Ikuru Acharyaru
ಇಂದು ಮತ್ತೊಬ್ಬ ಹರಿದಾಸ ರಾದ ಸುಳಾದಿ ಕುಪ್ಪೇರಾಯರು, ಶ್ಯಾಮಸುಂದರ ದಾಸರು, ಸಿರಿವಾರ ರಾಮಾಚಾರ್ಯರು,
ಕೊಪ್ಪರ ಅರ್ಚಕರಾದ ಗಿರಿಯಾಚಾರ್ಯರು ಇನ್ನೂ ಅನೇಕ ಶಿಷ್ಯ ಸಂಪತ್ತು ಹೊಂದಿದ,
ಶ್ರೀಹರಿಯ ಮಹಿಮೆಯ ವಿಜಯಧ್ವಜ ಮೆರೆದಾಡಿಸಲು ಧರೆಯೊಳಗೆ ವಿಜಯದಶಮಿಯ ದಿನ ಜನಿಸಿದ, ಹಾಗು ಶ್ರೀ ರಾಯರ ಪಟ್ಟಾಭಿಷೇಕ ಸುದಿನದಂದು ವೈಕುಂಠ ಯಾತ್ರೆ ಮಾಡಿದ ದಿನ
ಶ್ರೀ ಐಕೂರು ಆಚಾರ್ಯರು ಆರಾಧನೆ
ಇವರ ಬಗ್ಗೆ ಪುಟ್ಟ ಪರಿಚಯ ತಂದೆ ವೆಂಕಪ್ಪಚಾರ್ಯರು
ತಾಯಿ ಸೀತಾ ಬಾಯಿ ಪರಮ ಸಾತ್ವಿಕ ರು,ದೈವ ಭಕ್ತರು
ಮೂವರು ಪುತ್ರಿ ಯರು.ಪುತ್ರ ಸಂತಾನವಾಗಬೇಕೆಂದು
ತಮ್ಮ ಮಾವನವರಿಗೆ ಒಲಿದು ಮನೆಗೆ ಬಂದ ನರಸಿಂಹ ದೇವರ ಸೇವೆ ಮಾಡಿದ ಫಲವೇ ಐಕೂರು ಆಚಾರ್ಯರ ಜನನ.
ಇವರಿಗೆ ತೊಟ್ಟಿಲು ಇಡಬೇಕಾದ ಸಮಯದಲ್ಲಿ ಭಾಗವತ ಶ್ರವಣವನ್ನು ಮಾಡಿದ ಮಹಾನುಭಾವ ರು.
ಮನೆಗೆ ಯಾರಾದರೂ ಅತಿಥಿ ಗಳು ಬಂದರೆ ಪುಟ್ಟ ಬಾಲಕ ನರಸಿಂಹ ಓಡಿಹೋಗಿ ಅವರಿಗೆ ಧೀರ್ಘದಂಡ ನಮಸ್ಕಾರ ಹಾಕಿ ಅಪ್ಪ ಇದ್ದಾರೆ ಬರ್ರಿ ಒಳಗೆ ಅಂತ ಕರೆದು ಉಪಚಾರ ಮಾಡು ವರು.
ಇವರಿಗೆ ಶೇಷಾಚಾರ್ಯರು ಹಾಗು ಯಳಮೇಲಿ ವಿಠ್ಠಲ ಆಚಾರ್ಯರು ದೊಡ್ಡ ವಿದ್ವಾಂಸರು(ಶ್ರೀ ಇಭರಾಮಪುರ ಅಪ್ಪಾವರು ಅನುಗ್ರಹ ದಿಂದ ಜನಿಸಿದ ವರು, ಇವರ ತಂದೆ ಯಳಮೇಲಿ ಹಯಗ್ರೀವಾಚಾರ್ಯರು) ಗುರುಗಳು.
ಮತ್ತೊಬ್ಬ ಗುರುಗಳು ನಾಯಕಲ್ ರಾಮಾಚಾರ್ಯರು
ಕರ್ಮಾಚರಣೆಗಳನ್ನು ಅನು ಸಂಧಾನ ಪೂರ್ವಕ ಶ್ರಿ ಹರಿಗೆ ಸಮರ್ಪಣೆ ಮಾಡುವಂತ ವ್ಯಾಪ್ತೋಪಾಸಕರು.
ಹೀಗೆ ೩ ಗುರುಗಳಲ್ಲಿ ವಿದ್ಯೆಯನ್ನು ಕಲಿತ ನರಸಿಂಹ ಆಚಾರ್ಯರು ಅಂದರೆ ಐಕೂರು ಆಚಾರ್ಯರಿಗೆ ೩ ಜನ ಪತ್ನಿಯರು ತುಳಸಮ್ಮ ಹಾಗು ರಾಘಮ್ಮ.ಮತ್ತು ಲಕ್ಷ್ಮಿ ಬಾಯಿ
ರಾಘಮ್ಮನವರು ಅಲ್ಪಕಾಲದಲ್ಲಿ ಮರಣಹೊಂದಿದ ಮೇಲೆ ಲಕ್ಷ್ಮೀಬಾಯಿಯವರ ಜೊತೆ ವಿವಾಹ.
