗಳು “ನಾಳೆ ಮಧ್ಯಾಹ್ನ ಕುಂಭೇಶ್ವರನ ದೇವಾಲಯದ ಪಟಾಂಗಣದಲ್ಲಿ ನಿನ್ನ ವಿದ್ಯೆಯನ್ನು ಪ್ರದರ್ಶಿಸು. ಅಲ್ಲೇ ನಮ್ಮೀರ್ವರ ಪರೀಕ್ಷೆಯಾಗಲಿ” ಎಂದರು. ಇಡೀ ಊರಿನ ಜನರೆಲ್ಲ ಸಹಸ್ರಾರು ಸಂಖ್ಯೆಯಲ್ಲಿ ಅಲ್ಲಿ ನೆರೆದಿದ್ದರು.
ದೊಂಬರವನು ನಡೆಯುವುದು, ಚಮತ್ಕಾರಗಳನ್ನು ತನ್ನ ವಿದ್ಯೆಯನ್ನು ದೊಡ್ಡ ಪ್ರದರ್ಶಿಸುತ್ತಾ ಬೊಂಬಿನ ತೋರಿಸುವುದು ಮೇಲೇರಿ ಹಗ್ಗದ ಮೇಲೆ ಅಲ್ಲಿ ವಿವಿಧ ಇತ್ಯಾದಿ ಅದ್ಭುತ ವ್ಯಾಪಾರದಿಂದ ಜನರನ್ನು ಮುಗ್ಧಗೊಳಿಸಿದರು. ಶ್ರೀಗಳೂ ಅವನ ಕೌಶಲ್ಯವನ್ನು ಮೆಚ್ಚಿದರು. ಆ ದೊಂಬರವನು ಪ್ರದರ್ಶಿಸಿರೆಂದನು. ಶ್ರೀಗಳು ತಮ್ಮ ಶ್ರೀಗಳನ್ನು ಶಿಷ್ಯರನ್ನು ಬಾಳೇನಾರನ್ನು ಕರೆಸಿ, ಒಂದಕ್ಕೊಂದರಂತೆ ಕುಂಭೇಶ್ವರನ ದೇವಾಲಯದ ಸಾರಂಗಪಾಣಿ ದೇವಾಲಯದ ಗೋಪುರದವರೆಗೆ ಕಟ್ಟಿರಿ ಎಂದರು. ದೊಂಬರವನು ದಂಗಾದನು. ಶ್ರೀಗಳು ಕುಂಭೇಶ್ವರನ ಗುಡಿಯ ಗೋಪುರದ ಮೇಲೆ ನಿಂತು, ಎಲ್ಲ ಜನರು ನೋಡುತ್ತಿರುವಂತೆಯೇ ಕುಂಭೇಶ್ವರನ ದೇವಾಲಯದಿಂದ ಸಾರಂಗಪಾಣಿ ದೇವಾಲಯದ ಗೋಪುರದವರೆಗೆ ಕಟ್ಟಲಾದ ಎಳೆಯ ಬಾಳೇನಾರಿನ ಮೇಲೆ ಪಾದುಕೆಯನ್ನು ಹಾಕಿಕೊಂಡು ಲೀಲಾಜಾಲವಾಗಿ ನಡೆದರು. ಈ ರೀತಿ ದೊಂಬರವಿದ್ಯೆಯಲ್ಲೂ ಪರಿಣತರೆಂಬುದನ್ನು ತೋರಿಸಿದರು. ದೊಂಬ ಶರಣಾಗತನಾದನು.
