kaliyuga Lakshanagalu
ಕಲಿಯುಗದ ಬದಲಾವಣೆಗಳನ್ನು ಐದು ಸಾವಿರ ವರ್ಷಗಳ ಹಿಂದಿನ ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾಗಿದೆ
ಭಾಗವತ ಪುರಾಣ ಹದಿನೆಂಟು ಪುರಾಣಗಳಲ್ಲೇ ತುಂಬಾ ಪ್ರಸಿದ್ಧವಾದುದು. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಜ್ಞಾನ ಹಾಗೂ ಭಕ್ತಿ ಎರಡು ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ.
* ಕಲಿಯುಗದಲ್ಲಿ ದುಡ್ಡೇ ದೊಡ್ದಪ್ಪ; ಒಳ್ಳೇ ವ್ಯಕ್ತಿತ್ವ ಅಂದರೇನು? ಒಳ್ಳೆ ಗುಣ ಅಂದರೆ ಯಾವುದು? ನ್ಯಾಯ ಯಾವುದು? ಅನ್ನುವುದರ ತೀರ್ಮಾನವು ಹಣದಿಂದಲೇ ಆಗುತ್ತದೆ. – ಶ್ರೀಮದ್ ಭಾಗವತ 12.2.22.
* ಗಂಡು-ಹೆಣ್ಣು ಬರೀ ದೈಹಿಕ ಸುಖಕ್ಕೋಸ್ಕರ ಒಟ್ಟಿಗೆ ವಾಸ ಮಾಡುತ್ತಾರೆ; ವ್ಯಾಪಾರದಲ್ಲಿ ಮೋಸವೇ ಮುಖ್ಯವಾಗುತ್ತದೆ; ಜನಿವಾರ ಹಾಕಿ ಕೊಂಡಿದ್ದರೆ ಸಾಕು, ಅವನನ್ನು ಬ್ರಾಹ್ಮಣ ಅಂತ ಕರೆಯುತ್ತಾರೆ – ಶ್ರೀಮದ್ ಭಾಗವತ 12.2.33.
* ಭೂಮಿಯ ಮೇಲೆ ಭ್ರಷ್ಟರ ಜನಸಂಖ್ಯೆ ಹೆಚ್ಚಾಗಿ, ಯಾರು ಹೆಚ್ಚು ಬಲಿಷ್ಠರು ಅಂತ ತೋರಿಸಿ ಕೊಳ್ಳುವರೋ ಅವರೇ ರಾಜಕೀಯವಾಗಿ ಮೇಲಕ್ಕೆ ಏರುತ್ತಾರೆ – ಶ್ರೀಮದ್ ಭಾಗವತ 12.2.74.
* ಎಲ್ಲೆಲ್ಲೂ ಚಳಿ, ಗಾಳಿ, ಸೆಕೆ, ಮಳೆ ಮತ್ತು ಮಂಜುಗಳಿಂದ ಜನರಿಗೆ ತೊಂದರೆಯಾಗುತ್ತದೆ; ಜಗಳ, ಹಸಿವು, ಬಾಯಾರಿಕೆ, ರೋಗ-ರುಜಿನಗಳು, ಆತಂಕ ಹೆಚ್ಚಾಗುತ್ತದೆ – ಶ್ರೀಮದ್ ಭಾಗವತ 12.2.105.
*ವಯಸ್ಸಾದ ತಂದೆ ತಾಯಿಗಳನ್ನು ಮಕ್ಕಳು ನೋಡಿ ಕೊಳ್ಳುವುದಿಲ್ಲ – ಶ್ರೀಮದ್ ಭಾಗವತ 12.3.426.
* ಊರುಗಳಲ್ಲಿ ಕಳ್ಳರೇ ತುಂಬಿರುತ್ತಾರೆ; ವೇದಗಳಿಗೆ ನಾಸ್ತಿಕರು ಅರ್ಥ ಕೊಡುತ್ತಾರೆ; ರಾಜಕೀಯ ನಾಯಕರು ಪ್ರಜೆಗಳನ್ನು ಹೆಚ್ಚು-ಕಡಿಮೆ ತಿಂದು ಹಾಕುತ್ತಾರೆ; ಚಿಂತಕರು ಅನ್ನಿಸಿ ಕೊಳ್ಳುವವರು ತಮ್ಮ ಹೊಟ್ಟೆ ಪೂಜೆ ಮಾಡಿ ಕೊಳ್ಳುತ್ತಾರೆ. – ಶ್ರೀಮದ್ ಭಾಗವತ 12.3.327.
