Posts

Showing posts from May, 2023

Krishna Avadhootaru

Image
 " ಶ್ರೀ  ಕೃಷ್ಣಾವಧೂತರು " ಮಾಘ ಬಹುಳ ಚತುರ್ಥೀ ಶ್ರೀ ಕೃಷ್ಣಾವಧೂತರ ಆರಾಧನಾ ಮಹೋತ್ಸವ    ಶ್ರೀ ಕೃಷ್ಣಾವಧೂತರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ " ನಾರಾಯಣದೇವರ ಕೆರೆ " ಯೆಂಬ ಹಳ್ಳಿಯಲ್ಲಿ ಹುಟ್ಟಿದರು. ( ಇದು ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದೆ ) ಕಾಲ : ಕ್ರಿ ಶ 1835 - 1909. ಶ್ರೀ ಕೃಷ್ಣಾವಧೂತರು ಶಾಂಡಿಲ್ಯ ಗೋತ್ರೋದ್ಭವರಾದ ಶ್ರೀ ವೆಂಕಟರಮಣಾಚಾರ್ಯ ಮತ್ತು ಸಾಧ್ವೀ ತ್ರಿವೇಣಿಬಾಯಿ ದಂಪತಿಗಳ ಪುತ್ರರು.  ಇವರು 3 ತಿಂಗಳು ಕೂಸುಯಿದ್ದಾಗ ಸಂಡೂರಿನ " ಕುತ್ಸ " ಗೋತ್ರದ ಶ್ರೀ ಭೀಮಸೇನಾಚಾರ್ಯ ಎಂಬವರು ಇವರನ್ನು ದತ್ತಕ ತೆಗೆದುಕೊಂಡರು. ಶ್ರೀ ಕೃಷ್ಣಾವಧೂತರಿಗೆ ಶ್ರೀ ಭೀಮಸೇನಾಚಾರ್ಯರು " ಮಾಧವ " ನೆಂದು ಹೆಸರಿಡಲಾಯಿತು.  ಅವರನ್ನು " ಮಾಧವಕೃಷ್ಣ " ನೆಂದೂ - " ಮುದ್ದುಕೃಷ್ಣ " ನೆಂದೂ ಕರೆದರು.  " ರಾಧಾ " ಎಂಬುವಳೊಡನೆ ಶ್ರೀ ಮಾಧವಕೃಷ್ಣ ( ಶ್ರೀ ಕೃಷ್ಣಾವಧೂತರು ) ತಮ್ಮ 7ನೆಯ ವಯಸ್ಸಿನಲ್ಲಿ ಮದುವೆಯಾದರು.  11ನೇ ವಯಸ್ಸಿನಲ್ಲಿ ತಾಯಿಯನ್ನೂ - 15ನೇ ವಯಸ್ಸಿನಲ್ಲಿ ತಂದೆಯನ್ನೂ ಕಳೆದುಕೊಂಡರು. " ಮೈಸೂರಿಗೆ ಪಯಣ " ತಂದೆ ತಾಯಿಗಳ ಮರಣಾನಂತರ ಮನೆಯಲ್ಲಿ ಅವರ ತಂಗಿ ಸರಸ್ವತೀಬಾಯಿ ಅವರ ಒಳ ಸಂಚಿನಿಂದಾಗಿ ಮುದ್ದುಕೃಷ್ಣ ಮತ್ತು ಅವರ ಹೆಂಡತಿ ನಡುವೆ ಪರಸ್ಪರ ತಪ್ಪು ಕಲ್ಪನೆ ಹುಟ್ಟುವಂತೆ ಮಾಡಿದರು.  ಶ್...

Image Gallery

Image
  Vayi Krishnachar Upali Gurumadhwa Rayaru Syamasundara Dasaru Shesha Dasaru Sanna Rayaru Rama Dasaru Siravar Ramacharyaru Manavi Narayaran Teertharu Marched Srinivasa Rayaru Suladi Kuppe Rayaru Ikuru Narasimhacharyaru pandurangi Huchchacharyaru Gurujaganatha Dasaru

Vadirajara Suladi

 ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ವಾದಿರಾಜರ ಸ್ತೋತ್ರ ಸುಳಾದಿ   ರಾಗ ಮಧುವಂತಿ   ಧ್ರುವತಾಳ  ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ ಸಾದರದಿಂದ ಭಜಿಸಿ ಮೇದಿನಿಗೆ ಭಾರ - ವಾದ ಮಾಯಾವಾದಿಗಳ ಗೆದ್ದ ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ ಮಾಧವ ವೇದವೇದ್ಯ ವಿಜಯವಿಟ್ಠಲ ತಾನು ಆದರದಿಂದವರ ಭುಜದಿ ಹಯವಕ್ತ್ರನಾಗಿ ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ ಶ್ರೀಧರನ ಮಹಿಮೆ ಸಾಧುಜನರು ಕೇಳಿ ॥ 1 ॥   ಮಟ್ಟತಾಳ  ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ ಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿ ಕಡಲಿ ಸಕ್ಕರೆ ಬೆರೆಸಿ ಲಡ್ಡುಗೆಯ ಮಾಡಿದ ಸಡಗರದ ಭಕ್ಷ ಪಾಯಸ ಘೃತ ನೀಡೆ ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು ಕಡಗೋಲು ನೇಣು ಪಿಡಿದುಡುಪಿಲಿನಿಂದ ಉಡುರಾಜಮುಖ ನಮ್ಮ ವಿಜಯವಿಟ್ಠಲನು  ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ॥ 2 ॥   ತ್ರಿವಿಡಿತಾಳ  ತಾಮಸ ಗುಣವುಳ್ಳ ಪಾಮರ ಜನರಿಗೆ ಈ ಮಹಿಮೆ ದೊರಕುವದೇ ಸ್ವಾಮಿ ಸಿಲಕುವನೆ ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ - ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ  ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ ಕಾಮಾರಿ ವಂದ್ಯ ನಮ್ಮ ವಿಜಯವಿಟ್ಠಲನು  ಸಾಮಾನ್ಯ ಜನರಿಗೆ ದೊರಕುವನೇ ಕೇಳಿ ॥ 3 ॥   ಅಟ್ಟತಾಳ  ಅಜ ಸತ್ಯಲೋಕಾಧಿಪತ...

Rayara Suladi (Gopalarayara Rachane)

