Posts

NAGARA CHOWTI NAGARA PANCHAMI

  ನಾಗ ರ  ಚೌತಿ ಮತ್ತು   ನಾಗರ ಪಂಚಮಿ ‌ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸಬೇಕು.. ಹೆಣ್ಣು ಮಕ್ಕಳು ಚೌತಿಯ ದಿನ ಹಾಲು ಎರೆಯಬೇಕು ಹೊರಗೆ ಕಲ್ಲು ನಾಗಪ್ಪನಿಗೆ.. ...ಪಂಚಮಿ ದಿನ ಗಂಡಸರು ಮನೆಯಲ್ಲಿ ಪೂಜೆ ಮಾಡಿ ಹಾಲೆರೆಯಬೇಕು . ಚತುರ್ಥಿಯ  ದಿನ ಹೆಣ್ಣುಮಕ್ಕಳು  ಸ್ನಾನದ ನಂತರ ಹೊಸ ವಸ್ತ್ರ ಧರಿಸಿ, ಸೌಭಾಗ್ಯದ ಚಿಹ್ನೆಗಳನ್ನು ಧರಿಸಿಕೊಂಡು, ಕಲ್ಲು ನಾಗಪ್ಪನಿಗೆ  ಅಥವಾ  ಹುತ್ತಕ್ಕೆ  ಹಾಲು ಅಭಿಷೇಕ ಮಾಡಿ ಅರಿಶಿನ ಹಚ್ಚಿದ ಗೆಜ್ಜೆವಸ್ತ್ರ, ಅರಿಶಿನ-ಕುಂಕುಮ, ಜೋಳದ ಅರಳು, ನೆನೆದ ಕಡ್ಲಿ, ಹೂ-ಕೇದಿಗೆ,  ಗರಿಕೆ-ಪತ್ರಿ ಏರಿಸಬೇಕು. ತಂಬಿಟ್ಟು, ಜೋಳದರಳಿನ ಉಂಡೆ, ಎಳ್ಳುಂಡೆ ಮುಂತಾದ ಉಂಡೆಗಳನ್ನು ಮಾಡಿ ನಾಗಪ್ಪನಿಗೆ ನೈವೇದ್ಯ ಮಾಡಬೇಕು. ಈ ಸಮಯದಲ್ಲಿ ಹೆಣ್ಣು ಮಕ್ಕಳು ತವರು ಮನೆಗೆ ಬಂದು ನಾಗಪ್ಪನ ಪೂಜೆಯಲ್ಲಿ ಭಾಗವಹಿಸುವದು ವಿಶೇಷ... ನಾಗ ಚೌತಿಯ ದಿನ  ಹೆಣ್ಣು ಮಕ್ಕಳು ಉಪವಾಸ ಮಾಡಬೇಕು  ಯಾಕೆಂದರೆ ನಾವು.  ಮಾಡಿದ ಉಪವಾಸದ ಮಹತ್ವವೆಂದರೆ  ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ  ಚೌತಿಯಲ್ಲಿ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಇದರಿಂದ ನಾಗದೇವತೆಗಳು ಮರಳಿ...

