Krishnadwaipayana Teertharu
ಇಂದು ಪ್ರಾತಃ ಸ್ಮರಣೀಯರಾದ ಶ್ರೀ ಕೃಷ್ಣದ್ವಯಪಾಯನ ತೀರ್ಥರ ಅವರ ಸ್ಮರಣೆ ಮಾಡಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ ಇವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಲಭ್ಯವಿಲ್ಲದಿದ್ದರು ಇವರ ಶಿಷ್ಯರ ಹಾಗೂ ಹರಿದಾಸರ ಕೃತಿಗಳಲ್ಲಿ ಗುರುಗಳ ವ್ಯಕ್ತಿತ್ವ ವರ್ಚಸ್ಸು ಮಹಿಮೆಗಳು ತಿಳಿಯುತ್ತವೆ
ಇವರ ಜನನ ಸುಮಾರು 1619-1669 ಇರಬಹುದು ಶ್ರೀ ಉತ್ತರಾದಿ ಮಠದ ಶ್ರೀ ವೇದವ್ಯಾಸ ತೀರ್ಥರಿಂದ ಯತ್ಯಾಶ್ರಮ ಸ್ವೀಕಾರ ಮಾಡಿದ ಮಹಾನುಭಾವರು ಪೂರ್ವಾಶ್ರಮದಲ್ಲಿ ಎಂದು ವರ್ಷದ ಬಾಲಕರಿರುವಾಗಲೇ ಮಹಾಬಲೇಶ್ವರ ಶ್ರೀ ಕೃಷ್ಣಾನದಿಯ ಉಗಮ ಸ್ಥಾನದಲ್ಲಿ ಪ್ರವಾಹವು ತುಂಬಿ ಹರಿಯುತ್ತಿರುವಾಗ ನದಿಯನ್ನು ದಾಟುವ ಛಲದಿಂದ ಈಜು ಬಿದ್ದರು ಪ್ರವಾಹದ ಸೆಳತಕ್ಕೆ ಕೈಸೊತು ಶ್ರೀ ರಾಮಚಂದ್ರನ ಸ್ಮರಿಸುತ್ತ ನದಿಯನ್ನು ದಾಟಿ ಭವ ಸಾಗರದ ದಡವನ್ನು ಹರಿಸ್ಮರಣೆಯಿಂದ ದಾಟಿ ಭಕುತರನ್ನು ದಾಟಿಸಿದ ಮಹಾನುಭಾವರು
ತಾವು ಉಪಾಸನಾ ಗೈಯುತ್ತಿದ್ದ ಭೀಮಾನದಿಯ ಕೂಸುಮೂರ್ತಿಯಲ್ಲಿ ಕೃಷ್ಣಾ ಸಂಗಮದ ಪರಿಯಂತ ಸುಮಾರು ಐದಾರು ಮೈಲು ಪ್ರದೇಶದಲ್ಲಿ ಸುಂದರವಾದ ತೆಂಗಿನ ತೋಟಗಳನ್ನು ನಿರ್ಮಿಸಿ ತಮ್ಮ ತಪೋಮಯ ಸಾಧನಗಮ್ಯವಾದ ಶ್ರೀವರಾಹದೇವರಿಗೆ ವಿಹಾರಾರ್ಥವಾಗಿ ವ್ಯವಸ್ಥೆ ಮಾಡಿದ್ದರು ಅಷ್ಟೇ ಅಲ್ಲದೆ ತೈಲಾಭ್ಯಂಗಾರ್ಥವಾಗಿ ವರಾಹ ದೇವರನ್ನು ಆಹ್ವಾನಿಸುತ್ತಿದ್ದರು
ಇಲ್ಲಿ ಭೀಮಾನದಿ ದಕ್ಷಿಣಾಭಿಮುಖವಾಗಿ ಹರಿಯುತ್ತಿರುವುದು ಇಲ್ಲಿಯ ಮತ್ತೋಂದು ವಿಶೇಷ