ಶ್ರೀ ಗೋಪಾಲದಾಸರು ರಚಿಸಿದ ಶ್ರೀ *ಗುರುರಾಘವೇಂದ್ರರ ಮಹಾತ್ಮ್ಯ ಸ್ತೋತ್ರ ಸುಳಾದಿ  ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು | ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ | ಸ್ಥಿರವಾಗಿ ಮಂತ್ರಾಲಯ ಪುರ ತುಂಗಾತೀರದಿ | ಹರಿಭಕ್ತ ಪ್ರಹ್ಲಾದ ವರಯಾಗ ಮಾಡಿ ಇಲ್ಲಿ | ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ | ಪರಿಶುದ್ಧನಾದನೆಂದು ಅರಿತು ಈ ಸ್ಥಳದಲ್ಲಿ | ಗುರುರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ | ಪರಲೋಕ ಸಾಧನ ಪರಿಪೂರ್ತಿ ಮಾಡಿಕೊಂಡು | ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ | ಧರಿಯ ಮ್ಯಾಲಿದ್ದ ಜನರ ಪೊರಿಯಬೇಕೆಂದೆನುತ | ಹರಿ ನೋಡಿದನು ಇವರ ಪರಮ ದಯಾಳು ತಾನವನ್ನು ತಾನು | ಗುರುವಂತರ್ಯಾಮಿಯಾಗಿ ವರವಾನೀಯಲಿ ಜಗಕೆ | ನರಹರಿ ತಾನೆ ನಿಂದು ನಿತ್ಯ ಪೂಜೆಯಗೊಂಡು | ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರಧರ ನಾರಾಯಣ ತಾನೆ | ವರ ಸನ್ನಿಧಾನನಾಗಿ |-ವರಿಗೆ ಫಲ ತಂದೀವ ಇಹಪರದಲ್ಲಿನ್ನು | ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ | ಶರಣರ ಪೊರೆವ ಚರಿಯಾ ಪರಿಪರಿ ಉಂಟೋ ||1|| ಮಟ್ಟತಾಳ ನರಹರಿ ಕೃಷ್ಣರಾಮ ಸಿರಿ ವೇದವ್ಯಾಸ | ಎರಡೆರಡು ನಾಲ್ಕು ಹರಿಯ ಮೂರುತಿಗಳು | ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು | ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ | ತರುವಾಯದಲಿನ್ನು ತರತಮ್ಯನುಸಾರ | ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ | ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು | ಪರಿಪರಿ ಪುರಾಣಭಾರತಗಾನದಲ್ಲಿ | ಸರಿಸರಿ ಬಂದಂತೆ ಸರಿಗಮವೆನುತ...

Tatwabhimanigala Suladi

 🙏 ತತ್ವಾಭಿಮಾನಿ ದೇವತೆಗಳ ಸುಳಾದಿ 🙏 ಧ್ರುವತಾಳ: ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ನಿಮಗೆ ಹಸ್ತವ ಮುಗಿದು ಕೊಂಡಾಡುವೆ ಕ್ರಮದಿಂದ ಬಿನ್ನಪವ ಲಾಲಿಸಿ ಕೇಳುವುದು ಅಮರ ನಿಮ್ನಗ ಮಜ್ಜನ ಗೋಸುಗ ಅಮಲಮತಿ ಇತ್ತು ಜ್ಞಾನ ಭಕ್ತಿಯಿಂದ ರಮೆಯರಸನ್ನ ನೋಳ್ಪಸಾಧನ ತೋರಿ ಗಮನಾದಿ ಮೊದಲಾದ ವ್ಯಾಪಾರ ನಿಮ್ಮಾಧೀನ ಶ್ರಮ ಸಾದ್ಯವಾಗದಂತೆ ಪೈಣವಿತ್ತು ತಮೊರಜೊಗುಣದವರ ಬಾಧಿಯ ತಪ್ಪಿಸಿ ಉತ್ತಮ ಯಾತ್ರಿ ಮಾಡಿಸುವುದು ತ್ರಯ ಕ್ಷೇತ್ರದ ಕುಮತ ಪೊಂದಿದ ನಿತ್ಯ ಕುಮತಿಜನರ ಸಂಗ ನಿಮಿಷವಾದರೂ ಕೊಡದೆ ಪಾಲಿಸಬೇಕು ಯಮನೇಮ ಮಿಗಿಲಾದ ಸತ್ಕರ್ಮಾಚಾರದಿಂದ ಸಮಚಿತ್ತ ಭೇದದಿಂದ ಇರಲಿ ಎನಗೆ ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ಕುಮತಿಯ ಬಿಡಿಸುವದು ನಾನೆಂಬೊ ಮಾತಿನಲ್ಲಿ ಭ್ರಮಣವಲ್ಲದೆ ಲೇಸುಲೇಸ ಕಾಣೆ ರಮೆಯರಸ ನಮ್ಮ ವಿಜಯವಿಠ್ಠಲನಂಘ್ರಿ ಕಮಲ ಹೃತ್ಕಮಲದಲ್ಲಿ ಪೊಳೆವಂತೆ ಕೃಪೆ ಮಾಡಿ ||೧||  ಮಟ್ಟತಾಳ:  ತನುವೆನ್ನದೆಂಬೆನೆ ತನುವೆನ್ನದಲ್ಲ ಮನವೆನ್ನದೆಂಬೆನೆ ಮನವೆನ್ನದಲ್ಲ ಧನವೆನ್ನದೆಂಬೆನೆ ಧನವೆನ್ನದಲ್ಲ ಜನವೆನ್ನದೆಂಬೆನೆ ಜನವೆನ್ನದಲ್ಲ ತನು ಮನ ಧನ ಜನವು ಅನುದಿನದಲ್ಲಿ ನೋಡೆ ವನಜಭವಾದಿಗಳೇ ಎಣಿಸಿ ಪೇಳುವುದೇನು ಕೊನೆ ಮೊದಲು ನಿಮ್ಮಾಧೀನವಯ್ಯಾ ಬಿಡದೆ ಇನಿತು ಪೊಂದಿರಲಿಕ್ಕೆ ಮಣಿದು ಹೇಳುವ ಮಾತಿನ ಉಪಚಾರವ್ಯಾತಕೆ ಘನ್ನಮೂರುತಿ ನಮ್ಮ ವಿಜಯವಿಠ್ಠಲನ್ನ ಪ್ರೇರಣೆಯಿಂದಲಿ ನಿಮ್ಮ ಸಕಲ ಚೇಷ್ಟಪ್ರದವೋ ||೨||  ತ್ರಿವಿಡಿತಾಳ:  ಭೀತಿಪ್ರದ ಜೀವ...

Dhanvantri Suladi

 🙏 ಧನ್ವಂತರೀ ಸ್ತೋತ್ರ ಸುಳಾದಿ🙏 ಧ್ರುವತಾಳ: ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವುದು | ಕಾಯಾ ನಿರ್ಮಲಿನಾ ಕಾರಣವಾಹುದೋ | ಮಾಯಾ ಹಿಂದಾಗುವುದು ನಾನಾರೋಗದ ಬೀಜ | ಬೇಯಿಸಿ ಕಳೆವುದು ವೇಗದಿಂದ | ನಾಯಿಮೊದಲಾದ ಕುತ್ಸಿತದೇಹನಿ ಕಾಯವ ತೆತ್ತು ದುಷ್ಕರ್ಮದಿಂದ | ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ | ಹೇಯ ಸಾಗರದೊಳು ಬಿದ್ದು ಬಳಲೀ | ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ | ಬಾಯಿಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ ರಾಯಾ ರಾಜೌಷಧಿ ನಿಯಾಮಕಕರ್ತ | ಶ್ರೀಯರಸನೆಂದು ತುತಿಸಲಾಗಿ ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ | ನೋಯಗೊಡದೆ ನಮ್ಮನ್ನು ಪಾಪಿಪಾ ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ | ಶ್ರೇಯಸ್ಸು ಕೊಡುವನು ಭಜಕರಿಗೆ ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ | ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ ವಾಯುವಂದಿತ ನಿತ್ಯ ವಿಜಯ ವಿಠ್ಠಲ ರೇಯಾ ಪ್ರಿಯನು ಕಾಣೊ ನಮಗೆ ಅನಾದಿರೋಗ ಕಳೆವಾ ||೧||  ಮಟ್ಟತಾಳ:  ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು ಸನ್ನುತಿಸಿ ಸತತ ಭಿನ್ನ |  ಜ್ಞಾನದಿಂದ ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ | ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ | ಚನ್ನ ಮೂರುತಿ ಸುಪ್ರಸನ್ನ ವಿಜಯ ವಿಠ್ಠಲ ನ್ನ ಸತ್ಯವೆಂದು ಬಣ್ಣಿಸು ಬಹುವಿಧದಿ ||೨||  ತ್ರಿವಿಡಿತಾಳ:  ಶಶಿಕುಲೋದ್ಭವ ಧೀರ್ಘತಮನಂದನ ದೇವಾ |  ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ |...