ಇವರು ಹೇಳುವ ಭಾಗವತ ಅದರ ಅರ್ಥ ಬಹು ಸರಳ.
ಒಂದು ಕಡೆ ಹೇಳಿದ ಭಾಗವತ ಇನ್ನೊಂದು ಕಡೆ ಅದೇ ಹೇಳಬೇಕಾದರೆಅದರ ಅರ್ಥ ವೇ ಬೇರೆ*
ಇವರಿಗೆ ಒಬ್ಬ ಸಾಕು ಮಗಳು ಭೀಮವ್ವ ಅಂತ.
ಭಗವಂತನು ಇವರಲ್ಲಿ ನಿಂತು ಕೆಲ ಮಹಿಮೆಯನ್ನು ತೋರಿಸಿದ್ದಾನೆ. ಬಿಂಬರೂಪಿ ಪರಮಾತ್ಮ ಇವರನ್ನು ಸಾರಿದವರ ಅಘಗಳನ್ನು ಕಳೆದ ಮತ್ತು ಇವರ ಕೀರ್ತಿ ಯನ್ನು ಹೆಚ್ಚಾಗಿ ಮಾಡಿದ.
ಅದಕ್ಕಾಗಿ ಆಚಾರ್ಯರು ನಿತ್ಯ ಭಗವಂತನ ಬಳಿಅತಿ ದೈನ್ಯದಿಂದ ಸ್ವಾಮಿ ಇದು ನಿನ್ನ ಮಹಿಮಾ ಅಂತ ಎಲ್ಲಾ ಜನಗಳ ತಲ್ಯಾಗ ಹಾಕು ನಂದಲ್ಲ ಇದು ಅಂತ ಕೇಳಿಕೊಳ್ಳುತ್ತಾ ಇದ್ದರು
ಒಂದು ದಿನ ತಮ್ಮ ಹೊಲಕ್ಕೆ ಹೋದಾಗ ಅವರ ಪಾದಕ್ಕೆ ಚೂರಿಯಿಂದ ತಿವಿದಂತಾಗಿ ಶ್ರೀ ಹರಿ ಅಂತ ಕೂಗಿದರು.ರಕ್ತ ಧಾರಾಕಾರವಾಗಿ ಹರಿಯಲು ಆರಂಭಿಸಿತು. ಹೊಲದಲ್ಲಿಯ ಕೊಯ್ಲು ಅವರ ಕಾಲನ್ನು ಗಾಯ ಮಾಡಿತ್ತು. ನಮ್ಮ ಹಾಗೇ ದೇವರನ್ನು ಆಚಾರ್ಯ ರು ನಿಂದನೆ ಮಾಡಲಿಲ್ಲ
ಅದನ್ನು ನೋಡಿ ನಕ್ಕು ನಿನಗೆಲ್ಲಿ ಸ್ವಾತಂತ್ರ್ಯ ಇದೆಯೋ ಖೋಡಿ
ಅಂತ ಹೇಳಿ ಶ್ರೀ ಹರಿಯ ಸಂಕಲ್ಪ ತಮ್ಮ ಇಹಯಾತ್ರೆಯ ಸನಿಹಕ್ಕೆ ಬಂದಿತು ಅಂತ ಕುಂಟುತ್ತಾ ಮನೆಗೆ ಬಂದರು.
ಆ ತರಹದ ಗಾಯವಾದರು ಭಾಗವತ ಪ್ರವಚನ ಬಿಡಲಿಲ್ಲ.
ಬಂದು ಶಿಷ್ಯ ವರ್ಗಕ್ಕೆ ಇದು ಕಡೀ ಪ್ರವಚನ ಮುಂದಿನ ಶನಿವಾರ ನಮ್ಮ ಪ್ರಯಾಣ ಅಂತ ಹೇಳಿ ದರು.
ಇವರ ಮಾತನ್ನು ಕೇಳಿ ಇವರ ಶಿಷ್ಯರು ಎಲ್ಲಾ ರು ಐಕೂರು ಬಂದು ಗುರುಗಳ ಬಳಿಸೇರುತ್ತಾರೆ.
ತಮ್ಮ ಅಂತಿಮ ಯಾತ್ರೆ ಸಮಯದಲ್ಲಿ ಶಿಷ್ಯರು, ಪರಿವಾರ ಹತ್ತಿರ ಇದ್ದರೆ ಅವರ ಮೇಲಿನ ಅಂತಃಕರಣ ತಮ್ಮ ಪಯಣಕ್ಕೆ ಅಡ್ಡಿಯಾಗುವದು ಅಂತ ಎಲ್ಲರ ನ್ನು ದೂರದ ಊರಿಗೆ ಕಳುಹಿಸಿ
ಏಕಾಂತದಲ್ಲಿ ಭಗವಂತನ ಚಿಂತನೆ ಮಾಡುತ್ತಾ ಇರುತ್ತಾರೆ.