ಮಂತ್ರಕ್ಕೆ ಪ್ರತಿಮಂತ್ರ
ಶ್ರೀವಿಜಯೀಂದ್ರರು ನಿಗದಿತ ಸ್ಥಳಕ್ಕೆ ತಮ್ಮ ಪಲ್ಲಕ್ಕಿಯಲ್ಲಿ ಕುಳಿತು ಹೊರಟರು. ಅದೇ ಸಮಯಕ್ಕೆ ಶೈವಸನ್ಯಾಸಿಗಳೂ ಮೇನೆಯಲ್ಲಿ ಬಂದರು. ಶೈವರ ಲಿಂಗರಾಜೇಂದ್ರರು. ಅವರುಗಳು ಮುಖ್ಯಸ್ತರು ಮಧ್ಯದಲ್ಲಿ ಬಸವರಾಜೇಂದ್ರ ಬಿರುದಾಂಕಿತ ವಿಜಯೀಂದ್ರರನ್ನು ನೋಡಿದ ಅಟ್ಟಹಾಸದಿಂದ ಮೇನೆಯಿಂದಿಳಿದು, ಅಲ್ಲಿಯೇ ಇದ್ದ ಅಡ್ಡಗೋಡೆಯಮೇಲೆ ವ್ಯಾಘ್ರಾಸನ ಹಾಕಿ ಕುಳಿತರು. ಮಂತ್ರಶಕ್ತಿಯಿಂದ ಗೋಡೆ ನಡೆಯಿತು. ವಿಜಯೀಂದ್ರರು ಇದನ್ನು ನೋಡಿ ಪಲ್ಲಕ್ಕಿಯನ್ನು ಹೊತ್ತಿದ್ದ ಶಿಷ್ಯರನ್ನು ಕೆಳಗಿಳಿಸಲು ಆಜ್ಞಾಪಿಸಿದರು. ನಂತರ ಯಾರ ಸಹಾಯವೂ ಇಲ್ಲದೆ ಪಲ್ಲಕ್ಕಿ ಅಕಾಶ ಮಾರ್ಗಕ್ಕೆ ಹಾರಿತು. ಶ್ರೀಗಳು ಜಪನಿರತರಾಗಿದ್ದರು. ಪ್ರತಿವಾದಿಗಳ ಗೋಡೆ ನಡೆದು ಬರುತ್ತಿದ್ದರೆ, ಶ್ರೀಗಳ ಪಲ್ಲಕ್ಕಿ ಹಾರುತ್ತಿದೆ. ಹೀಗೆ ಮಂತ್ರಕ್ಕೆ ತಿರುಮಂತ್ರ ನೀಡಿದರು ಶ್ರೀ ವಿಜಯೀಂದ್ರರು.
ನಾರಾಯಣ ಶಬ್ಧ ವಾಕ್ಯರ್ಥ
ಒಮ್ಮೆ ಅಪ್ಪಯ್ಯದೀಕ್ಷಿತರು ಶ್ರೀಗಳಿಗೆ “ನಾರಾಯಣ” ಎಂದರು. ನಮಸ್ಕರಿಸಿದಾಗ ವಿಜಯೀಂದ್ರರು ಆಗ ನಾರಾಯಣ ಶಬ್ದದ ಬಗ್ಯೆ ವಾಗ್ವಾದ ನಡೆಯಿತು. ಶ್ರೀವಿಜಯೀಂದ್ರರು “ನಾರಾಯಣೋ ವಾ ಇದ್ರಮಗ್ರ ಆಸೀತ್”, “ನಾರಾಯಣೋ ಇದಮಗ್ರ ಆಸೀತ್ ಬ್ರಹ್ಮಾನ ಚ ಶಂಕರ:” ಇತ್ಯಾದಿ ಶ್ರುತಿಗಳಿರುವುದರಿಂದ ಪ್ರಳಯಕಾಲದಲ್ಲಿದ್ದನೆಂದು ನಾರಾಯಣನೊಬ್ಬನೇ ಪ್ರತಿಪಾದನ ಮಾಡಿದರು. ಅಪ್ಪಯ್ಯದೀಕ್ಷಿತರು ನಾರಾಯಣ ಶಬ್ದವನ್ನು ಆಗ ಶಿವಪರವೆಂದು ಪ್ರತಿಪಾದನಮಾಡಲು ಪ್ರಯತ್ನಿಸಿದಾಗ, ನಾರಾಯಣ ಪದದ ಕಡೆಯ ಪದ “ನ” ಕಾರ ಬರದೆ “ಣ” ವಿರುವುದರಿಂದ ಶಿವಪರತ್ವ ಅಸಂಭಾವಿತವೆಂದು ಪ್ರತಿಪಾದಿಸಿದರು ವಿಜಯೀಂದ್ರರು. ವಾಕ್ಯಾರ್ಥವಾಯಿತು. ಸೋಲೊಪ್ಪಿಕೊಂಡರು. ಕೊನೆಗೆ ಈ ರೀತಿಯಲ್ಲಿ ತಿಂಗಳುಗಟ್ಟಲೆ ಅಪ್ಪಯ್ಯ ನಿರ್ಮಾತ್ಸರ್ಯ ಅವರಿಗೆ ದೀಕ್ಷಿತರು ಹೃದಯಿಗಳಾದ ತಮ್ಮ ಶ್ರೀಗಳು ಅವರ ವಿದ್ಯಾ, ಪಾಂಡಿತ್ಯವನ್ನು ವಿಶ್ವಾಸಾದಿಗಳನ್ನು ಶ್ಲಾಘಿಸಿ ವಿಶೇಷ ಮರ್ಯಾದೆಯನ್ನು ಮಾಡಿ ಫಲಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಶ್ಚತುರಧಿಕ-ಶತಗ್ರಂಥರತ್ನಪ್ರಣೇತಾ :
ಶ್ರೀವಿಜಯಿಂದ್ರತೀರ್ಥ ಸಾರಸ್ವತಲೋಕಕೆ 104 ಗ್ರಂಥಗಳ ಕೊಡುಗೆ ನೀಡಿದರೆ.