Jaganatha Dasara Suladi

 ಶ್ರೀ ಶ್ಯಾಮಸುಂದರವಿಠಲ ದಾಸಾರ್ಯ ವಿರಚಿತ   ಶ್ರೀ ಜಗನ್ನಾಥದಾಸರ ಸ್ತೋತ್ರ ಸುಳಾದಿ   ರಾಗ ಹಂಸಧ್ವನಿ   ಧ್ರುವತಾಳ  ಪೊಂದಿ ಭಜಿಸು ಸತತ ವೊಂದೇ ಮನದಿ ಸ್ಥಂಭ - ಮಂದಿರ ಮಾನವಿ ದಾಸಾರ್ಯರಾ ಮಂದಮಾನವ ಕೇಳೋ ವಂದಿಸಿ ಸೇವಿಪರ ಬಂಧನ ಪರಿಹರಿಸಿ ಮನದಭೀಷ್ಟಾ ತಂದು ಕೊಡುವದಕ್ಕೆ ಮಂದಾರ ಕುಜದಂತೆ ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೋ ಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆ ಬೆಂದು ಪೋಪವು ದೋಷವೃಂದವೆಲ್ಲಾ ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ ತಂದೆ ಸಲಹುವಂತೆ ರಕ್ಷಿಸುವರೋ ಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು -  ರಂದರ ಗುರು ಸ್ವಾದಿರಾಜರ ಪ್ರೀತ ಸಿಂಧೂರವರದ ಶ್ಯಾಮಸುಂದರ ನಾಜ್ಞದಿ ಇಂದುವಿನಂತೆ ಮೂಡಿ ಪುನಃ ಜಗದಿ ॥ 1 ॥   ಮಟ್ಟತಾಳ  ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ  ಮರುತಾಗಮ ಘಳಿಸಿ  ತುರುರಕ್ಷಕ ದಾಸ - ವರ್ಯರ ಕರುಣದಲಿ ಶರಧಿಜ ಭಾಗದಲಿ ಧರಣಿಪ ವಿಠಲೆಂಬೋ ಸುರುಚರದಂಕಿತವ  ದೊರಕಿಸಿ ಪ್ರಾಕೃತದಿ  ಕರುಣಾಕರ ಶ್ಯಾಮಸುಂದರನ ವರ್ಣಿಸಿದಾ  ಪರಮ ಭಾಗವತರ ನೆರೆನಂಬು ನಿರುತಾ  ॥ 2 ॥   ತ್ರಿವಿಡಿತಾಳ  ಇವರ ಸಂದರುಶನ ಭವಬಂಧ ಮೋಚನ ಇವರ ಚರಣ ಧ್ಯಾನ ಗಂಗಾ ಸ್ನಾನ ಇವರನ್ನ ಸಾರಿದರೆ ಜವನ ಅಂಜಿಕೆಯಿಲ್ಲ ಇವರ ಕವನ ಸ್ತವನ ಶ್ರವಣದಿಂದ ಪವನ ಸಚ್ಛಾಸ್ತ್ರದ  ಪ್ರವಚನ ಫಲವಕ್ಕು ಇವರಿದ್ದ ಸ್ಥಳ ಕಾಶೀರಾಮೇಶ...

Jyothishya Vichara

48, 108..🤔🤔🤔🤔 ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ ಅಂತಾರೆ. ಆದ್ದರೆ 48 ಯಾಕೆ, 108 ಯಾಕೆ ಅಂತ ಹೇಳೋರು ತುಂಬಾ ಕಮ್ಮಿ.. 48 ಅಂದರೆ 27+9+12=48 27 ನಕ್ಷತ್ರಗಳು 9 ಗ್ರಹಗಳು. 12 ರಾಶಿಗಳು 108 ಎಂದರೆ  108 = 60+27+9+12 ಅರವತ್ತು ಸಂವತ್ಸರಗಳು.+ 48 ದಿನಗಳು. ಸ್ವಯಂಸಿದ್ಧ ಮುಹೂರ್ತಗಳು 1. ಚೈತ್ರ ಶುಕ್ಲ ಪ್ರತಿಪತ್...ಯುಗಾದಿ 2. ವೈಶಾಖ ಶುಕ್ಲ ತೃತೀಯಾ...ಅಕ್ಷಯ ತೃತೀಯಾ  3. ಆಶ್ವೀಜ ಶುಕ್ಲ ದಶಮಿ...ವಿಜಯ ದಶಮಿ 4. ಕಾರ್ತೀಕ ಶುಕ್ಲ ಪ್ರತಿಪತ್...ಬಲಿಪಾಡ್ಯಮಿ 1,2,3...ಪೂರ್ಣ ಮುಹೂರ್ತಗಳು 4...ಅರ್ಧ ಮುಹೂರ್ತ

Rathasaptami

Image
 ರಥಸಪ್ತಮಿ ಆಚರಣೆ ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ,  ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ.  ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ. ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ. ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ. ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ...

24 Keshava Namaroopa

ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಹೇಗೆ ಗುರುತಿಸುವುದು. ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ  ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ  ಇದೆಯೆಂದು ತಿಳಿಯಬೇಕು.   1)  ಕೇಶವ (ಶಂಕು, ಚಕ್ರ, ಗಧ, ಪದ್ಮ) 2)  ನಾರಾಯಣ (ಪದ್ಮ, ಗಧ, ಚಕ್ರ, ಶಂಕು) 3)  ಮಾಧವ (ಚಕ್ರ, ಶಂಕು, ಪದ್ಮ, ಗಧ) 4)  ಗೋವಿಂದ (ಗಧ, ಪದ್ಮ, ಶಂಕು, ಚಕ್ರ) 5)  ವಿಷ್ಣು (ಪದ್ಮ, ಶಂಕು, ಚಕ್ರ, ಗಧ) 6)  ಮಧುಸೂದನ (ಶಂಕು, ಪದ್ಮ, ಗಧ, ಚಕ್ರ) 7)  ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ) 8)  ವಾಮನ (ಚಕ್ರ, ಗಧ, ಪದ್ಮ, ಶಂಕು) 9)  ಶ್ರೀಧರ (ಚಕ್ರ, ಗಧ, ಶಂಕು, ಪದ್ಮ) 10) ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ) 11) ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು) 12) ದಾಮೋದರ (ಶಂಕು, ಗಧ, ಚಕ್ರ, ಪದ್ಮ) 13) ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ) 14) ವಾಸುದೇವ (ಶಂಕು, ಚಕ್ರ, ಪದ್ಮ,ಗಧ) 15) ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ) 16) ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ) 17) ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ) 18) ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ) 19) ನರಸಿಂಹ (ಪದ್ಮ, ಗಧ, ಶಂಕು, ಚಕ್ರ) 20) ಅಚ್ಯುತ (ಪದ್ಮ, ಚಕ್ರ, ಶಂಕು, ಗಧ) 21)  ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ) 22)  ಉಪೇಂದ್ರ (ಗಧ...

