Bannisi Gopi Harasidalu

ಶ್ರೀ  ಪುರಂದರದಾಸರ ಕೃತಿ 

 ರಾಗ ಬೃಂದಾವನಸಾರಂಗ     ಆದಿತಾಳ 

ಬಣ್ಣಿಸಿ ಗೋಪಿ ಹರಸಿದಳು ॥ ಪ ॥
ಎಣ್ಣೆಯನೊತ್ತುತ ಯದುಕುಲ ತಿಲಕಗೆ ॥ ಅ ಪ ॥

ಆಯುಷ್ಯವಂತನಾಗು ಅತಿ ಬಲ್ಲಿದನಾಗು ।
ಮಾಯದ ಖಳರ ಮರ್ದನನಾಗು ॥
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀನೊಡೆಯನಾಗೆನುತ ॥ 1 ॥

ಧೀರನು ನೀನಾಗು ದಯಾಂಬುಧಿಯಾಗು ।
ಆ ರುಕ್ಮಿಣಿಗೆ ನೀನರಸನಾಗು ॥
ಮಾರನ ಪಿತನಾಗು ಮಧುಸೂದನನಾಗು ।
ದ್ವಾರಾವತಿಗೆ ನೀ ದೊರೆಯಾಗೆನುತ ॥ 2 ॥

ಆನಂದ ನೀನಾಗು ಅಚ್ಯುತ ನೀನಾಗು ।
ದಾನವಾಂತಕನಾಗು ದಯವಾಗು ॥
ಶ್ರೀನಿವಾಸನಾಗು ಶ್ರೀನಿಧಿ ನೀನಾಗು ।
ಜ್ಞಾನಿ ಪುರಂದರವಿಠಲ ನಾಗೆನುತ ॥ 3 ॥

Comments

Popular posts from this blog

Subrahmanya Shashti

Rathasaptami

Helavanakatte Giriyamma