Adhika Masa Mahatme

ಅಧಿಕಮಾಸದ ಮಹತ್ತ್ವ ಅಧಿಕಮಾಸ ಎಂದರೇನು ? ಯಸ್ಮಿನ್ ಮಾಸಿ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ಚ | ಮಲಮಾಸಃ ಸ ವಿಜ್ಞೇಯಃ ಮಾಸಃ ಸ್ಯಾತ್ತು ತ್ರಯೋದಶಃ ||                   - ಕಾಠಕಗೃಹ್ಯಸೂತ್ರ ಚಾಂದ್ರೋ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕಿರ್ತಿತಃ  ||           - ಬ್ರಹ್ಮಸಿದ್ಧಾಂತ( ಸ್ಮೃತಿ ಮುಕ್ತಾವಳಿ ) ಯಾವಚಾಂದ್ರಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಥವ ಎರಡು ಸಂಕ್ರಾಂತಿಗಳು. ಬರುತ್ತವೆಯೋ ಅಂತಹ ಚಾಂದ್ರಮಾಸಕ್ಕೆ ಮಲಮಾಸ(ಅಧಿಕಮಾಸ) ಎಂದು ಹೆಸರು . ಈ ವಿಷಯವನ್ನು ಕಾಠಕಗೃಹ್ಯಸೂತ್ರದಲ್ಲಿ ಹೇಳಿದ್ದಾರೆ. ಯಾವ ತಿಂಗಳಲ್ಲಿ ಸಂಕ್ರಾಂತಿಯೇ ಇಲ್ಲವೋ ಅದನ್ನು ಮಲಮಾಸ ಅಂದರೆ ಅಧಿಕಮಾಸ ಎಂದು ತಿಳಿಯಬೇಕು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ . ಹಾಗೇಯೇ ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .ಸಂಕ್ರಾಂತಿ ಇಲ್ಲದಿರುವ ಚಾಂದ್ರಮಾನ ಮಾಸವನ್ನು ಮಲಮಾಸ .(ಅಧಿಕ ಮಾಸ)ಎಂಬುದಾಗಿ ಹೇಳುತ್ತಾರೆ ಎಂದು ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ . ********* ಮಲ(ಅಧಿಕ)ಮಾಸದ ಅರ್ಥ ಮಲಪಕರ್ಷಣೋ ಮಾಸೋ ಮಲಮಾಸಸ್ತತೋ ಬುಧೈಃ | ನಿರ್ಧಾರಿತೋ ವಸಿಷ್ಠಾಧೈಃ ಪುರಾಣೈರ್ವೇದಚಿಂತಕೈಃ || ಮಲಂ ತು.ಪಾತಕಂ ನಾಮ ಸ್ನಾನದಾನಾದಿದೀಪಕೈಃ ...

Krishnadwaipayana Teertharu

Image
ಇಂದು ಪ್ರಾತಃ ಸ್ಮರಣೀಯರಾದ ಶ್ರೀ ಕೃಷ್ಣದ್ವಯಪಾಯನ ತೀರ್ಥರ  ಅವರ ಸ್ಮರಣೆ ಮಾಡಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ  ಇವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಲಭ್ಯವಿಲ್ಲದಿದ್ದರು ಇವರ ಶಿಷ್ಯರ ಹಾಗೂ ಹರಿದಾಸರ ಕೃತಿಗಳಲ್ಲಿ ಗುರುಗಳ ವ್ಯಕ್ತಿತ್ವ ವರ್ಚಸ್ಸು ಮಹಿಮೆಗಳು ತಿಳಿಯುತ್ತವೆ  ಇವರ ಜನನ ಸುಮಾರು 1619-1669 ಇರಬಹುದು ಶ್ರೀ ಉತ್ತರಾದಿ ಮಠದ ಶ್ರೀ ವೇದವ್ಯಾಸ ತೀರ್ಥರಿಂದ ಯತ್ಯಾಶ್ರಮ ಸ್ವೀಕಾರ ಮಾಡಿದ ಮಹಾನುಭಾವರು ಪೂರ್ವಾಶ್ರಮದಲ್ಲಿ ಎಂದು ವರ್ಷದ ಬಾಲಕರಿರುವಾಗಲೇ ಮಹಾಬಲೇಶ್ವರ ಶ್ರೀ ಕೃಷ್ಣಾನದಿಯ ಉಗಮ ಸ್ಥಾನದಲ್ಲಿ ಪ್ರವಾಹವು ತುಂಬಿ ಹರಿಯುತ್ತಿರುವಾಗ ನದಿಯನ್ನು ದಾಟುವ ಛಲದಿಂದ ಈಜು ಬಿದ್ದರು ಪ್ರವಾಹದ ಸೆಳತಕ್ಕೆ ಕೈಸೊತು ಶ್ರೀ ರಾಮಚಂದ್ರನ ಸ್ಮರಿಸುತ್ತ ನದಿಯನ್ನು ದಾಟಿ ಭವ ಸಾಗರದ ದಡವನ್ನು ಹರಿಸ್ಮರಣೆಯಿಂದ ದಾಟಿ ಭಕುತರನ್ನು ದಾಟಿಸಿದ ಮಹಾನುಭಾವರು  ತಾವು ಉಪಾಸನಾ ಗೈಯುತ್ತಿದ್ದ ಭೀಮಾನದಿಯ ಕೂಸುಮೂರ್ತಿಯಲ್ಲಿ ಕೃಷ್ಣಾ ಸಂಗಮದ ಪರಿಯಂತ ಸುಮಾರು ಐದಾರು ಮೈಲು ಪ್ರದೇಶದಲ್ಲಿ ಸುಂದರವಾದ ತೆಂಗಿನ ತೋಟಗಳನ್ನು ನಿರ್ಮಿಸಿ ತಮ್ಮ ತಪೋಮಯ ಸಾಧನಗಮ್ಯವಾದ ಶ್ರೀವರಾಹದೇವರಿಗೆ ವಿಹಾರಾರ್ಥವಾಗಿ ವ್ಯವಸ್ಥೆ ಮಾಡಿದ್ದರು ಅಷ್ಟೇ ಅಲ್ಲದೆ ತೈಲಾಭ್ಯಂಗಾರ್ಥವಾಗಿ ವರಾಹ ದೇವರನ್ನು ಆಹ್ವಾನಿಸುತ್ತಿದ್ದರು  ಇಲ್ಲಿ ಭೀಮಾನದಿ ದಕ್ಷಿಣಾಭಿಮುಖವಾಗಿ ಹರಿಯುತ್ತಿರುವುದು ಇಲ್ಲಿಯ ಮತ್ತೋಂದು ವಿಶೇಷ  ಇವರ ಭವ್ಯವ...