Ibharamapura Appavaru

  Ibharampura Apparavaru - Short Summary ಶ್ರಾವಣ ಶುದ್ಧ ತೃತೀಯಾ ಶ್ರೀಮದ್ ಅಪ್ಪಾವರ ಆರಾಧನ ಮಹೋತ್ಸವ , ಇಭರಾಮಪುರ श्रीरामचरणद्वन्द्ववर्धिचंद्रो दयोपमः | श्रीकृष्णपूजानिरतः कृष्णोमाम्सर्वदावतु || ಮಂತ್ರಾಲಯ ಶ್ರೀ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥ ಪಾರಾಯಣದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ತೋರಿದ,  ಜ್ಞಾನಿಶ್ರೇಷ್ಠರೆನಿಸಿದ ಯಳಮೇಲಿ ಹಯಗ್ರೀವಾಚಾರ್ಯ , ಯಳಮೇಲಿ ವಿಠಲಾಚಾರ್ಯ, ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು)  ಶ್ರೀ ಯೋಗಿ  ನಾರಾಯಣಾಚಾರ್ಯ, ಮುಂತಾದ ಜ್ಞಾನಿಗಳ ಸಮೂಹಕ್ಕೆ ಗುರುಗಳೆನಿಸಿದ, ವಿಜಯರಾಮಚಂದ್ರವಿಠಲ ದಾಸರು , ಜಯೇಶವಿಠಲ ದಾಸರು, ಸುರಪುರ ಆನಂದ ದಾಸರು , ಶ್ರೀ ಇಂದಿರೇಶ ದಾಸರು, ಗುರುಜಗನ್ನಾಥ ದಾಸರಂತಹ  ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ ,  ಶ್ರೀ ಇಭರಾಮಪುರ ಅಪ್ಪಾವರ ಆರಾಧನೆ ಮಹೋತ್ಸವ.  ಶ್ರೀ ಅಪ್ಪಾವರ ಸಂಕ್ಷಿಪ್ತ ಮಾಹಿತಿ : ಜನನ : 1789  ವಿಜಯ ದಶಮಿ ತಂದೆ : ಶ್ರೀ ಅಹೋಬಲಾಚಾರ್ಯ ತಾಯಿ : ಕೃಷ್ಣ ಬಾಯಿ ಜನ್ಮ ಸ್ಥಳ : ಇಭರಾಮಪುರ ( ಜಿಲ್ಲೆ : ಕರ್ನೂಲು, ಆಂಧ್ರಪ್ರದೇಶ್ ) ಉಪದೇಶಿತ ಗುರು : ಅಶ್ವತ್ಥಾಮಾಚಾರ್ಯರು  ಕುಲ ಗುರುಗಳು : ಶ್ರೀರಾಘವೇಂದ್ರ ಗುರುಸಾರ್ವಭೌಮರು ಸಮಕಾಲೀನ ಅಪರೋಕ್ಷ ಜ್ಞ...

Helavanakatte Giriyamma

ಶ್ರೇಷ್ಟ ಹರಿದಾಸಿ ಹೆಳವನಕಟ್ಟೆ ಗಿರಿಯಮ್ಮ ಚರಿತ್ರೆ:-   ಹರಿದಾಸ ಸಾಹಿತ್ಯದಲ್ಲಿ ಹರಿದಾಸರ ಜೊತೆ ಹರಿದಾಸಿಯರ ಕೊಡುಗೆಯು ಬಹಳ ಅಪಾರವಿದೆ. ಮೊದಲಿಗೆ ಎಲ್ಲರ ಮನದಲ್ಲಿ ನೆನಪಾಗುವುದೇ "ಹೆಳವನಕಟ್ಟೆ ಗಿರಿಯಮ್ಮ". ಕರ್ನಾಟಕದ "ಮೀರಾ" ಎಂದೇ ಪ್ರಖ್ಯಾತವಿದೆ. ಹರಿಭಕ್ತಿಯ ಸ್ವರೂಪವಾಗಿದ್ದಾಳೆ; ಎಂದು ವಿದ್ವಾಂಸರು ಹೇಳುತ್ತಾರೆಹೆಣ್ಣು ಕುಲದ ಅಭಿಮಾನ ಹೆಮ್ಮೆಯವರಾಗಿದ್ದಾರೆ. ಉತ್ತರ ಕರ್ನಾಟಕದ ಪ್ರತಿ ಮನೆಯಲ್ಲೂ ಇವಳ ಸಾಹಿತ್ಯ ಮನೆಮಾತಾಗಿದೆ.  ಗಿರಿಯಮ್ಮನ ಜನನ ಕ್ರಿ.ಶ.೧೭೫೦ ಸುಮಾರಿಗೆ ಜೀವಿಸಿದ್ದರು ಅಥವಾ ೧೮ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದರು;ಎಂಬ ಊಹೆ ಇದೆ.ಇವಳ ಜನನದ ಮಾಹಿತಿ ನಿಖರವಾಗಿ ಸಿಕ್ಕಿಲ್ಲ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ತಂದೆ ಭೀಷ್ಟಪ್ಪ , ತಾಯಿ ತುಂಗವ್ವರಿಗೆ ಬಹಳ ವರುಷಗಳಿಂದ ಮಕ್ಕಳಾಗದ ಕಾರಣ ; ತಿರುಪತಿ ತಿಮ್ಮಪ್ಪನ ಸೇವೆ ಮತ್ತು ಹರಿಕೆಯ ಫಲವಾಗಿ ಪುತ್ರಿರತ್ನ ಜನನವಾಯಿತು. ಸೇವೆ ಫಲದಿಂದ ಹುಟ್ಟಿದ್ದಕ್ಕೆ , ಈ ಮಗುವಿಗೆ "ಗಿರಿಯಮ್ಮ" ನಾಮಕರಣ ಮಾಡಿದರು.  ಗಿರಿಯಮ್ಮ ನಾಲ್ಕು ವರುಷ ಇರುವಾಗಲೇ ತಾಯಿ ತೀರಿಹೋದರು. ಸ್ವಲ್ಪ ದಿನಗಳಲ್ಲಿ ತಂದೆಯು ತೀರಿಹೋದರು.ಇವಳು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದಳು. ಬಾಲ್ಯದಿಂದಲೇ ದೈವಭಕ್ತೆ, ಪರೋಪಕಾರ ಗುಣ,ವೃದ್ಧರ ಸೇವೆಯ ಗುಣ ಎಲ್ಲವೂ ಅಭಿವೃದ್ಧಯಾಗಿ ಸುಗುಣಗಳ ಗಣಿಯಾಗಿದ್ದಳು. ಮಲೆಬೆನ್ನೂರಿನ ತಿಪ್ಪರಸನೊಂದಿಗೆ ವಿವಾಹವಾಯಿತು. ವಿವಾಹವ...