2) ತೈತ್ತರೀಯಭಾಷ್ಯ ಟೀಕಾ ಟಿಪ್ಪಣಿ
3) ಬೃಹದಾರಣ್ಯಕಭಾಷ್ಯ ಟೀಕಾ ಟಿಪ್ಪಣಿ.
4) ಈಶಾವಾಸ್ಯಭಾಷ್ಯ ಟೀಕಾ ಟಿಪ್ಪಣಿ
5) ಕಾಠಕಭಾಷ್ಯ ಟೀಕಾ ಟಿಪ್ಪಣಿ
6) ಛಾಂದೋಗ್ಯಭಾಷ್ಯ ಟೀಕಾ ಟಿಪ್ಪಣಿ
7) ಅಥರ್ವಣಭಾಷ್ಯ ಟೀಕಾ ಟಿಪ್ಪಣಿ
8) ಮಾಂಡುಕ್ಯಭಾಷ್ಯ ಟೀಕಾ ಟಿಪ್ಪಣಿ
9) ಷಟ್ ಪ್ರಶ್ನೆ ಭಾಷ್ಯ ಟೀಕಾ ಟಿಪ್ಪಣಿ.
10) ತಲವಕಾರೋಪನಿಷದ್ಭಾಷ್ಯ ಟೀಕಾ ಟಿಪ್ಪಣಿ.
11) ಶ್ರೀವ್ಯಾಸರಾಜವಿಜಯ:
12) ಸುಭದ್ರಾ ಧನಂಜಯ:
13) ಉಭಯಗ್ರಸ್ತರಾಹೂದಯ:
14) ವ್ಯಾಸರಾಜಾಭ್ಯುದಯ :
15) ದುರಿತಾಪಹಾರ ಸ್ತೋತ್ರ
16) ಶ್ರೀನೃಸಿಹಸ್ತುತಿ
17) ಶ್ರೀಪಾದರಾಜಾಷ್ಟಕಂ
18) ಶ್ರೀವ್ಯಾಸರಾಜ ಸ್ತೋತ್ರಂ
19) ವಿಷ್ಣುಸ್ತುತಿ ವ್ಯಾಖ್ಯಾನ
20) ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ.
21) ಯಾಕೆಲೆ ಮನವೆ ನೀ ಎನ್ನ ಕೀಕಟ ದೇಶಕೆ
22) ಚೆಂದಿರ ರಾಮನ್ನರಾಣಿ ಸೀತೆಯ ಮುಖದಂದಕೆ
23) ಓಕಾರವಾದಾರ್ಥ
24) ಸೂತಾರ್ಥಸಂಗ್ರಹ
25) ಅಣುವ್ಯಾಖ್ಯಾನಟಿಪ್ಪಣಿ
26) ನ್ಯಾಯವಿವರಣ ಟೀಕಾ
27) ಶ್ರವಣವಿಧಿವಿಲಾಸ
28) ಚಿತ್ರಮೀಮಾಂಸಾ ಖಂಡನಂ
29) ದ್ವಾಸುಪರ್ಣಾ ಇತ್ಯಾದಿನಾಂ ಭೇದಪರತ್ವಸಮರ್ಥನಂ
30) ಗೀತಾತಾತ್ಪರ್ಯನ್ಯಾದೀಪಿಕಾ ಟಿಪ್ಪಣಿ.
31) ಭೇದ ಕುಸುಮಾಂಜಲಿ:
32) ತತ್ತ್ವವಿವೇಕಾ ಟಿಪ್ಪಣಿ.
33) ಋಗ್ಭಾಷ್ಯಟಿಪ್ಪಣಿ.