Varadendra Teertharu

Image
ಶ್ರೀ ಶ್ರೀ ವರದೇಂದ್ರತೀರ್ಥರು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ‌ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಇತಿಹಾಸದಲ್ಲಿ ಶ್ರೀ ವರದೇಂದ್ರಸ್ವಾಮಿಗಳ ಹೆಸರು ಬಹಳ ಪ್ರಖ್ಯಾತವಾದದ್ದು. ಇವರು ಮಹಾನ್‌ ಪಂಡಿತರು.ಪ್ರಸಿದ್ದ ವಾದಿದಿಗ್ವಿಜಯಿಗಳು.ಇವರ ಕಾಲದಲ್ಲಿ ಸಂಸ್ಥಾನವು ಸರ್ವವಿಧದಿಂದಲೂ ಅತ್ಯುನ್ನತ ಸ್ಥಿತಿಗೆ ಬಂದಿತು.ಶ್ರೀಗಳವರ ವ್ಯಕ್ತಿತ್ವ ಬಹಳ ಪ್ರತಿಭಾಪೂರ್ಣವಾದದ್ದು. ಶ್ರೀಗಳವರು ದಕ್ಷಿಣಭಾರತದಲ್ಲೆಲ್ಲ ಸಂಚಾರ ಕೈಗೊಂಡರು. ಇವರ ದಕ್ಷಿಣ ದೇಶದ ಪ್ರವಾಸದಲ್ಲಿ 1774ರಲ್ಲಿ ಸೋಮರಾಜ ಎಂಬುವ ನಾಯಕ ಜಯದ ಸಂವತ್ಸರದ ಆಶ್ವಯುಜ ಶುದ್ಧ ಬಿದಿಗೆಯ ದಿನ ಅನೇಕ‌ ಭೂಮಿಗಳನ್ನು ಕೊಟ್ಟು ಕೃತಾರ್ಥನಾದ. 1769 ರಲ್ಲಿ ವೀರವೆಂಕಟ ತಿರುಮಲರಾಯ ಮತ್ತು ಬಲಾಸತ್‌ಜಂಗ್ ಬಹದೂರ್ ಮೊದಲಾದವರಿಂದ ಶ್ರೀಗಳವರು ಢಾಣಾಪುರ ಮೊದಲಾದ ಗ್ರಾಮಗಳನ್ನು ಪಡೆದರು. ಶ್ರೀಗಳವರು ಲೌಕಿಕದಲ್ಲಿ ಹೇಗೆ ದಕ್ಷರೋ ಹಾಗೆಯೇ ಉದ್ದಾಮ ಪಂಡಿತರೂ ಅಗಿದ್ದರು. ಚತುಃಶಾಸ್ತ್ರ ಪಂಡಿತರಾಗಿ ದಾಸಾಗ್ರಣಿಗಳೆಂದು ಪ್ರಖ್ಯಾರತಾದ ಶ್ರೀ ಜಗನ್ನಾಥದಾಸರು ಶ್ರೀಗಳವರಲ್ಲಿ ವ್ಯಾಸಂಗ‌ಮಾಡಿದವರು. ಶ್ರೀಗಳವರ ಸ್ತೋತ್ರ ರೂಪವಾಗಿ ಅವರು ವರದೇಂದ್ರ ಪಂಚರತ್ನಮಾಲಿಕೆ ಎಂಬ ಕವಿತೆಯನ್ನು ರಚಿಸಿದರು. ಶ್ರೀಗಳವರು ದಾಸಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟರು.ಹಿಂದೆ ಚಂದ್ರಿಕಾಚಾರ್ಯರರ ಕಾಲದಲ್ಲಿ ಆ ಸಾಹಿತ್ಯ ಹೇಗೆ ಪೋಷಿತವಾಯಿತೋ ಹಾಗೆ ಈಗ ಇನ್ನೊಮ್ಮೆ  ದಾಸ ಸಾಹಿತ್ಯ ಪುನರುಜ್ಜೀ...