Jayesha Vittalaru

ವೈಶಾಖ ಬಹುಳ ದ್ವಿತೀಯ ಇಭರಾಮಪುರ ಅಪ್ಪಾವರ ಪರಮಾನುಗ್ರಹಕೆ ಪಾತ್ರರು  ಶ್ರೀ ವಿಜಯರಾಮಚಂದ್ರವಿಠ್ಠಲ ಶಿಷ್ಯರಾದ ಜಯೇಶವಿಠಲರ ಆರಾಧನೆ , ಕಟ್ಟೆ ಮನೆ ಮೈಸೂರ ಹೆಸರು : ಅಟ್ಟಜಿ ವೆಂಕಟರಾಯರು ಅಂಕಿತ ನಾಮ : ಶ್ರೀಜಯೇಶವಿಠಲ ಅಂಕಿತ ಪ್ರದಾನ : ಶ್ರೀವಿಜಯರಾಮಚಂದ್ರವಿಠ್ಠಲ ಇಂದುಮೌಳಿ ಪದಾಬ್ಜಾಳಿಂ | ಮಂದ ಸಜ್ಜನ ತಾರಕಂ | ಇಂದ್ರಕಾಮ ಸಮಾಭಾಸಂ | ಸುಂದರಾಂಗ ಸಮನ್ವಿತಂ || ವಿಜಯೋಪದೋಪೇತಂ | ಅಜಜಾತ ಸುತಾಖ್ಯಾಜಂ | ಶ್ರೀ ಜಯೇಶೇತಿ ದಾಸಾಖ್ಯಂ |ಭಜೇ ವೈರಾಗ್ಯಶಾಲಿನಂ || ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಸಿದ್ಧಾಂತದ ಪ್ರಮೇಯಗಳನ್ನು ಸರಳವಾಗಿ ಜನಮನಕ್ಕೆ ಮುಟ್ಟುವಂತೆ ಮಾಡಿದವರು ನಮ್ಮ ಹರಿದಾಸರು. ಅಂತಹ ಹರಿದಾಸರಲ್ಲಿ ಜ್ಞಾನ ಭಕ್ತಿ ವೈರಾಗ್ಯ ಗುರುಭಕ್ತಿಯ ಪ್ರತೀಕವೇ ಶ್ರೀಜಯೇಶವಿಠಲ ದಾಸರು. ಸಾತ್ವಿಕ ಮನೆತನದ ಶ್ರೀ ರಾಮರಾಯರು ಮತ್ತು ಶ್ರೀಮತಿ ರಾಧಾ ಬಾಯಿಯವರ ಪುತ್ರರತ್ನವಾಗಿ ಜನಿಸಿದ ದಾಸರಿಗೆ ಶ್ರೀ ವೆಂಕಟ ರಾಯರು ಅಂತ ನಾಮಕರಣವನ್ನು  ಮಾಡುತ್ತಾರೆ. ಇವರು  ಶ್ರೀಮಂತಿಕೆಯ ಸುಪತ್ತಿನಲ್ಲಿ ಬೆಳೆದವರು. ನೋಡಲು ತುಂಬಾ   ಸ್ಪೂರದ್ರೂಪಿಗಳು. ಅವರನ್ನು ನೋಡಿಕೊಳ್ಳಲು ಅಂಗರಕ್ಷಕರನು ನೇಮಿಸಿರುತ್ತಾರೆ ಅಂತಹ ಶ್ರೀಮಂತಿಕೆಯಲ್ಲಿ ಬೆಳೆದ ಶ್ರೀ ವೆಂಕಟರಾಯರು ಒಮ್ಮೆ ತಮ್ಮ ಮೈಮೇಲೆ ಹಾಕಿಕೊಂಡ ಆಭರಣವೆಲ್ಲವನ್ನು ರಸ್ತೆಯಲ್ಲಿ ಹಾಕಿ ತಮಗೆ ಈ ಜಡವಸ್ತುಗಳ ಮೇಲಿನ ಮೋಹ ಬೇಡ ಅಂತ  ತೇಜಿಸುತ್ತಾರೆ. ಜೊತೆಯಲ್ಲಿ ಇದ್ದ ಅಂ...

Subrahmanya Shashti

ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ ಸಂಭ್ರಮ ಮಾರ್ಗಶಿರ ಶುದ್ಧ ಷಷ್ಠಿ ದಿನವಾದ ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ ನಾರಾಯಣನ ಮಗ ಮನ್ಮಥ (ಕಾಮ)ನೇ ಚತುರ್ಮುಖನ ಮಗ ಸನತ್ಕುಮಾರನು. ಇವನೇ ಶಿವಪಾರ್ವತಿಯರ ಮಗ ಸುಬ್ರಹ್ಮಣ್ಯ. ಇವನಿಗೆ ಆರು ಮುಖವಿರುವ ಕಾರಣ ಷಣ್ಮುಖನು ಎನಿಸಿದ್ದಾನೆ. ದೇವತೆಗಳ ಸೇನೆಯ ಒಡೆಯನೀತ ದೇವಸೇನಾಪತಿ. ಯೋಗ್ಯತೆಯಲ್ಲಿ ಇಂದ್ರ ನಿಗೆ ಸಮ. ಅಂದರೆ-ನಾರಾಯಣ ಲಕ್ಷ್ಮೀ ವಿಧಿ, ವಾಯು, ಸರಸ್ವತೀ, ಭಾರತೀ, ಗರುಡ ಶೇಷ ರುದ್ರ, ಷಣ್ಮಹಿಷಿಯರು ಸುಪರ್ಣೀ ವಾರುಣೀ ಪಾರ್ವತಿಯರಿಗಿಂತ ಮಾತ್ರ ಕಿರಿಯನು. ಸೂರ್ಯ, ಚಂದ್ರ, ಯಮ, ವರುಣ, ಅಗ್ನಿ, ಗುರು, ಗಣಪ, ಶನಿ, ವಾಸುಕಿ, ತಕ್ಷಕ ಮುಂತಾದ ಉಳಿದ ದೇವತೆಗಳೆಲ್ಲರೂ ಇವನಿಗಿಂತ ಕಿರಿಯರು. ಈತನ ವಾಹನ – ಮಯೂರ, ಧ್ವಜ- ಕುಕ್ಕುಟ, ಪ್ರಧಾನ ಶಿಷ್ಯ- ನಾರದ, ಮುಖ್ಯ ಆಯುಧ – ಶಕ್ತಿ, ಅವತಾರ – ಭರತ (ರಾಮನ ತಮ್ಮ), ಪ್ರದ್ಯುಮ್ನ (ಕೃಷ್ಣನ ಮಗ). ಚಕ್ರ, ಶಂಖ ಮೊದಲಾದ ಭಗವಂತನ ಆಯುಧಗಳೆಲ್ಲವೂ ಭಗವಂತನ ರೂಪಗಳೇ ಆಗಿವೆ. ಅವು ಚಿನ್ಮಯಗಳು. ಹಾಗೆಯೇ ಭಗವಂತನ ಆಯುಧಗಳೂ ಆಭರಣಗಳೂ ಎಲ್ಲವೂ ಲಕ್ಷ್ಮೀ ಸ್ವರೂಪಗಳೂ ಆಗಿರುತ್ತವೆ. ಅವೂ ಚಿನ್ಮಯಗಳೇ. ಸುದರ್ಶನ ಚಕ್ರ ದೇವತೆಯಾಗಿ ದೇವತೆಗಳ ರಕ್ಷಣೆ ಯಲ್ಲಿ ದೇವಸೇನಾ – ಪನಾದ ಸುಬ್ರಹ್ಮಣ್ಯನು ಭಗವಂತನ ಕೈಯಲ್ಲಿ ಮೆರೆ ಯುತ್ತಿರುವನು. ಹೀಗಾಗಿ ಮಾರ್ಗ ಶಿರ ಶುದ್ಧ ಷಷ್ಠಿಯಂದು ಈತನನ್ನು ಆರಾಧನೆಗೈಯಬೇಕು. ಆ ದಿನವನ್ನು ಚಂಪಾಷಷ್ಠಿ ಎಂದೂ ಕರೆಯುತ್ತಾರೆ. ಚಂಪಾಷಷ್ಠಿಯಂದು ಸುಬ...

