ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ ಸಂಭ್ರಮ ಮಾರ್ಗಶಿರ ಶುದ್ಧ ಷಷ್ಠಿ ದಿನವಾದ ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ ನಾರಾಯಣನ ಮಗ ಮನ್ಮಥ (ಕಾಮ)ನೇ ಚತುರ್ಮುಖನ ಮಗ ಸನತ್ಕುಮಾರನು. ಇವನೇ ಶಿವಪಾರ್ವತಿಯರ ಮಗ ಸುಬ್ರಹ್ಮಣ್ಯ. ಇವನಿಗೆ ಆರು ಮುಖವಿರುವ ಕಾರಣ ಷಣ್ಮುಖನು ಎನಿಸಿದ್ದಾನೆ. ದೇವತೆಗಳ ಸೇನೆಯ ಒಡೆಯನೀತ ದೇವಸೇನಾಪತಿ. ಯೋಗ್ಯತೆಯಲ್ಲಿ ಇಂದ್ರ ನಿಗೆ ಸಮ. ಅಂದರೆ-ನಾರಾಯಣ ಲಕ್ಷ್ಮೀ ವಿಧಿ, ವಾಯು, ಸರಸ್ವತೀ, ಭಾರತೀ, ಗರುಡ ಶೇಷ ರುದ್ರ, ಷಣ್ಮಹಿಷಿಯರು ಸುಪರ್ಣೀ ವಾರುಣೀ ಪಾರ್ವತಿಯರಿಗಿಂತ ಮಾತ್ರ ಕಿರಿಯನು. ಸೂರ್ಯ, ಚಂದ್ರ, ಯಮ, ವರುಣ, ಅಗ್ನಿ, ಗುರು, ಗಣಪ, ಶನಿ, ವಾಸುಕಿ, ತಕ್ಷಕ ಮುಂತಾದ ಉಳಿದ ದೇವತೆಗಳೆಲ್ಲರೂ ಇವನಿಗಿಂತ ಕಿರಿಯರು. ಈತನ ವಾಹನ – ಮಯೂರ, ಧ್ವಜ- ಕುಕ್ಕುಟ, ಪ್ರಧಾನ ಶಿಷ್ಯ- ನಾರದ, ಮುಖ್ಯ ಆಯುಧ – ಶಕ್ತಿ, ಅವತಾರ – ಭರತ (ರಾಮನ ತಮ್ಮ), ಪ್ರದ್ಯುಮ್ನ (ಕೃಷ್ಣನ ಮಗ). ಚಕ್ರ, ಶಂಖ ಮೊದಲಾದ ಭಗವಂತನ ಆಯುಧಗಳೆಲ್ಲವೂ ಭಗವಂತನ ರೂಪಗಳೇ ಆಗಿವೆ. ಅವು ಚಿನ್ಮಯಗಳು. ಹಾಗೆಯೇ ಭಗವಂತನ ಆಯುಧಗಳೂ ಆಭರಣಗಳೂ ಎಲ್ಲವೂ ಲಕ್ಷ್ಮೀ ಸ್ವರೂಪಗಳೂ ಆಗಿರುತ್ತವೆ. ಅವೂ ಚಿನ್ಮಯಗಳೇ. ಸುದರ್ಶನ ಚಕ್ರ ದೇವತೆಯಾಗಿ ದೇವತೆಗಳ ರಕ್ಷಣೆ ಯಲ್ಲಿ ದೇವಸೇನಾ – ಪನಾದ ಸುಬ್ರಹ್ಮಣ್ಯನು ಭಗವಂತನ ಕೈಯಲ್ಲಿ ಮೆರೆ ಯುತ್ತಿರುವನು. ಹೀಗಾಗಿ ಮಾರ್ಗ ಶಿರ ಶುದ್ಧ ಷಷ್ಠಿಯಂದು ಈತನನ್ನು ಆರಾಧನೆಗೈಯಬೇಕು. ಆ ದಿನವನ್ನು ಚಂಪಾಷಷ್ಠಿ ಎಂದೂ ಕರೆಯುತ್ತಾರೆ. ಚಂಪಾಷಷ್ಠಿಯಂದು ಸುಬ...
Comments
Post a Comment