34) ಬ್ರಹ್ಮಸೂತ್ರಭಾಷ್ಯಟೀಕಾ ಟಿಪ್ಪಣಿ- ತತ್ತ್ವಮಾಣಿಕ್ಯಪೇಟಿಕಾ .
35) ಬ್ರಹ್ಮಸೂತ್ರನ್ಯಾಯಸಂಗ್ರಹ.
36) ಬ್ರಹ್ಮಸೂತ್ರಮೇಲೆ ನಯಮುಕುರ.
37) ಬ್ರಹ್ಮಸೂತ್ರಮೇಲೆ ನಯಮಂಜರಿ.
38)ಬ್ರಹ್ಮಸೂತ್ರ ಅಧಿಕರಣ ನ್ಯಾಯಮಾಲಾ
39) ಅಧಿಕರಣ ರತ್ನಮಾಲಾ
40) ನ್ಯಾಯಮೌಕ್ತಿಕಮಾಲಾ .
41) ಅದ್ವೈತಶಿಕ್ಷಾ.
42) ಅಪ್ಪಯ್ಯಕಪೋಲಚಪೇಟಿಕಾ.
43) ತುರೀಯಶಿವಖಂಡನಂ
44) ಭೇದವಿದ್ಯಾವಿಲಾಸ:.
45) ಮಧ್ವಸಿದ್ಧಾಂತಸಾರೋದ್ಧಾರ:
46) ಮಾಧ್ವತಂತ್ರಮುಖಭೂಷಣಂ
47) ಮಧ್ವಾಧ್ವಕಂಟಕೋದ್ಧಾರ:
48) ಮೀಮಾಂಸನಯನಕೌಮದೀ
49) ನಯಪಂಚಕಮಾಲಾ.
50) ಶೈವಸರ್ವಸ್ವಖಂಡನಂ.
51) ವಾಗ್ವೈಖರೀ
52) ವಾದಮಾಲಿಕಾ.
53) ನ್ಯಾಯಧ್ವದೀಪಿಕಾ
54) ಶ್ರುತಿತಾತ್ಪರ್ಯಕೌಮದೀ.
55) ಶ್ರುತ್ಯರ್ಥಸಾರ:
56) ಸರ್ವಸಿದ್ಧಾಂತಸಾರಸಾರವಿವೇಚನಂ
57) ನ್ಯಾಯಾಮೃತಟಿಪ್ಪಟಿ ಆಮೋದ.
58) ನ್ಯಾಯಾಮೃತ ನ್ಯಾಯಮಾಲಾ.
59) ನ್ಯಾಯಾಮೃತ ಜೈಮಿನೀಯ ನ್ಯಾಯಮಾಲಾ.
60) ನ್ಯಾಯಮಾಲಾ.
61) ತಾತ್ಪರ್ಯಚಂದ್ರಿಕಾವ್ಯಾಖ್ಯಾನ ನ್ಯಾಯಮಾಲಾ.
62) ಚಂದ್ರಿಕೋದಾಹೃತ ನ್ಯಾಯವಿವರಣಂ.
63) ತಾತ್ಪರ್ಯ ಚಂದ್ರಿಕಾ ಭೂಷಣಂ
64) ತರ್ಕತಾಂಡವ ವ್ಯಾಖ್ಯಾನ- ಯುಕ್ತಿರತ್ನಾಕರ.
65) ಚಕ್ರಮೀಮಾಂಸಾ.
66) ಪರತತ್ತ್ವಪ್ರಕಾಶಿಕಾ.
67) ಉಪಸಂಹಾರವಿಜಯ:
68) ನಾರಾಯಣಶಬ್ದಾರ್ಥನಿರ್ವಚನಂ
69) ರಾಮಾನುಜಮತರೀತ್ಯಾಸೂತಾರ್ಥ:
70) ಪ್ರಮಾಣಲಕ್ಷಣಟೀಕಾವ್ಯಾಖ್ಯಾನ.
71) ಕಥಾಲಕ್ಷಣಟೀಕಾವ್ಯಾಖ್ಯಾನ.
72) ತತ್ತ್ವಸಂಖ್ಯಾನ ಟೀಕಾ ವ್ಯಾಖ್ಯಾನ.
73) ತತ್ವೊದ್ಯೋತ ಟೀಕಾವ್ಯಾಖ್ಯಾನ- ಗೂಢಭಾವಪ್ರಕಾಶಿಕಾ.