Purandara Dasaru

 ಪುರಂದರ ದಾಸರ ಪುಣ್ಯ ತಿಥಿ ಮೊದಲ ಹೆಸರು ಶ್ರೀನಿವಾಸ ನಾಯಕ, ಜನ್ಮ ಸ್ಥಳ ಪುರಂದರಗಡ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ. ವೈರಾಗ್ಯ  ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ. ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ...

Upali Gurumadhwa Rayaru

ಹೆಸರು : ಶ್ರೀ ಉಪ್ಪಲಿ ಗುರುಮಧ್ವರಾಯರು ತಂದೆ : ಶ್ರೀ ವಿಜಯರಾಯರು ತಾಯಿ : ಸಾಧ್ವೀ ಲಕ್ಷ್ಮೀಬಾಯಿ ಜನನ : ಕ್ರಿ ಶ 1918 ಸಂವತ್ಸರ : ಸಿದ್ಧಾರ್ಥ ಆಯಣ : ಉತ್ತರಾಯಣ ಮಾಸ : ಚೈತ್ರ ಪಕ್ಷ : ಕೃಷ್ಣ ತಿಥಿ : ಗುರುವಾರ ಯೋಗ : ಸಿದ್ಧಿ ರಾಶಿ : ತುಲಾ ನಕ್ಷತ್ರ ಮತ್ತು ಚರಣ : ವಿಶಾಖ 3ನೇ ಚರಣ ಜನ್ಮ ನಾಮ : ತೇಜಪ್ಪ ಗೋತ್ರ : ಕೌಂಡಿನ್ಯ ಉಪನಯನ : ಕ್ರಿ ಶ 1927 ಬ್ರಹ್ಮೋಪದೇಶ : ಅಪರೋಕ್ಷ ಜ್ಞಾನಿಗಳಾದ ಶ್ರೀ ಇಂದಿರೇಶ ( ಶ್ರೀ ಪಾಂಡುರಂಗೀ  ಹುಚ್ಚಾಚಾರ್ಯರು ) ಧರ್ಮ ಪತ್ನಿ : ಸಾಧ್ವೀ : ಗಂಗಾಬಾಯಿ ( ಸಾವಿತ್ರಿ ) ಸುಳಾದಿ ಹೇಳಿಕೊಟ್ಟ ಗುರುಗಳು : ಶ್ರೀ ಮಾನವಿ ವೆಂಕೋಬರಾಯರು ಶ್ರೀ ಉಪ್ಪಲಿ ಗುರು ಮಧ್ವರಾಯರು ರಾಯಚೂರಲ್ಲಿ ಕ್ರಿ ಶ 1995 ಶ್ರೀ ಗುರು ವಿಜಯದಾಸಾಶ್ರಮ ಸ್ಥಾಪಿಸಿದರು. ಉತ್ತನೂರಿನಲ್ಲಿ ಶ್ರೀ ಗೋಪಾಲದಾಸರ ಕಟ್ಟೆ ನಿರ್ಮಾಣ ಮಾಡಿದರು ರೇಖಾ ಕೃತಿಗಳು : ಶ್ರೀ ಗೋಪಾಲದಾಸರು ವಿರಾಟ ಪುರುಷನ ಆಕೃತಿಯನ್ನು ಚಿತ್ರಿಸಿದಂತೆ, ಶ್ರೀ ಗುರುಮಧ್ವರಾಯರು " ಸುಜ್ಞಾನ ಪಟಗಳ " ನ್ನು ಬರೆದಿದ್ದಾರೆ. ಅವುಗಳ ವಿವರ... 1 ಮತ್ತು 2 - ಖಗೋಳ ಮತ್ತು ಭೂಗೋಳದ ವಿವರಣೆ 3. ಸೂಕ್ಷ್ಮಮತ್ತು ಸ್ಥೂಲ ಸೃಷ್ಟಿ 4. ಪದ್ಮಕಲ್ಪ, ವಿರಾಟಕಲ್ಪ, ಶ್ವೇತ ವರಾಹ ಕಲ್ಪ - ಸೃಷ್ಟಿ 5. ಧಾಮ ತ್ರಯಗಳು ( ಅನಂತಾಸನ, ಶ್ವೇತದ್ವೀಪ, ವೈಕುಂಠ ) 6. ಸಪ್ತ ದ್ವೀಪಗಳು 7. ನವ ಖಂಡಗಳು 8. ಐತಿಹಾಸಿಕ - ರಾಜ ವಂಶಾವಳಿ 9. ಓಂಕಾರದ ವಿವರಣೆ 10. ಗಾಯತ್ರೀ ಮಂತ್ರದ...

3 Nyayagalu

ದೇವರನ್ನು ಆಶ್ರಯಿಸುವ ವಿಧಾನ ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸಬಹುದು. 1. ಮಾರ್ಜಾಲ ಕಿಶೋರ ನ್ಯಾಯ 2. ಮರ್ಕಟ ಕಿಶೋರ ನ್ಯಾಯ 3. ಮತ್ಸ್ಯ  ಕಿಶೋರ ನ್ಯಾಯ. ಮಾರ್ಜಾಲ ಕಿಶೋರ ನ್ಯಾಯ                                         ಬೆಕ್ಕು ತನ್ನ ಮರಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಅದರ ಕತ್ತನ್ನು ಕಚ್ಚಿಕೊಂಡು ಉಪಾಯವಾಗಿ ಕೊಂಡೊಯ್ಯುತ್ತದೆ. ಆದರೆ ಮರಿಗೆ ಚೂರಾದರೂ ನೋವಾಗುವುದಿಲ್ಲ. ಹಾಗೆ ಭಗವಂತನನ್ನು ಆಶ್ರಯಿಸಿದ ಭಕ್ತನ ವಿಶ್ವಾಸಕ್ಕೆ ಚೂರೂ ಧಕ್ಕೆ ಬರದ ಹಾಗೆ ಕಾಪಾಡುತ್ತಾನೆ. ಮರ್ಕಟ ಕಿಶೋರ ನ್ಯಾಯ                                                  ಕೋತಿ ತನ್ನ ಮರಿಯನ್ನು ಹಿಡಿದು ಕೊಳ್ಳುವುದೇ ಇಲ್ಲ. ಏಕೆಂದರೆ ಕೋತಿಯ ಮರಿ ಅಮ್ಮನನ್ನು ಎಷ್ಟು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆಂದರೆ ತಾಯಿಗೆ ತಲೆ ಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ಸಲೀಸಾಗಿ ಹಾರಾಡುತ್ತದೆ. ಹಾಗೇ ಇಲ್ಲಿ ಭಕ್ತ ಭಗವಂತನನ್ನು ಎಷ್ಟು ಗಟ್ಟಿಯಾಗಿ ಆಶ್ರಯಿಸುತ್ತಾನೆಂದರೆ ಯಾವುದೇ ಕಷ್ಟಗಳು ಯಾ...