Jamakhandi Vadirajacharyaru

Image
 || ಶ್ರೀ ಭಾವಿಸಮೀರ ವಾದಿರಾಜ ಗುರುಭ್ಯೋ ನಮ: || ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು (1842 - 1896) (ಶ್ರೀ ಇಭವರದವಿಠಲ ದಾಸರು) ಆರಾಧನೆ - ಶ್ರಾವಣ ಬಹುಳ ತ್ರಯೋದಶಿ ಅವತಾರದ ಕೊನೆಯ ಸ್ಥಳ  - ಹಂಪಿ (ಶ್ರೀ ರಘುನಂದನ ತೀರ್ಥರ ಬೃಂದಾವನದ ಹತ್ತಿರ ಸ್ಥಳದಲ್ಲಿ) ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ: | ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ || ಶ್ರೀ ಜಂಬುಖಂಡಿ ವಾದಿರಾಜಾರ್ಯರು 19ನೇ ಶತಮಾನದ ಮಹಾನ್ ಅಪರೋಕ್ಷ ಜ್ಞಾನಿಗಳು. ಶ್ರೀ ವಾದಿರಾಜರ ಋಜುತ್ವ ಸಮರ್ಥನೆಯ ಮಹಾನ್ ಸೇನಾನಿಗಳು . ತಮ್ಮ ದೀರ್ಘಾವಧಿಯಲ್ಲಿ ಅನೇಕ ಸಾಧನೆ, ಮಹಿಮೆ ಹಾಗು ಜ್ಞಾನದ ಲಹರಿಯನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ.  ಶ್ರೀ ಆಚಾರ್ಯರು, ಆಷಾಢ ಬಹುಳ ಪಂಚಮಿಯಂದು ಧಾರವಾಡ ಜಿಲ್ಲೆಯ ಹಾನಗಲ್ಲು  ಎನ್ನುವ ಸ್ಥಳದಲ್ಲಿ ಆವತಾರ ಮಾಡಿದ್ದಾರೆ. ಆಚಾರ್ಯರ ವಿದ್ಯಾಭ್ಯಾಸ: ಶ್ರೀ ಆಚಾರ್ಯರು ತಮ್ಮ ವಿದ್ಯಾಭ್ಯಾಸವನ್ನು 20 ವರ್ಷಗಳ ಕಾಲ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠ ಶ್ರೀ ವಿದ್ಯಾಧೀಶ ತೀರ್ಥರ  ಹಾಗು ಶ್ರೀ ಸತ್ಯಪರಾಕ್ರಮ ತೀರ್ಥರ ಬಳಿ ಮಾಡಿದ್ದಾರೆ. ಶ್ರೀ ಆಚಾರ್ಯರ ಸಮಕಾಲಿನರು: ಶ್ರೀ ರಘುಪ್ರವೀರ ತೀರ್ಥರು , ಶ್ರೀ ವೃಂದಾವನಾಚಾರ್ಯರು, ಶ್ರೀ ವಿಶ್ವಾಧಿಶ ತೀರ್ಥರು  , ಶ್ರೀ ಸುಜನೇಂದ್ರ ತೀರ್ಥರು, ಶ್ರೀ ಸುಜ್ಞಾನೇಂದ್ರ ತೀರ್ಥರು, ಶ್ರೀ ಸುಧರ್ಮೇಂದ್ರ ತೀರ್ಥರು, ಶ್ರೀ ಸತ್ಯಪರಾಯಣ ತೀರ್ಥರು, ಶ್ರೀ ...

