Anyarindali

ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ

ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ -

ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ

ಕಣ್ಣಿಲ್ಲದಿರುವ ಕುರುಡ ಮೇಲಯ್ಯ-

ಪುಣ್ಯಪಾಪವರಿಯದೆ ಬದುಕುವ ಮನುಜನಿಗಿಂತ  ನಾಯಿಕುನ್ನಿ ಲೇಸಯ್ಯ - 

ಕುಲಹೀನನಾದರು ಸುಖ ದುಃಖಗಳನು ನಿನ್ನಿಂದಾಯಿತೆಂದು 

ಮತಿ ಚೆನ್ನಾಗಿ ತಿಳಿಸಯ್ಯ ಗೋಪಾಲ ವಿಠ್ಠಲ

Comments

Popular posts from this blog

Subrahmanya Shashti

Rathasaptami

Helavanakatte Giriyamma