Ikuru Acharyaru

ಇಂದು ಮತ್ತೊಬ್ಬ ಹರಿದಾಸ ರಾದ ಸುಳಾದಿ ಕುಪ್ಪೇರಾಯರು, ಶ್ಯಾಮಸುಂದರ ದಾಸರು, ಸಿರಿವಾರ ರಾಮಾಚಾರ್ಯರು, ಕೊಪ್ಪರ ಅರ್ಚಕರಾದ ಗಿರಿಯಾಚಾರ್ಯರು ಇನ್ನೂ ಅನೇಕ ಶಿಷ್ಯ ಸಂಪತ್ತು ಹೊಂದಿದ, ಶ್ರೀಹರಿಯ  ಮಹಿಮೆಯ ವಿಜಯಧ್ವಜ ಮೆರೆದಾಡಿಸಲು ಧರೆಯೊಳಗೆ ವಿಜಯದಶಮಿಯ ದಿನ ಜನಿಸಿದ, ಹಾಗು ಶ್ರೀ ರಾಯರ ಪಟ್ಟಾಭಿಷೇಕ ಸುದಿನದಂದು   ವೈಕುಂಠ ಯಾತ್ರೆ ಮಾಡಿದ ದಿನ  ಶ್ರೀ ಐಕೂರು ಆಚಾರ್ಯರು ಆರಾಧನೆ ಇವರ ಬಗ್ಗೆ ಪುಟ್ಟ ಪರಿಚಯ ತಂದೆ ವೆಂಕಪ್ಪಚಾರ್ಯರು ತಾಯಿ ಸೀತಾ ಬಾಯಿ ಪರಮ ಸಾತ್ವಿಕ ರು,ದೈವ ಭಕ್ತರು ಮೂವರು ಪುತ್ರಿ ಯರು.ಪುತ್ರ ಸಂತಾನವಾಗಬೇಕೆಂದು ತಮ್ಮ ಮಾವನವರಿಗೆ ಒಲಿದು ಮನೆಗೆ ಬಂದ ನರಸಿಂಹ ದೇವರ ಸೇವೆ ಮಾಡಿದ ಫಲವೇ ಐಕೂರು ಆಚಾರ್ಯರ ಜನನ. ಇವರಿಗೆ ತೊಟ್ಟಿಲು ಇಡಬೇಕಾದ ಸಮಯದಲ್ಲಿ ಭಾಗವತ ಶ್ರವಣವನ್ನು ಮಾಡಿದ ಮಹಾನುಭಾವ ರು. ಮನೆಗೆ ಯಾರಾದರೂ ಅತಿಥಿ ಗಳು ಬಂದರೆ ಪುಟ್ಟ ಬಾಲಕ ನರಸಿಂಹ ಓಡಿಹೋಗಿ ಅವರಿಗೆ ಧೀರ್ಘದಂಡ ನಮಸ್ಕಾರ ಹಾಕಿ ಅಪ್ಪ ಇದ್ದಾರೆ ಬರ್ರಿ ಒಳಗೆ ಅಂತ ಕರೆದು ಉಪಚಾರ ಮಾಡು ವರು. ಇವರಿಗೆ ಶೇಷಾಚಾರ್ಯರು ಹಾಗು ಯಳಮೇಲಿ ವಿಠ್ಠಲ ಆಚಾರ್ಯರು ದೊಡ್ಡ ವಿದ್ವಾಂಸರು(ಶ್ರೀ ಇಭರಾಮಪುರ ಅಪ್ಪಾವರು ಅನುಗ್ರಹ ದಿಂದ ಜನಿಸಿದ ವರು, ಇವರ ತಂದೆ ಯಳಮೇಲಿ ಹಯಗ್ರೀವಾಚಾರ್ಯರು) ಗುರುಗಳು. ಮತ್ತೊಬ್ಬ ಗುರುಗಳು ನಾಯಕಲ್ ರಾಮಾಚಾರ್ಯರು ಕರ್ಮಾಚರಣೆಗಳನ್ನು ಅನು ಸಂಧಾನ ಪೂರ್ವಕ ಶ್ರಿ ಹರಿಗೆ ಸಮರ್ಪಣೆ ಮಾಡುವಂತ ವ್ಯಾಪ್ತೋಪಾಸಕರು. ಹೀಗೆ ...

Tengina Kayi mattu Balehannu

ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ಮಹತ್ವ ಭಕ್ತರು ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ. ತೆಂಗಿನಕಾಯಿ, ಬಾಳೆಹಣ್ಣು , ಹೂವು ತೆಗೆದುಕೊಂಡು ಹೋಗುವರು. ದೇವರಿಗೆ ತೆಂಗಿನಕಾಯಿ, ಬಾಳೆಹಣ್ಣನ್ನೇ ಏಕೆ ಅರ್ಪಿಸಬೇಕೆಂದರೆ ಇವೆರಡೂ ಪವಿತ್ರ ಫಲಗಳು. ಭೂಮಿಯಲ್ಲಿ ಬೆಳೆಯುವ ಎಲ್ಲಾ ಗಿಡದ ಹಣ್ಣುಗಳನ್ನು ಪಶು, ಪಕ್ಷಿಗಳು ತಿಂದು ಹಿಕ್ಕೆ ಹಾಕುತ್ತವೆ. ಆ ಹಿಕ್ಕೆಯಲ್ಲಿ ಬೀಜಗಳೂ ಇರುತ್ತವೆ. ಮಾನವನೂ ಹಣ್ಣುಗಳನ್ನು ತಿಂದು ಬೀಜವನ್ನು ಎಸೆಯುತ್ತಾನೆ. ಆ ಬೀಜದಿಂದ ಬೆಳೆದ ಗಿಡ ಮರಗಳು ಎಂಜಲಿನಿಂದ ಬೆಳೆದಂತೆ ಆಯಿತು. ಆಗ ಆ ಫಲಗಳು ಪವಿತ್ರವಾಗುವುದಿಲ್ಲ. ಆದ್ದರಿಂದ ದೇವರಿಗೆ ಇಂಥ ಫಲಗಳು ಪೂಜೆಯ ಹೆಸರಿನಲ್ಲಿ ಸಮರ್ಪಿಸಿ ನೈವೇದ್ಯ ಮಾಡುವುದು ಶ್ರೇಷ್ಠವಲ್ಲ. ತೆಂಗಿನಕಾಯಿ ಹಾಗೂ ಬಾಳೆಹಣ್ಣು ಈ ವರ್ಗಕ್ಕೆ ಸೇರದೇ ಇರುವ ಪವಿತ್ರ ಫಲಗಳು. .. ತೆಂಗಿನಕಾಯಿಯನ್ನು ಸಿಪ್ಪೆ ಸಹಿತ ಅಥವಾ ಒಂದು ತಿಂಗಳು ನೀರಿನ ಕುಂಭದಲ್ಲಿಟ್ಟು ಭೂಮಿಯಲ್ಲಿ ಹೂತರೆ ಅದು ಮರವಾಗಿ ಬೆಳೆಯುತ್ತದೆ. ಆಗ ಎಂಜಲು ಇದಕ್ಕೆ ಅನ್ವಯಿಸುವುದಿಲ್ಲ. ಬಾಳೆಹಣ್ಣು ಬಾಳೆಹಣ್ಣು ಯಾವಾಗಲೂ ಬೀಜದಿಂದ ಬೆಳೆಯದೆ ಕಂದಿನ ಸಹಾಯದಿಂದ ಬೆಳೆಯುತ್ತದೆ ಹಾಗೂ ಕಂದಿನಿಂದ ಚಿಗುರಿ ಗಿಡವಾಗಿ ಬಾಳೆ ಫಲ ನೀಡುತ್ತದೆ. ಅಲ್ಲದೆ ಒಮ್ಮೆ ಫಲ ಬಿಟ್ಟ ನಂತರ ತನ್ನ ಆಯುಸ್ಸು ಮುಗಿಸುತ್ತದೆ. ಬಾಳೆ ತನ್ನ ಆಯುಸ್ಸು ಮುಗಿಸುವ ಮೊದಲು ಕಂದುಗಳನ್ನು ಮಾಡಿ ಸಸಿಗಳನ್ನು ಬೆಳೆಸುತ್ತದೆ. ಬಾಳೆಹಣ್ಣು ಸಹ ಎಂಜಲಾಗದ ...

