Upali Gurumadhwa Rayaru
ಹೆಸರು : ಶ್ರೀ ಉಪ್ಪಲಿ ಗುರುಮಧ್ವರಾಯರು
ತಂದೆ : ಶ್ರೀ ವಿಜಯರಾಯರು
ತಾಯಿ : ಸಾಧ್ವೀ ಲಕ್ಷ್ಮೀಬಾಯಿ
ಜನನ : ಕ್ರಿ ಶ 1918
ಸಂವತ್ಸರ : ಸಿದ್ಧಾರ್ಥ
ಆಯಣ : ಉತ್ತರಾಯಣ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ : ಗುರುವಾರ
ಯೋಗ : ಸಿದ್ಧಿ
ರಾಶಿ : ತುಲಾ
ನಕ್ಷತ್ರ ಮತ್ತು ಚರಣ : ವಿಶಾಖ 3ನೇ ಚರಣ
ಜನ್ಮ ನಾಮ : ತೇಜಪ್ಪ
ಗೋತ್ರ : ಕೌಂಡಿನ್ಯ
ಉಪನಯನ : ಕ್ರಿ ಶ 1927
ಬ್ರಹ್ಮೋಪದೇಶ : ಅಪರೋಕ್ಷ ಜ್ಞಾನಿಗಳಾದ ಶ್ರೀ ಇಂದಿರೇಶ
( ಶ್ರೀ ಪಾಂಡುರಂಗೀ ಹುಚ್ಚಾಚಾರ್ಯರು )
ಧರ್ಮ ಪತ್ನಿ : ಸಾಧ್ವೀ : ಗಂಗಾಬಾಯಿ ( ಸಾವಿತ್ರಿ )
ಸುಳಾದಿ ಹೇಳಿಕೊಟ್ಟ ಗುರುಗಳು : ಶ್ರೀ ಮಾನವಿ ವೆಂಕೋಬರಾಯರು
ಶ್ರೀ ಉಪ್ಪಲಿ ಗುರು ಮಧ್ವರಾಯರು ರಾಯಚೂರಲ್ಲಿ ಕ್ರಿ ಶ 1995 ಶ್ರೀ ಗುರು ವಿಜಯದಾಸಾಶ್ರಮ ಸ್ಥಾಪಿಸಿದರು.
ಉತ್ತನೂರಿನಲ್ಲಿ ಶ್ರೀ ಗೋಪಾಲದಾಸರ ಕಟ್ಟೆ ನಿರ್ಮಾಣ ಮಾಡಿದರು
ರೇಖಾ ಕೃತಿಗಳು :
ಶ್ರೀ ಗೋಪಾಲದಾಸರು ವಿರಾಟ ಪುರುಷನ ಆಕೃತಿಯನ್ನು ಚಿತ್ರಿಸಿದಂತೆ, ಶ್ರೀ ಗುರುಮಧ್ವರಾಯರು " ಸುಜ್ಞಾನ ಪಟಗಳ " ನ್ನು ಬರೆದಿದ್ದಾರೆ. ಅವುಗಳ ವಿವರ...
1 ಮತ್ತು 2 - ಖಗೋಳ ಮತ್ತು ಭೂಗೋಳದ ವಿವರಣೆ
3. ಸೂಕ್ಷ್ಮಮತ್ತು ಸ್ಥೂಲ ಸೃಷ್ಟಿ
4. ಪದ್ಮಕಲ್ಪ, ವಿರಾಟಕಲ್ಪ, ಶ್ವೇತ ವರಾಹ ಕಲ್ಪ - ಸೃಷ್ಟಿ
5. ಧಾಮ ತ್ರಯಗಳು ( ಅನಂತಾಸನ, ಶ್ವೇತದ್ವೀಪ, ವೈಕುಂಠ )
6. ಸಪ್ತ ದ್ವೀಪಗಳು
7. ನವ ಖಂಡಗಳು
8. ಐತಿಹಾಸಿಕ - ರಾಜ ವಂಶಾವಳಿ
9. ಓಂಕಾರದ ವಿವರಣೆ
10. ಗಾಯತ್ರೀ ಮಂತ್ರದ ಉತ್ಪತ್ತಿ
11. ದೇಹಾಂತರ್ಗತ ಕಮಲಗಳ ವಿವರಣೆ
12. ಸೂರ್ಯನ ರಥ ಹಾಗೂ ತಿರುಗುವ ಪಥ
13. ಶ್ರೀಕಾರದಲ್ಲಿ ಅಷ್ಟಕದ ಅಡಕ
14. ಶ್ರೀಕಾರದಲ್ಲಿ ಶ್ರೀ ಶೇಷದಾಸರ ಉಗಾಭೋಗ