ಸಾಮಾನ್ಯ ಜನರಾದರೆ ಅಂತಿಮಕಾಲದಲ್ಲಿ ಎಲ್ಲಾ ರನ್ನು ಕರೆಸಿ ಕೊಳ್ಳುವ ರು.
ಆ ದಿನ ಶನಿವಾರ ಬೆಳಿಗ್ಗೆ ತಮ್ಮ ಪತ್ನಿ ತುಳಸಮ್ಮನವರನ್ನು ಕರೆದು ಶ್ರೀ ಮದ್ಭಾಗವತ ಗ್ರಂಥ ತರಲು ಹೇಳುತ್ತಾರೆ.ತಮ್ಮ ಅಂತರಂಗದ ಬಿಂಬ ಮೂರ್ತಿಯನ್ನು ಧ್ಯಾನಿಸಿ ಭಾಗವತದ ಸೂಕ್ಷ್ಮ ವಿಷಯಗಳನ್ನು ತಿಳಿಸಿ
ದುಃಖ ದ ಅನುಭವವಾದರೆ ಭಗವಂತನ ಕಾರುಣ್ಯ ಎಂದು ತಿಳಿ ಸುಖ ದುಃಖ ಅವನು ನಮ್ಮ ಒಳಗೆ ಇದ್ದು ಪ್ರಾರಬ್ಧ ಅನುಸಾರ ಕೊಡುತ್ತಾನೆ
ಇವತ್ತು ರಾತ್ರಿ ಗೆ ನಮ್ಮ ಪ್ರಯಾಣ.
ಈ ಬಡ ದೇಹದ ಸಂಬಂದ ಮುಗಿಯಿತು. ಸಾಧನ ಮಾಡಿಕೊಳ್ರಿ ನೀವಿಬ್ಬರು ಇದು ಭಗವಂತನ ಸಂಕಲ್ಪ ಅಂತ ಹೇಳುತ್ತಾರೆ.
ಇಬ್ಬರು ಧರ್ಮಪತ್ನಿ ಯರ ರೋದನ ಅವರ ಕಿವಿಗೆ ಬಿದ್ದರು ಭಗವಂತನ ಧ್ಯಾನ ದಲ್ಲಿ ಇಟ್ಟು ಮನ ಸಡಿಲಾಗಲಿಲ್ಲ.
ಗಾಯದ ನಂಜು ದೇಹವನ್ನು ತೆಗೆದುಕೊಂಡು ಅವರಿಗೆ ಜರ್ಜರಿತರನ್ನಾಗಿ ಮಾಡಿತ್ತು.
ಸಾಯಂಕಾಲ ಸೂರ್ಯಾಸ್ತ ಆದ ಮೇಲೆ ಎಲ್ಲಾ ರು ಕೋಣೆ ಇಂದ ಹೊರಗಡೆ ಹೋಗಿ ಬಿಡ್ರಿ ಇನ್ನ
ಹೊರಗಿನಿಂದ ಚಿಲಕ ಹಾಕ್ರಿ ಒಳಗಡೆ ಯಾರು ಬರಬೇಡ್ರಿ ನಾವು ಲಯ ಚಿಂತನೆ ಕೂಡುತ್ತೇವೆ ಅಂತ ಹೇಳಿದರು.
ಅವರ ಪತ್ನಿಯರು ಹರಿಕಥಾಮೃತಸಾರ ಪಾರಾಯಣ,ಅಕ್ಕಪಕ್ಕದ ಜನರು ಎಲ್ಲಾ ಪಾರಾಯಣ ಮಾಡುತ್ತಾ ಹೊರಗಡೆ ಕುಳಿತಿದ್ದಾರೆ
ಇದ್ದಕಿದ್ದ ಹಾಗೇ ಶ್ರೀ ಹರಿ ಅಂತ ಕೇಳಿದಾಗ ಕೋಣೆಯ ಬಾಗಿಲನ್ನು ತೆಗೆದಾಗ ಆಚಾರ್ಯರು ಆಗಲೆ ಲಯ ಚಿಂತನೆ ಮಾಡಿ ಭಗವಂತನ ಪಾದವನ್ನು ಸೇರಿದ್ದರು.
ರಾಯರ ಪಟ್ಟಾಭಿಷೇಕ ದಿನದಂದು ಹರಿಪುರ ಸೇರಿದ ಇಂಥಹವರನ್ನು
ನರ ರೆಂದವರಿಗೆ ನರಕವು ದೂರವೇ
ಧರಣಿ ವಲಯದಿ ಇವರ ಚರಿತೆ ತಿಳಿಯದೆ
ಜರಿವ ಮನುಜರು ಘೋರ ನಿರಯ ಪಾತ್ರರು🙏
Comments
Post a Comment