Bheemana Amavasya

 ||ಭೀಮನ ಅಮಾವಾಸ್ಯೆ ವ್ರತದ ಮಹತ್ವ|| ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ಭೀಮನ ಅಮವಾಸ್ಯೆ, ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕೂಡ ಕರೆಯುತ್ತಾರೆ. ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಆಶೀರ್ವಾದ ಪಡೆಯುವುದು ವಾಡಿಕೆ. ಭೀಮನ ಅಮಾವಾಸ್ಯೆ ಹಿನ್ನೆಲೆ: ಆಸೆ ಬುರುಕ ಬ್ರಾಹ್ಮಣನೊಬ್ಬ ರಾಜಕುಮಾರನ ಶವದೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿ ಬಿಡುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ ಶವವನ್ನೂ ಹಾಗೂ ವಧುವನ್ನೂ ರಾಜ ಪರಿವರದವರೂ ನದಿ ತೀರದಲ್ಲಿ ಬಿಟ್ಟು ಹೋಗುತ್ತಾರೆ. ಶವದ ಮುಂದೆ ಕುಳಿತು ರೋಧಿಸುತ್ತಿದ್ದ ಆ ವಧು, ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ರಾಜಕುಮಾ...

Anyarindali

ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ - ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ ಕಣ್ಣಿಲ್ಲದಿರುವ ಕುರುಡ ಮೇಲಯ್ಯ- ಪುಣ್ಯಪಾಪವರಿಯದೆ ಬದುಕುವ ಮನುಜನಿಗಿಂತ  ನಾಯಿಕುನ್ನಿ ಲೇಸಯ್ಯ -  ಕುಲಹೀನನಾದರು ಸುಖ ದುಃಖಗಳನು ನಿನ್ನಿಂದಾಯಿತೆಂದು  ಮತಿ ಚೆನ್ನಾಗಿ ತಿಳಿಸಯ್ಯ ಗೋಪಾಲ ವಿಠ್ಠಲ

Purandara Dasara Ugabhogagalu

ಶ್ರೀ ಪುರಂದರದಾಸರ ಉಗಾಭೋಗಗಳು.  ಭಗವಂತನ ಅರಿವು ಜಗತ್ತಿನ ಬಗ್ಗೆ ಒಲವನ್ನು ಹುಟ್ಟಿಸಿ,  ಚೈತನ್ಯದ ಬಲವನ್ನು ಹೆಚ್ಚಿಸುತ್ತದೆ. ದಿನನಿತ್ಯ  ಉಗಾ ಭೋಗಗಳ ಅಭ್ಯಾಸದಿಂದ ಎಂತಹ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತನೆ ಮಾಡುವ ಅತೀಂದ್ರಿಯ ವಾದ ಶಕ್ತಿ ಇದೆ. ಸುಳಾದಿಗಳಿಗಿರುವಂತೆ ಇವುಗಳಿಗೆ ತಾಳದ  ನಿರ್ಬಂಧವಿಲ್ಲ. ಪಲ್ಲವಿ, ಅನುಪಲ್ಲವಿ ಗಳಾಗಲಿ,  ಭಿನ್ನ ಭಿನ್ನ ನುಡಿಗಳಾಗಲಿ ಇವುಗಳಲ್ಲಿ ಇರುವುದಿಲ್ಲ. ಮರಾಠಿಯ ಅಭಂಗಗಳು, ಓವಿಗಳು, ಸಂಸ್ಕೃತದ ಆರ್ಯಾಗಳು,  ದಂಡಿಗಳು, ಉಗಾಭೋಗಕ್ಕೆ ಸ್ಫೂರ್ತಿಯಾಗಿರಬಹುದೆಂದು  ಕೆಲವರ ಊಹೆ.  ಈಗ ನೋಡೋಣ ಕೆಲವು ಉಗಾಭೋಗಗಳು..  ಸ್ತ್ರೀಯರಿಗೆ ಪುರುಷರ ಮೋಹಿಸುವರಲ್ಲದೆ  l  ಪುರುಷರಿಗೆ ಪುರುಷರು ಮೋಹಿಸುವದೆಂತೋ l  ಹರಿ ಪರಮಪುರುಷ ಪುರುಷೋತ್ತಮ  l  ಪುರುಷ ಬ್ರಹ್ಮಾದಿಗಳು ನಿನಗೆ ಮೋಹಿಸುವರೈ  l   ತಿರುವೆಂಗಳಪ್ಪ ಸಿರಿ ಪುರಂದರ ವಿಠಲರೇಯ  l   ಧರೆಯೊಳು ನೀನು ಮೋಹನ ರೂಪ ಕಾಣೋ l  ಹರಿ ಪರಮಪುರುಷ ಪುರುಷೋತ್ತಮ ll  ಇಂದಿಗೆಂಬ ಚಿಂತೆ ನಾಳೆಗೆಂಬಾ  ಚಿಂತೆ  l  ನಾಡಿದಿಗೆಂಬಾ ಚಿಂತೆ ತೊತ್ತಿಗೇಕಯ್ಯ  l  ಒಡೆಯನುಳ್ಳ ತನಕ  ತೊತ್ತಿಗ್ಯಾತರ ಚಿಂತೆ  l  ಅಡಿಗಡಿಗೆ ನಮ್ಮನಾಳುವ ಕಾವ ಚಿಂತೆಯವ  ನೊಡೆಯ ಪುರಂದರ ವಿ...

Sripadarajara Ugabhogagalu

ಧ್ಯಾನವು ಕೃತಯುಗದಿ ಯಜನ ಯಜ್ಞವು ತ್ರೇತಾಯುಗದಿ ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು ಕಲಿಯುಗದಿ ಗಾನದಲಿ ಕೇಶವಯೆನಲು ಕೈಗೂಡುವನು ರಂಗವಿಠಲ ನಿನ್ನ ನಂಬಿದ ಮೇಲೆ ಇನ್ನು ಭಯವ್ಯಾತಕೆ ಪನ್ನಗಾಧಿಶಯನ ಮನ್ನಿಸಯ್ಯ ಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದ  ಎನ್ನೊಡೆಯ ರಂಗವಿಠ್ಠಲ ಎನ್ನ ದೊರೆಯೇ ! ಭವವೆಂಬ ಅಡವಿಯಲ್ಲಿ ತಾಪತ್ರಯದಿ ಸಿಲುಕಿ ಭಯಗೊಳ್ಳದಂತೆ ಗೆಲ್ಲುವುದಕೆ  ಶ್ರೀಹರಿನಾಮ ಹೊರತಾಗಿ ಮತ್ತುಂಟೆ  ನಿನ್ನ  ಚರಣದಲ್ಲಿಟ್ಟು ಸಲಹೋ ನಮೋ ರಂಗವಿಠ್ಠಲ !