ಇವರ ಭವ್ಯವಾದ ದಿವ್ಯವಾದ ಬೃಂದಾವನದ ಪವಿತ್ರ ಸನ್ನಿಧಿಯಲ್ಲಿ ಸ್ವಪ್ನ ಸೂಚಿತರಾಗಿ ಸಾನಿಧ್ಯ ಪ್ರಕಟಿಸಿರುವ ಗುರುಗಳೆಂದರೆ ಅಂದರೆ ಅವರ ಬೃಂದಾವನದ ಜೊತೆಗೆ ಅಲ್ಲಿ ಶ್ರೀ ಜಯತೀರ್ಥರು ಶ್ರೀ ಜಿತಾಮಿತ್ರ ತೀರ್ಥರು ಶ್ರೀ ವೇದವ್ಯಾಸ ತೀರ್ಥರು ಶ್ರೀ ರಾಘವೇಂದ್ರತೀರ್ಥರು ಮತ್ತು ಶ್ರೀ ಸತ್ಯಬೋಧರ ವಿಶೇಷ ಸಾನಿಧ್ಯವು ಅಲ್ಲಿದೆ ಅದರ ಸಾಂಕೇತಿಕವಾಗಿ ಬೃಂದಾವನದ ಸುತ್ತಲು ಶಿಲೆಗಳಿವೆ
ಇವರು ಅನೇಕ ಮಠಗಳ ಪೀಠಾಧಿಪತಿಗಳ ಸಮಕಾಲೀನರಾಗಿ ಜೊತೆಗಿದ್ದವರು. ಶ್ರೀರಘುತ್ತಮತೀಥ೯ರು ಶ್ರೀ ವೇದವ್ಯಾಸತೀಥ೯ರು ಶ್ರೀವಿದ್ಯಾಧೀಶತೀಥ೯ರು ಶ್ರೀವೇದನಿಧಿತೀಥ೯ರು ಶ್ರೀಸತ್ಯವ್ರತತೀಥ೯ರು ಶ್ರೀಸತ್ಯನಿಧಿತೀಥ೯ರು ಶ್ರೀಸತ್ಯಾನಂದತೀಥ೯ರು ಶ್ರೀವಿದ್ಯಾಪತಿತೀಥ೯ರು ಹೀಗೆ ಅನೇಕ ಯತಿಶ್ರೇಷ್ಟರನ್ನು ಕಂಡು ಅವರ ಜೊತೆಗೆ ಇದ್ದ ಮಹಾನುಭಾವರು
ಶ್ರೀ ಕೃಷ್ಣದ್ವೈಪಾಯನತೀಥ೯ರು ಮಂತ್ರಾಲಯ ಮಠದ ಕಲಿಯುಗ ಕಾಮಧೇನುಗಳಾದ ಶ್ರೀರಾಘವೇಂದ್ರತೀಥ೯ರ ಗುರುಗಳಾದ ಶ್ರೀ ಸುಧೀಂದ್ರತೀಥ೯ರು .ರಾಯರು ಹಾಗೆ ಶ್ರೀಯಾದವೇಂದ್ರತೀಥ೯ರು ವ್ಯಾಸರಾಜ ಮಠದ ಕಂಬಾಲೂರು ಶ್ರೀರಾಮಚಂದ್ರತೀಥ೯ರು ಅನೇಕ ಮಹನೀಯರ ಸಮಕಾಲೀನವರು ಶ್ರೀಕೃಷ್ಣದ್ವೈಪಾಯನತೀಥ೯ರು ಗಂಗಾಸ್ನಾನ ಮಾಡಬೇಕೆಂದು ಮನಸ್ಸು ಮಾಡಿದರು.
ಕಾಶಿಯಾತ್ರೆ ಮಾಡಬೇಕು ಎಂದು ಯೋಚಿಸಿ ಉಗ್ರಾಣದಲ್ಲಿದ್ದ ಪಾತ್ರೆಗಳಲ್ಲಿ ಬೀಜಾಕ್ಷರ ಬರೆದು ನಾವು ಬರುವವರೆಗೂ ಪ್ರತಿನಿತ್ಯ ಇಲ್ಲಿ ಅನ್ನದಾನ ಮತ್ತು ವಿದ್ಯಾಥಿ೯ಗಳಿಗೆ ಪಂಡಿತರಿಗೆ ಕೊರತೆ ಆಗಬಾರದು ಎಂದು ಬರೆದು ಅಲ್ಲಿಂದ ಯಾತ್ರೆಗೆ ಹೊರಟರು.ಸ್ವಲ್ಪ ದೂರ ಹೋಗುವಲ್ಲಿಗೆ ಸಾಕ್ಷಾತ್ ಭಾಗೀರತಿ ಸೂಚನೆ ಮಾಡಿ ಎಲ್ಲಾ ತೀಥ೯ಗಳ ಸನ್ನಿದಾನದೊಂದಿಗೆ ಬಿರು ಬಿಸಿಲಿನಲ್ಲಿ ಒಂದು ಟೊಂಗೆಯಲ್ಲಿ ಗಂಗೆ ಆವಿಭಾ೯ವಳಾಗಿ ಕೃಷ್ಣದ್ವೈಪಾಯನರ ಶಿರಸ್ಸಿನಲ್ಲಿ ಹರಿದಿರುವುದು ಇಂದಿಗೂ ಸಾಕ್ಷಿಯಾಗಿದೆ.