* ಸೇವಕರು ದುಡ್ಡಿಗೋಸ್ಕರ ಮಾತ್ರ ಕೆಲಸ ಮಾಡುತ್ತಾರೆ. ಕೆಲಸ ಮಾಡದೇ ಇರುವ ಸೇವಕರನ್ನು ಯಜಮಾನ ಒಂದು ನಿಮಿಷ ಕೂಡ ಇಟ್ಟು ಕೊಳ್ಳುವುದಿಲ್ಲ – ಶ್ರೀಮದ್ ಭಾಗವತ 12.3.368.
* ನಾಲ್ಕು ಕಾಸಿಗಾಗಿ ಜನ ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ; ದುಡ್ಡಿಗಾಗಿ ತಾವೂ ಜೀವ ಕೊಡಲಿಕ್ಕೆ ಸಿದ್ಧ ಇರುತ್ತಾರೆ, ತಮ್ಮ ನೆಂಟರಿಷ್ಟರನ್ನು ಸಾಯಿಸಲಿಕ್ಕೂ ಸಿದ್ಧ ಇರುತ್ತಾರೆ – ಶ್ರೀಮದ್ ಭಾಗವತ 12.3.419.
* ದೇವರ ಹೆಸರಿನಲ್ಲಿ ಕಾವಿ ಬಟ್ಟೆ ಹಾಕಿ ಕೊಂಡು ಜನ ದುಡ್ಡು ಮಾಡುತ್ತಾರೆ; ಧರ್ಮ ಅಂದರೆ ಏನು ಎಂದು ಗೊತ್ತಿಲ್ಲದವರು ದೊಡ್ಡ ದೊಡ್ಡ ಸ್ಥಾನಗಳಿಗೆ ಏರಿ ಧರ್ಮದ ಬಗ್ಗೆ ಪ್ರವಚನ ಕೊಡುತ್ತಾರೆ – ಶ್ರೀಮದ್ ಭಾಗವತ12.3.3810.
* ಮನುಷ್ಯನ ಆಯಸ್ಸು 50 ವರ್ಷಕ್ಕೆ ಇಳಿಯುತ್ತದೆ – ಶ್ರೀಮದ್ ಭಾಗವತ 12.2.1111
* ಧರ್ಮ, ಸತ್ಯ, ಶುಚಿತ್ವ, ತಾಳ್ಮೆ, ದಯೆ, ಕರುಣೆ, ದೈಹಿಕ ಶಕ್ತಿ ಮತ್ತು ನೆನಪಿನ ಶಕ್ತಿ ದಿನೇ ದಿನೇ ಕುಂದುತ್ತದೆ; ಇದು ಕಲಿಯ ಪ್ರಭಾವ – ಶ್ರೀಮದ್ ಭಾಗವತ 12.2.1
*ಎಲ್ಲಾ ಎಷ್ಟು ಸರಿಯಾಗಿ ಹೇಳಿದ್ದಾರೆ ಅನಿಸುವುದಿಲ್ಲವಾ ನಿಮಗೆ? ಏನೇ ಇರಲಿ, ತುಂಬ ಬೇಜಾರು ಮಾಡಿ ಕೊಳ್ಳ ಬೇಡಿ. ಕೃಷ್ಣನ ನಾಮ ಸ್ಮರಣೆಯಿಂದ ಭವಬಂಧನದ ಜಂಜಾಟದಿಂದ ಮುಕ್ತಿ ಸಿಗುತ್ತದೆ ಎನ್ನುವುದು ಕೂಡ ಅದೇ ಶ್ರೀಮದ್ಭಾಗವತದಲ್ಲಿ ಬರೆದಿದೆ (12.2.51)....
Comments
Post a Comment