Rathasaptami
ರಥಸಪ್ತಮಿ ಆಚರಣೆ
ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ, ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ.
ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.
ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.
ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.
ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.
ರಥ ಸಪ್ತಮಿಯು ಯಾವಾಗಲೂ ಅರುಣೋದಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಏಳು ಎಕ್ಕದ ಎಲೆಯನ್ನು ತಲೆ, ಭುಜ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -
ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ೨ ||
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ ||
ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)
ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ -
ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನಿಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.
ಸೂರ್ಯಾರ್ಘ್ಯ ಮಂತ್ರ -
ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||
ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.
ಸಪ್ತಮೀ ಅರ್ಘ್ಯಮಂತ್ರ -
ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||
ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.
ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.
7 ಅರ್ಕದೆಲೆಗಳಿಂದ ಸ್ನಾನ :
ಈ ದಿನದಂದು 7 ಅರ್ಕದೆಲೆಗಳಿಂದ ಸ್ನಾನ ಮಾಡಬೇಕು. ಅರ್ಕದೆಲೆಯ ಸ್ನಾನ ಸೂರ್ಯನಾರಾಯಣನ ಅನುಗ್ರಹದಿಂದ ಸರ್ವವ್ಯಾಧಿಗಳ ನಿವಾರಣೆ ಮತ್ತು ಸಪ್ತಜನ್ಮಗಳ ದುಷ್ಕರ್ಮಗಳ ನಾಶವಾಗುತ್ತೆ.
ಕೂಷ್ಮಾಂಡ (ಬೂದಗುಂಬಳಕಾಯಿ) ದಾನ :
ಈ ದಿನ ಕೂಷ್ಮಾಂಡ (ಬೂದಗುಂಬಳಕಾಯಿ) ದಾನ ಮಾಡುವದರಿಂದ ಗರ್ಭ ದೋಷ ನಿವಾರಣೆಯಾಗಿ ವಿಶೇಷ ಸಂತಾನದ ಫಲ ಲಭಿಸುತೇ.
ಕೂಷ್ಮಾಂಡ ದಾನದ ಸಂಕಲ್ಪ :
ಆಚಮನ, ಕೇಶವಾಯಸ್ವಾಹ……… ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ _____ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಮಮ ಕುಲೇ ಸಕಲ ಗರ್ಭದೋಷ ಪರಿಹಾರಾರಾರ್ಥಂ, ಸೂರ್ಯಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಏತದ್ ಮಾಸ ನಿಯಾಮಕ ಕಮಲಾ ಮಾಧವ ಪ್ರೀತ್ಯರ್ಥಂ, ಅಸ್ಮತ್ ಕುಲದೇವತ ಶ್ರೀಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ಕೂಷ್ಮಾಂಡ ದಾನಂ ಕರಿಷ್ಯೇ.
ಕೂಷ್ಮಾಂಡಂತಿಲಗವ್ಯಾಢ್ಯಂ ಬ್ರಹ್ಮಣಾ ನಿರ್ಮಿತಂ ಪುರಾ |
ಯಸ್ಮಾದಸ್ಯ ಪ್ರದಾನೇನ ಸಂತತಿರ್ವರ್ಧತಾಂ ಮಮ ||
ಸೂರ್ಯ ದ್ವಾದಶ ಸ್ತೋತ್ರ :
ಆದಿತ್ಯಃ ಪ್ರಥಮಂ ನಾಮ
ದ್ವಿತೀಯಂ ತು ದಿವಾಕರಃ ।
ತೃತೀಯಂ ಭಾಸ್ಕರಃ ಪ್ರೋಕ್ತಂ
ಚತುರ್ಥಂ ಚ ಪ್ರಭಾಕರಃ ॥
ಪಂಚಮಂ ಚ ಸಹಸ್ರಾಂಶು
ಷಷ್ಠಂ ಚೈವ ತ್ರಿಲೋಚನಃ ।
ಸಪ್ತಮಂ ಹರಿದಶ್ವಂ ಚ
ಅಷ್ಟಮಂ ತು ಅಹರ್ಪತಿಃ ॥
ನವಮಂ ದಿನಕರಃ ಪ್ರೋಕ್ತಂ
ದಶಮಂ ದ್ವಾದಶಾತ್ಮಕಃ ।
ಏಕಾದಶಂ ತ್ರಿಮೂರ್ತಿಶ್ಚ
ದ್ವಾದಶಂ ಸೂರ್ಯ ಏವ ತು ॥
ದ್ವಾದಶಾದಿತ್ಯನಾಮಾನಿ
ಪ್ರಾತಃಕಾಲೇ ಪಠೇನ್ನರಃ ।
ದುಃಸ್ವಪ್ನೋ ನಶ್ಯತೇ ತಸ್ಯ
ಸರ್ವದುಃಖಂ ಚ ನಶ್ಯತಿ ॥
ದದ್ರುಕುಷ್ಟಹರಂ ಚೈವ
ದಾರಿದ್ರ್ಯಂ ಹರತೇ ಧ್ರುವಮ್ ।
ಸರ್ವತೀರ್ಥಕರಂ ಚೈವ
ಸರ್ವಕಾಮಫಲಪ್ರದಮ್ ॥
ಯಃ ಪಠೇತ್ ಪ್ರಾತರುತ್ಥಾಯ
ಭಕ್ತ್ಯಾ ಸ್ತೋತ್ರಮಿದಂ ನರಃ । ಸೌಖ್ಯಮಾಯುಸ್ತಥಾರೋಗ್ಯಂ ಲಭತೇ ಮೋಕ್ಷಮೇವ ಚ ॥

Comments
Post a Comment