74) ವಿಷ್ಣುತತ್ವನಿರ್ಣಯಟೀಕಾವ್ಯಾಖ್ಯಾನ
75) ಮಾಯಾವಾದಖಂಡನವ್ಯಾಖ್ಯಾನ
76) ಉಪಾಧಿಖಂಡನವ್ಯಾಖ್ಯಾನ.
77) ಮಿಥ್ಯಾತ್ವಾನುಮಾನಖಂಡನ ವ್ಯಾಖ್ಯಾನ.
78) ಪ್ರಮಾಣಪದ್ಧತಿವ್ಯಾಖ್ಯಾನ
79) ಅವಶಿಷ್ಠಪ್ರಕರಣಗ್ರಂಥ- 1
80) ಅವಶಿಷ್ಠಪ್ರಕರಣಗ್ರಂಥ- 2.
81) ಕುಚೋದ್ಯಕುಠಾರ.
82) ಭಟ್ಟೋಜಿಕುಟ್ಟನಂ.
83) ಅಣುಭಾಷ್ಯಟಿಪ್ಪಣಿ.
84) ಪದಾರ್ಥಸಂಗ್ರಹ.
85) ಪ್ರಣವದರ್ಪಣಖಂಡನಂ.
86) ಭೇದಚಿಂತಾಮಣಿ:
87) ಭೇದಪ್ರಭಾ.
88) ಭೇದಾಗಮಸುಧಾಕರ :
89) ಭೇದಸಂಜೀವಿನೀ.
90) ಲಿಂಗಮೂಲಾನ್ವೇಷಣವಿಚಾರ:.
91) ವಿಷ್ಣುಪಾರಮ್ಯ.
92) ವಿರೋಧೋದ್ಧಾರ:
93) ಸನ್ಮಾದೀಪಿಕಾ.
94) ನ್ಯಾಯಾಮೃತಗುರ್ವಾಮೋದ:
95) ನ್ಯಾಯಾಮೃತಮಧ್ಯಮಾಮೋದ:
96) ಗೀತಾತಾತ್ಪರ್ಯನಿರ್ಣಯ ವ್ಯಾಖ್ಯಾನ,
97) ಗೀತಾವ್ಯಾಖ್ಯಾನ,
98) ಗೀತಾಕ್ಷರಾರ್ಥ:.
99) ಪಿಷ್ಟಪಶುಮೀಮಾಂಸಾ.
100) ನ್ಯಾಯದೀಪಿಕಾ ಟಿಪ್ಪಣಿ.
101) ಗೀತಾಭಾಷ್ಯಪ್ರಮೇಯದೀಪಿಕಾ ಟಿಪ್ಪಣಿ.
102) ಆನಂದತಾರತಮ್ಯವಾದಾರ್ಥ :.
103) ಕರ್ಮನಿರ್ಣಯವ್ಯಾಖ್ಯಾನ.
ಕಾಶಿ ಮಠ ಸ್ಥಾಪನೆ
ಶ್ರೀ ವಿಜಯೀಂದ್ರ ತೀರ್ಥರು ಗೌಡ ಸಾರಸ್ವತ ಬ್ರಾಹ್ಮಣರಿಗೆ ಮಾಧ್ವ ದೀಕ್ಷೆ ಕೊಟ್ಟ ಕಾಶಿ ಮಠ ಸ್ಥಾಪನೆ ಮಾಡಿದಾರೆ . ಇಂದಿಗು ಶ್ರೀ ವಿಜಯೀಂದ್ರ ತೀರ್ಥರು ದಯಪಾಲಿಸಿದ ನರಸಿಂಹ ವಿಗ್ರಹ ಹಾಗು ಮಹಾಲಕ್ಷ್ಮಿಯ ವಿಗ್ರಹ ಮುಲ್ಕಿ ಹಾಗು ಆಲೆಪ್ಪಿಗಳಲ್ಲಿದೆ. ವಿಜಯೀಂದ್ರ ತೀರ್ಥರು ಯಾದವೇಂದ್ರ ತೀರ್ಥರಿಗೆ ಆಶ್ರಮವನ್ನು ಕೊಟ್ಟರು. ಯಾದವೇಂದ್ರ ತೀರ್ಥರಿಂದ ಕಾಶಿ ಮಠವು ಪ್ರಾರಂಭವಾಯಿತು.