Vijayeendra Teertharu

ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ತ್ರಯೋದಶಿ , ಶ್ರೀಸುರೇಂದ್ರತೀರ್ಥರ ವರ ಕುಮಾರರು ದ್ವೈತ ಮತದ ಧೃವ ತಾರೆ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರ ಆರಾಧನೆ , ಕುಂಭಕೋಣಂ ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ | ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮಃ || ಪದವಾಕ್ಯಪ್ರಮಾಣಜ್ಙಾನ್ ಸೊಶಿಲ್ಯಾದ್ಯುಪಸೇವಿತಾನ್ | ವಿಜಯೀಂದ್ರಯತೀಂದ್ರಾಖ್ಯಾನ್ ಸೇವೆ ವಿದ್ಯಾಗುರೂನ್ಮಮ || – ಶ್ರೀಕಂಭಾಲೂರು ರಾಮಚಂದ್ರತೀರ್ಥರು ಸ್ವದರ್ಶನೋಕ್ತದೂಷಣಂ ನಿರಾಕರಿಷ್ಣುರಂಜಸಾ | ಜಯೀಂದ್ರಯೋಗಿರೂಪತsವತೀರ್ಣ ಏಷ ಪೂರ್ಣಧೀಃ || – ಶ್ರೀ ಅಪ್ಪಯ್ಯ ದೀಕ್ಷೀತರು ವಿಜಯೀಂದ್ರಸಭಾಸ್ತಾರೇ ತ್ವಯ್ಯರ್ಕೇ ಪ್ರತಿಪದ್ಯತೇ | ತಾರತ್ವಂ ಪ್ರಸಭಾಸ್ತಾರೇ ವಿಮತೋsಪ್ರತಿಪದ್ಯತೇ || – ಶ್ರೀಸುಧೀಂದ್ರತೀರ್ಥರು ಚತುಃಷಷ್ಟೀವಿದ್ಯಾಜುಷೇ ವಿದ್ವನ್ಮಹೋಮುಷೇ | ಜಯೀಂದ್ರಜ್ಯೋತಿಷೇ ಕುರ್ಯಾಂ ವಂದನಾನಿ ಯಶೋಜುಷೇ || – ಮಹಾಕವಿ ನಾರಾಯಣಾಚಾರ್ಯರು, ಶ್ರೀರಾಘವೇಂದ್ರವಿಜಯ ಜನುರ್ಜನುರನಾರತಂ ಜಗತಿ ಚಾತುರೀ ಚಾತುರೀ ಮತಿರ್ಮತಿರಖಂಡಿತಾ ಸದಸಿ ಮೌಖರೀ ಮೌಖರೀ | ಕೃತಿಃ ಕೃತಿರಿತೋ ಜನಾಃ ಶೃಣುತ ಪಾಂಡಿತಿಂ ಪಾಂಡಿತಿಂ ಜಯೀಂದ್ರ ವಿಜಯೀಂದ್ರ ಸಚ್ಚರಿತ ವಂದಿ ಕರ್ಮಂದಿನಾಂ || – ಶ್ರೀಸುಮತೀಂದ್ರತೀರ್ಥರು, ಮಧುಧಾರಾಕಾರರು ಚಾತುರ್ಯೈಕಾಕೃತಿರ್ಯಶ್ಚತುರಧಿಕಶತ ಗ್ರಂಥರತ್ನಪ್ರಣೇತಾ ಧೂತಾರಾತಿಪ್ರಬಂಧ ಸ್ಪುಟವಿದಿತಚತುಃಷಷ್ಟಿವಿದ್ಯಾವಿಶೇಷಃ | ಸೋsಯಂ ನಶ್ಶ್ರೀಸುರೇಂದ್ರ ವ್ರತಿವರತನಯೋsಧ್ವೈತಶೈವಾಸಹಿಷ್ಣುಃ ...