15. ಶ್ರೀ ಹರಿಕಥಾಮೃತಸಾರದಲ್ಲಿ ವಿವರಿಸಿದ ಪಂಚಾಗ್ನಿಯಲಿ, ಶ್ರೀಮನ್ನಾರಾಯಣನ ತ್ರಿ೦ಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿ
" ಗ್ರಂಥಗಳು "
1. ಶ್ರೀ ಶೇಷದಾಸರ ಉಗಾಭೋಗ, ಸುಳಾದಿಗಳು - 1985
2. ಶ್ರೀ ಶೇಷದಾಸ ಕೃತ " ನಿತ್ಯಕರ್ಮಾನುಷ್ಠಾನ " - 1988
3. ಶ್ರೀ ಗೋಪಾಲದಾಸಾರ್ಯರ " ಸುಳಾದಿ ಮತ್ತು ಪದಗಳು " - 1989
4. ಶ್ರೀ ಶೇಷದಾಸ ಕೃತ" ಪಂಚ ಪ್ರಮೇಯ " - 1990
5. ಶ್ರೀ ವಿಜಯದಾಸಾರ್ಯ ಕೃತ " ತಾರತಮ್ಯ ಸುಳಾದಿ " - 1991
6. ಶ್ರೀ ಶೇಷದಾಸ ಕೃತ" ವಾರದ ಸುಳಾದಿ " - 1992
7. ಶ್ರೀ ಗುರು ಶ್ರೀಶ ವಿಠಲ ಕೃತ " ಸುಳಾದಿಗಳು " - 1992
8. ಉದ್ಧಾಲಕನ ಕಥೆ - 1992
8. ಶ್ರೀ ವಿಜಯದಾಸಾರ್ಯ ಕೃತ " ಸೃಷ್ಟಿ ಪ್ರಕರಣ ಸುಳಾದಿ " - 1994
9. ತೀರ್ಥ ಕ್ಷೇತ್ರ ಮಹಿಮೆ - 1997
10.ಶ್ರೀ ಪ್ರಾಣದೇವರ ಮಹಿಮಾ ಸುಳಾದಿ - 1997
11. ಜೀವದ ಉಪಾಸನಾ ಪ್ರಕರಣ ಸುಳಾದಿ - 1998
12. ಸಾಧನಾ ಕ್ರಮ ಸುಳಾದಿ - 1998
13. ಶ್ರೀ ಹರಿಗುರುಗಳ ಸ್ತೋತ್ರ - 1999
14. ಪುರುಹೂತ ಜಯತೀರ್ಥ ಶ್ರೀ ಶೇಷದಾಸರು - 1999
15. ಶ್ರೀ ಶೇಷದಾಸರ ಚರಿತ್ರೆ - 1999
16. ಶ್ರೀ ಹರಿಕಥಾಮೃತ ನಿಘಂಟು - 2000
ಜೊತೆಗೆ ಜ್ಞಾನ ಪ್ರಸಾರ ಪ್ರಕಾಶನ ಮತ್ತು ಗುರು ವಿಜಯದಾಸಾಶ್ರಮದಿಂದ ಅನೇಕ ಗ್ರಂಥಗಳು ಮುದ್ರಣಗೊಂಡಿವೆ!!
" ಪ್ರಶಸ್ತಿಗಳು "
ಶ್ರೀ ಭಂಡಾರುಕೇರಿ ಮಠದಿಂದ " ಹರಿದಾಸ ವಾಙ್ಞಯ ವಿಶಾರದ "
ರಾಯಚೂರು ಭಕ್ತರಿಂದ " ಸುಳಾದಿ ರತ್ನಾಕರ "
ಶ್ರೀ ರಾಯರ ಮಠದಿಂದ " ಶ್ರೀ ರಘುನಂದನ ಪ್ರಶಸ್ತಿ " ಮತ್ತು ತುಲಾಭಾರ ಮತ್ತು ಸನ್ಮಾನಗಳು
ಶ್ರೀ ಉತ್ತರಾದಿ ಮಠದಿಂದ " ದಾಸ ಸಾಹಿತ್ಯ ಭೂಷಣ "
ಶ್ರೀ ಭೀಮನಕಟ್ಟೆ ಮಠದಿಂದ " ಶ್ರೀ ಭೀಮಸೇತು ಪುರಂದರ "
" ನಿರ್ಯಾಣ "
ವಿಕೃತಿ ನಾಮ ಸಂವತ್ಸರ ಭಾದ್ರಪದ ಶುದ್ಧ ಪೌರ್ಣಿಮಾ ಉಪರಿ ಪ್ರತಿಪಾದ ( 21.09.2010 )
Comments
Post a Comment