ಶ್ರೀ ವಿಜಯೀ೦ದ್ರತೀರ್ಥರ ಸಮಕಾಲೀನ ಯತಿಗಳು
ಶ್ರೀ ವಾದಿರಾಜ ಗುರುಸಾರ್ವಭೌಮರು ,ಶ್ರೀ ಶ್ರೀನಿವಾಸತೀರ್ಥರು , ಶ್ರೀ ರಾಮತೀರ್ಥರು ,ಶ್ರೀ ಶ್ರೀನಿವಾಸತೀರ್ಥರು ,ಶ್ರೀ ಯಾದವೇಂದ್ರತೀರ್ಥರು – (ಶ್ರೀ ಕಾಶೀ ಮಠ) ,ಶ್ರೀ ಗೋವಿಂದ ಒಡೆಯರು, ಶ್ರೀ ಕಂಬಾಲೂರು ರಾಮಚಂದ್ರತೀರ್ಥರು
ಸಮಕಾಲೀನ ಪರವಾದಿ ಪಂಡಿತರು:
ಶ್ರೀ ನೃಸಿಂಹಾಶ್ರಮ ಮುನಿಗಳು ,ಶ್ರೀ ಲಿಂಗರಾಜೇಂದ್ರ ಸ್ವಾಮಿಗಳು ,ಶ್ರೀ ಅಪ್ಪಯ್ಯ ದೀಕ್ಷಿತರು, ಶ್ರೀ ಮಧುಸೂದನ ಸರಸ್ವತೀ, ಶ್ರೀ ಭುಟ್ಟೊಜೀ ದೀಕ್ಷಿತರು , ಶ್ರೀ ಮುರಳೀಧರ ಭಟ್ಟ, ಕಾಶೀ ಶ್ರೀ ಗಂಗಾಧರ ಭಟ್ಟ , ಶ್ರೀ ಪ್ರಭಂಜನ ಶರ್ಮ , ನವದ್ವೀಪ ಪಂಡಿತರು
, ಶ್ರೀ ಅಘಮರ್ಷಣ ತಾತಾಚಾರ್ಯರು, ಶ್ರೀ ಪಕ್ಷಧರ ಮಿಶ್ರ, ವಿದ್ಯಾಧರ, ಬಸವಭಟ್ಟ, ಶ್ರೀ ವಲ್ಲಭಾಚಾರ್ಯ, ಶ್ರೀ ತರಂಗಿಣೀ ರಾಮಾಚಾರ್ಯ, ಶ್ರೀ ಆನಂದಭಟ್ಟಾರಕರು, ಶ್ರೀ ಆನಂತಭಟ್ಟ , ಶ್ರೀ ಸೋಮನಾಥ, ಶ್ರೀ ಎಮ್ಮೆ ಬಸವ, ಶ್ರೀ ಅಂಬಲರಾಮರಾಯ, ಶ್ರೀ ಭಿಕ್ಷಾ ಮಠದ ಈಷಣ ಶಿವ, ಶ್ರೀ ಮಹಾಚಾರ್ಯ, ಶ್ರೀ ಎಂಬಾರು ರಾಮಾನುಜೀ ಅಯ್ಯಂಗಾರು, ಶ್ರೀ ವೆಂಕಟ ತಾತಾಚಾರ್ಯ, ಶ್ರೀ ವನಮಾಲೀಮಿಶ್ರ
ಶ್ರೀ ಸುಧೀಂದ್ರತೀರ್ಥರಿಗೆ ಸನ್ಯಾಸ :
ಶ್ರೀವಿಜಯೀಂದ್ರತೀರ್ಥರು ಮುಂದೆ ಸಂಸ್ಥಾನ ಜವಾಬ್ದಾರಿಯನ್ನು ಶ್ರೀ ಸುಧೀಂದ್ರತೀರ್ಥರಿಗೆ ವಹಿಸಿದರು.
ಶ್ರೀವಿಜಯೀಂದ್ರತೀರ್ಥರು ತಮ್ಮ ಕಾರ್ಯಾಕ್ಷೇತ್ರವಾದ ಕುಂಭಕೋಣದಲ್ಲಿ ಬಹುದಿನಗಳು ಅಲ್ಲೆಯೇ ವಾಸವಾಗಿದರು ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ತ್ರಯೋದಶಿ ಕುಂಭಕೋಣದಲಯೇ ಶ್ರೀವಿಜಯೀಂದ್ರತೀರ್ಥರು ಬೃಂದಾವನ ಪ್ರವೇಶ ಮಾಡಿದರು.
Comments
Post a Comment