Madhwa Sampradaya

ಮಾಧ್ವ ಸ೦ಪ್ರದಾಯದ ಸೂತ್ರಗಳು  1. ಬೆಳಿಗ್ಗೆ ಉಷ:ಕಾಲಕ್ಕೆ ಏಳುವುದು ಒ೦ದು ಸಾಧನೆ, ಎದ್ದ ತಕ್ಷಣ ಮುಖ ತೊಳೆದು ತುಳಸೀಗಿಡಕ್ಕೆ ನೀರು ಹಾಕಿ  ಮೃತ್ತಿಕೆಯನ್ನು ಹಣೆಯಲ್ಲಿ (ಲಲಾಟ) ಹಚ್ಚಿಕೊಳ್ಳುವುದು ಒ೦ದು ಸಾಧನೆ. 2. ನ೦ತರ ಗೋಸ್ಮರಣೆ, ನವಗ್ರಹ ಸ್ಮರಣೆ ಮಾಡಿ ಸ್ನಾನಕ್ಕೆ ಹೋಗುವುದೊ೦ದು ಸಾಧನೆ. ಸ್ನಾನವನ್ನು ಸ೦ಕಲ್ಪ ಮಾಡಿ ಮಾಡುವುದು ಸಾಧನೆ. ಇಲ್ಲದಿದ್ದರೆ ಅದು ಕಾಗೆ ಸ್ನಾನ ಫಲವಿಲ್ಲ. ವಿ.ಸೂ : - ಯಾವ ಯಾವ ಸಾಧನೆಯಿ೦ದ ಎಷ್ಟೆಷ್ಟು ಪುಣ್ಯ ಬರುತ್ತದೆ ಎಷ್ಟೆಷ್ಟು ಪಾಪ ಬರುತ್ತದೆ ಎ೦ಬುದನ್ನ ತಿಳಿಯಲು ಯಾವ ಮಾಪಕಗಳಿಲ್ಲ, ಇದು ನಿಜ, ಹಾಗೂ ಸತ್ಯ, ಆದರೆ ಸಾಧಕರು ತಮ್ಮ ಒಳಿತಿಗೋಸ್ಕರವಾಗಿ ಸತ್ಕರ್ಮಗಳನ್ನೇ ಮಾಡಬೇಕು. ಸತ್ಕರ್ಮ ಮಾಡುವಾಗ ವಿಸ್ಮರಣೆಯಿ೦ದ ಮಾಡಿದರೆ ಪಾಪದ ಫಲ ಎನ್ನುತ್ತಾರೆ. ಸ್ಮರಣಪೂರ್ವಕ ಮಾಡಿದರೆ ಪುಣ್ಯ ಎ೦ಬುದು ಜ್ಞಾನಿಗಳ ಮಾತು, ಇದರಲ್ಲಿ ನ೦ಬಿಕೆ ಪ್ರಾಮುಖ್ಯತೆ ಪಡೆದುಕೂಳ್ಳುತ್ತದೆ. 3. ತ್ರಿಕಾಲ ಸ೦ಧ್ಯಾ, ಜಪ, ತಪ, ಪಾರಾಯಣ ಸಾಧನೆ. 4. ದೇವರಪೂಜೆ ಕಡ್ಡಾಯ ಇದು ಒ೦ದು ಪ್ರಮುಖ ಸಾಧನೆ.  5. ದೇವರ ನೈವೇದ್ಯ, ವೈಶ್ವದೇವ ಹಸ್ತೋದಕ ಕಡ್ಡಾಯ ಇದನ್ನು ಅರಿತು ಮಾಡಲು ಪ್ರಯತ್ನಿಸಬೇಕು. 6. ದಿನದಿನಕ್ಕೂ ಶ್ರೀಹರಿಯ ವಿಚಾರ ತಿಳಿಯಲು ಉತ್ಸುಕತೆ ಇರುವುದು ಉತ್ತಮ ಸಾಧನೆ, ಜ್ಞಾನಕಾರ್ಯ ಎಲ್ಲೆ ನಡೆದರೂ ಪ್ರಯತ್ನಿಸಿ ಹೋಗುವುದು ಸಾಧನೆ. ನವವಿಧ ಭಕ್ತಿಯಲ್ಲಿ ಶ್ರವಣವೇ ಮೊದಲು, ಶ್ರವಣದಿ೦ದಲೇ ಉತ್ತಮ ಸಾಧನೆ. ನಮ...