ಕೃಷ್ಣದ್ವೈಪಾಯನತೀಥ೯ರು ಒಂದು ನರಸಿಂಹ ದೇವರು,8 ಮುಖ್ಯಪ್ರಾಣ ದೇವರ ಪ್ರತಿಷ್ಟೆ ಮಾಡಿದ್ದಾರೆ. ಕೀಲಕ ನಾಮ ಸಂವತ್ಸರ ಗ್ರೀಷ್ಮ ಋತು ಜೇಷ್ಟ ಶುದ್ಧ ಪೌಣ೯ಮಿಯಂದು ಇಹಲೋಕದ ಯಾತ್ರೆ ಮುಗಿಸಿ ಪರಮಾತ್ಮನ ಪುರಕ್ಕೆ ದಿವ್ಯವಿಮಾನದಲಿ ಸಾಗಿದರು. ಇವರ ಬೃಂದಾವನ ಕಾಯ೯ ನಿಮಾ೯ಣ ಮಾಡಿದವರು ಮುದ್ಗಲಚಾಯ೯ರು.
ರಾಯರು ಶಿಷ್ಯರಿಗೆ ಪಾಠವನ್ನು ಮಾಡುತ್ತಾ ಇರಬೇಕಾದರೆ ತಕ್ಷಣ ಆಕಾಶದ ಕಡೆಗೆ ದೃಷ್ಟಿ ಹಾಯಿಸಿ ನಗೆಮೊಗದಿಂದ ಕರ ಮುಗಿದರು ಅಲ್ಲಿದ್ದವರೆಲ್ಲರಿಗೆ ಏನು ಅಥ೯ವಾಗಲಿಲ್ಲ .ಗುರುಗಳನ್ನು ಕೇಳಿದಾಗ ಶ್ರೀ ಕೃಷ್ಣದ್ವೈಪಾಯನರು ಹರಿ ಪಾದ ಸೇರಿದರು. ವಿಮಾನರೂಢರಾಗಿ ಹೋಗುತ್ತಿದ್ದರು.ನಮ್ಮನ್ನು ಕಂಡು ಅಭಿನಂದಿಸಿದರು ನಾವು ಸಹ ಅವರಿಗೆ ಪ್ರತಿ ಅಭಿನಂದನೆ ಮಾಡಿದೆವು ಅಷ್ಟೆ ಎಂದರು. ರಾಯರು ನಾವು ಹೊರಡುವ ಕಾಲ ಯಾವಾಗ ಎಂದು ಕೃಷ್ಣದ್ವೈಪಾಯನರನ್ನು ಕೇಳಿದಾಗ ವಿಮಾನದಲ್ಲಿದ್ದ ಕೃಷ್ಣದ್ವೈಪಾಯನತೀಥ೯ರು ತಮ್ಮ ಕೈಯಿಂದ ಎರಡು,ಎರಡು,ಎರಡು ಎಂದು ಮೂರು ಬಾರಿ ಬೆರಳನ್ನು ತೋರಿಸಲು ರಾಯರ ಬೃಂದಾವನ ಪ್ರವೇಶ ಕಾಲ ಅಲ್ಲಿಂದ 2 ವಷ೯ 2 ತಿಂಗಳು 2 ದಿನ ಎಂದು ಹೇಳುತ್ತಾರೆ.
ಇಂತಹ ಗುರುಗಳ ಬೃಂದಾವನ ಭೀಮಾನದಿಯ ತಟದಲ್ಲಿರುವ ಕುಸುಮೂತಿ೯ ಎಂಬ ಗ್ರಾಮದಲ್ಲಿದೆ ರಾಯಚೂರಿನಿಂದ 30.k.m ದೂರದಲ್ಲಿದೆ


Comments
Post a Comment